15 ವರ್ಷಗಳ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೀತಾ
15 ವರ್ಷಗಳ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೀತಾ
ನವದೆಹಲಿ, ಅ.26-ಪಾಕಿಸ್ತಾನದಲ್ಲಿ15 ವರ್ಷಗಳಿಂದ ಕರಾಚಿಯ ಇಧಿ ಫೌಂಡೇಶನ್‌ನಲ್ಲಿ ಆಶ್ರಯ ಪಡೆದು ಪೋಷಕರ ಮಡಿಲು ಸೇರಲು ಕಾತರಿಸುತ್ತಿದ್ದ ಭಾರತ ಮೂಲದ ಗೀತಾ ಇಂದು ವಿಶೇಷ ವಿಮಾನದಲ್ಲಿ ಇಂದು ಬೆಳಗ್ಗೆ 10.40ಕ್ಕೆ ಇಲ್ಲಿನ ಇಂದಿರಾಗಾಂಧಿ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ಭಾರತ ಸರ್ಕಾರದಿಂದ ವಿಶೇಷ ಅತಿಥಿಯಂತೆ ಆಕೆಯನ್ನು ಸ್ವಾಗತಿಸಿದೆ. ಇಂದು ಬೆಳಗ್ಗೆ ತಾನು ನೆಲೆಸಿದ್ದ ಫೌಂಡೇಶನ್‌ನ ನಾಲ್ವರು ಗೆಳತಿಯರೊಂದಿಗೆ ಕರಾಚಿ ವಿಮಾನ ನಿಲ್ದಾಣದಿಂದ ನವದೆಹಲಿಗೆ ಗೀತಾ ಆಗಮಿಸಿದಾಗ ಭಾರತದಲ್ಲಿ ಪಾಕಿಸ್ತಾನ ರಾಯಭಾರಿಯಾಗಿರುವ ಮಂಜೂರು ಆಲಿ ಮೆನನ್ ಸ್ವಾಗತಿಸಿದರು.
ಗೀತಾ ಅವರ ಪೋಷಕರೆಂದು ಹೇಳಿಕೊಂಡಿರುವ ಜನಾರ್ದನ್ ಮೆಹ್ತಾ ಅವರ ಕುಟುಂಬ ಸದಸ್ಯರು ಕೂಡ ಜೊತೆಗಿದ್ದರು. ಕಳೆದ ಒಂದು ವರ್ಷದಿಂದ ಭಾರತದಲ್ಲಿ ಈಕೆಯ ಪೋಷಕರನ್ನು ಹುಡುಕಲು ಕೇಂದ್ರ ಸರ್ಕಾರ ಹಾಗೂ ಪಾಕಿಸ್ತಾನದ ಮಾನವ ಹಕ್ಕು ಸಂಘಟನೆ ಸಾಕಷ್ಟು ಪ್ರಯಾಸ ಪಡಲಾಗಿತ್ತು. ಕೊನೆಗೆ ಬಿಹಾರದಲ್ಲಿರುವ ಕುಟುಂಬವೊಂದರ ಛಾಯಾಚಿತ್ರ ತೋರಿಸಿದಾಗ ಆಕೆ ತನ್ನ ಪೋಷಕರು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಕರೆತರಲಾಗಿದೆ. ಪ್ರಸ್ತುತ ಗೀತಾಳನ್ನು ತಮ್ಮ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಜನಾರ್ದನ್ ಅವರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಖಾತರಿ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಇದು ಸಾಬೀತಾದರೆ ಆಕೆಯನ್ನು ಪೋಷಕರ ಮಡಿಲಿಗೆ ಹಸ್ತಾಂತರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
Comments
Post a Comment