ಅದ್ಭುತ , 10 ಲಕ್ಷ ಮೈಲು ದೂರದಿಂದ ಭೂ ಪರಿಭ್ರಮಣ : ವಿಡಿಯೋ ನೋಡಿ


ವಾಷಿಂಗ್ಟನ್:
ನಾಸಾ ಒಂದು
ಹೊಸ ವೆಬ್ಸೈಟನ್ನು
ಚಾಲನೆಗೊಳಿಸಿದೆ . ಅದರಲ್ಲಿ ನೀವು
ಸೂರ್ಯನ ಬೆಳಕಿಗೆ ಮುಖ ಮಾಡಿರುವ ಭೂಮಿಯ
ಪಾರ್ಶ್ವವನ್ನು ಅದು ದಿನಂಪ್ರತಿ
ಪರಿಭ್ರಮಣ ಗೈವ ಗತಿಯಲ್ಲಿ ಕಾಣಬಹುದಾಗಿದೆ .
ಅಂದ ಹಾಗೆ ಇದರಲ್ಲಿ ಒಂದ
ವಿಶೇಷವಿದೆ. ನಾಸಾದ ಈ ವೆಬ್ಸೈಟ್ನಲ್ಲಿ
ನೀವು ಕಾಣುವ ತಿರುಗುವ ಭೂಮಿಯ ನೇರ
ಚಿತ್ರವು ಹತ್ತು ಲಕ್ಷ ಮೈಲು ದೂರ
ಬಾಹ್ಯಾಕಾಶದಿಂದ ತೆಗೆಯಲ್ಪಡುತ್ತಿರುವ
ಚಿತ್ರವಾಗಿರುತ್ತದೆ !
ಅಮೆರಿಕದ ಬಾಹ್ಯಾಕಾಶ ಸಂಶೋಧನ
ಸಂಸ್ಥೆ ನಾಸಾ ದಿನ ನಿತ್ಯ ಭೂ
ಪರಿಭ್ರಮಣದ ಡಜನ್ಗಟ್ಟಲೆ
ವರ್ಣರಂಜಿತ ಚಿತ್ರಗಳನ್ನು ತನ್ನ
ವೆಬ್ಸೈಟಿಗೆ ಹಾಕುತ್ತಲೇ ಇರುತ್ತದೆ. ಈ ಚಿತ್ರಗಳು
ನಾಸಾದ ಎಪಿಕ್ ( ಅರ್ತ್
ಪೊಲಿಕ್ರೋಮ್ಯಾಟಿಕ್
ಇಮೇಜಿಂಗ್ ) ಕ್ಯಾಮರಾ ಭೂ ಪರಿಗ್ರಹಣ
ಚಿತ್ರ ಸೆರೆ ಹಿಡಿಯುವ 12 ರಿಂದ 36 ತಾಸು
ಮುನ್ನವೇ ಸೆರೆಹಿಡಿಯಲ್ಪಟ್ಟದ್ದಾಗಿರುತ್ತವೆ .
Daily views of Earth from 1
million miles away now
available on our new
website. Take a look : http: //
t. co /7 dQFwMjsfe
pic. twitter. com /
NH 1 e 1 Pwgag
— NASA (@ NASA) October
19 , 2015
ನಾಸಾದ ಈ ನೇರ ಚಿತ್ರಗಳಿಂದಾಗಿ
ದೈನಂದಿನ ಪರಿಭ್ರಮಣದಲ್ಲಿ ಭೂಮಿಯು
ಹತ್ತು ಲಕ್ಷ ಮೈಲುಗಳಾಚೆಯಿಂದ ಹೇಗೆ
ಕಾಣಿಸುತ್ತದೆ ಎಂಬುದನ್ನು ನೋಡಬಹುದಾಗಿದೆ .
ಮಾತ್ರವಲ್ಲದೆ ಭೂಮಿಯನ್ನು ವಿವಿಧ
ಪಾರ್ಶ್ವಗಳಿಂದಲೂ ಕಾಣಬಹುದಾಗಿದೆ .
ನಾಸಾದ ಈ ಹೊಸ ವೆಬ್ಸೈಟಿನಲ್ಲಿ
ಎಪಿಕ್ ಇಮೇಜ್ಗಳ ಸಂಗ್ರಹಾಗಾರವೂ ಇದ್ದು
ಅದನ್ನು ದಿನ ಮತ್ತು ಖಂಡಗಳ
ಆಧಾರದಿಂದಲೂ ಶೋಧಿಸಬಹುದಾಗಿದೆ .

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK