ವಿಶ್ವ ಬ್ಯಾಂಕ್ ಉದ್ಯಮ ಸ್ನೇಹಿ ಪಟ್ಟಿ: 130ಕ್ಕೇರಿದ ಭಾರತ:
ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರಗಳ
ಪಟ್ಟಿಯಲ್ಲಿ 189 ರಾಷ್ಟ್ರಗಳ ಪೈಕಿ ಭಾರತ 130ನೇ
ಸ್ಥಾನಕ್ಕೆ ಜಿಗಿದಿದೆ.
2014ನೇ ಸಾಲಿನಿಂದ ಈ ವರ್ಷ ಭಾರತ 12 ಸ್ಥಾನ
ಮೇಲೇರಿದೆ ಎಂದು ವಿಶ್ವ ಬ್ಯಾಂಕ್ ವರದಿ
ತಿಳಿಸಿದೆ. ಹೂಡಿಕೆಯಲ್ಲಿ ಭಾರತವನ್ನು ಅಗ್ರ ಸ್ಥಾನಕ್ಕೆ
ಕೊಂಡೊಯ್ಯ
ಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ
ಆಕಾಂಕ್ಷೆಗೆ ಈ ವರದಿ ಸಕಾರಾತ್ಮಕವಾಗಿದೆ.
'ಬೃಹತ್ ಆರ್ಥಿಕತೆಯ ಭಾರತ, ಉದ್ಯಮ ಸ್ನೇಹಿ
ಪಟ್ಟಿಯಲ್ಲಿ 12 ಅಂಕಗಳಷ್ಟು ಮೇಲೇರುವುದು
ಗಣನೀಯ ಸಾಧನೆ,' ಎಂದು
ವಿಶ್ವಸಂಸ್ಥೆಯ ಮುಖ್ಯ ಆರ್ಥಿಕತಜ್ಞ,
ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಬಿಡುಗಡೆ ಮಾಡುವ ಈ
ಪಟ್ಟಿಯಲ್ಲಿ ಭಾರತ ಪ್ರತಿ ವರ್ಷ 50 ಅಗ್ರ
ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು
ಎಂಬುದು ಪ್ರಧಾನಿ ಮೋದಿ ಅವರ ಬಯಕೆ.
ಸದ್ಯ ಈ ಪಟ್ಟಿಯಲ್ಲಿ 6 ಅಂಕಗಳಷ್ಟು
ಜಿಗಿತ ಕಂಡಿರುವ ಚೀನಾ 84
ಸ್ಥಾನದಲ್ಲಿದೆ. 10 ಅಂಕಗಳ
ಕುಸಿತದೊಂದಿಗೆ ಪಾಕಿಸ್ತಾನ 138
ಸ್ಥಾನಕ್ಕೆ ತಲುಪಿದೆ.
ಸಿಂಗಾಪುರ, ನ್ಯೂಜಿಲೆಂಡ್, ಡೆನ್ಮಾರ್ಕ್
ಮೊದಲ ಮೂರು ಸ್ಥಾನದಲ್ಲಿದ್ದರೆ,
ದಕ್ಷಿಣ ಸೂಡಾನ್, ಲಿಬಿಯಾ, ಎರಿಟ್ರಿಯಾ ಕಡೆಯ
ಮೂರು ಸ್ಥಾನಗಳಲ್ಲಿವೆ.
Comments
Post a Comment