ಕ್ಷಯ: ಭಾರತ ವಿಶ್ವಕ್ಕೇ ನಂ. 1
ವಿಶ್ವಸಂಸ್ಥೆ / ಹೊಸದಿಲ್ಲಿ:
'ಟಿಬಿ' ಎಂದೇ ಕುಖ್ಯಾತಿಗೀಡಾಗಿರುವ
ಕ್ಷಯರೋಗದ ನಿಯಂತ್ರಣಕ್ಕೆ ಕೇಂದ್ರ
ಸರಕಾರ ಏನೆಲ್ಲ ಕ್ರಮ ಕೈಗೊಳ್ಳುತ್ತಿದ್ದರೂ
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ
ರೋಗ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿರುವ
ಸಂಗತಿ ಬೆಳಕಿಗೆ ಬಂದಿದೆ.
2014ನೇ ಸಾಲಿನಲ್ಲಿ ವಿಶ್ವದ 96 ಲಕ್ಷ
ಮಂದಿಯಲ್ಲಿ ಕ್ಷಯ ರೋಗ
ಕಾಣಿಸಿಕೊಂಡಿದೆ. ಆ ಪೈಕಿ ಆಗ್ನೇಯ ಏಷ್ಯಾ
ಮತ್ತು ಪಶ್ಚಿಮ ಪೆಸಿಫಿಕ್ ವಲಯದ ಪಾಲು ಶೇ. 58.
ಅದಕ್ಕೆ ಭಾರತದ ಕೊಡುಗೆ ಬರೋಬ್ಬರಿ ಶೇ. 23ರಷ್ಟಿದೆ.
ಇಂಡೋನೇಷ್ಯಾದಲ್ಲಿ ಶೇ. 10,
ಚೀನದಲ್ಲಿ ಶೇ. 10ರಷ್ಟು ಪ್ರಕರಣಗಳು
ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ
ಸಂಸ್ಥೆಯ ಕ್ಷಯರೋಗಕ್ಕೆ
ಸಂಬಂಧಿಸಿದ ವರದಿ ತಿಳಿಸಿದೆ.
ನೈಜೀರಿಯಾ, ಪಾಕಿಸ್ಥಾನ ಹಾಗೂ ದಕ್ಷಿಣ
ಆಫ್ರಿಕಾದಲ್ಲೂ ಕ್ಷಯರೋಗ ಪ್ರಕರಣಗಳು
ಪತ್ತೆಯಾಗಿವೆ. ಕಳೆದ ವರ್ಷ ಒಟ್ಟಾರೆ
ವಿಶ್ವಾದ್ಯಂತ ಈ ರೋಗಕ್ಕೆ 15 ಲಕ್ಷ
ಮಂದಿ ಬಲಿಯಾಗಿದ್ದಾರೆ. ಆ ಪೈಕಿ 1.40 ಲಕ್ಷ
ಮಕ್ಕಳೂ ಸೇರಿದ್ದಾರೆ.
ಭಾರತದಲ್ಲಿ ನಿತ್ಯ ಕ್ಷಯ ರೋಗದಿಂದಾಗಿ
ಒಂದು ಸಾವಿರ ಮಂದಿ
ಸಾವನ್ನಪ್ಪುತ್ತಿದ್ದಾರೆ ಎಂಬ ಅಂದಾಜಿದೆ.
ಈ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರ
ಪ್ರತಿ ವರ್ಷ 500 ಕೋಟಿ ರೂ. ವ್ಯಯಿಸುತ್ತಿದೆ.
Comments
Post a Comment