ಕಾವೇರಿ ನದಿ ತುಲಾ ಸಂಕ್ರಮಣ - ತಲಕಾವೇರಿಯ ತೀರ್ಥೋದ್ಭವ ಈ ಬಾರಿ ಸಂಜೆ ವೇಳೆಯಲ್ಲಿ(ಅ.17ರ ಸಂಜೆ 6 ಗಂಟೆ 7 ನಿಮಿಷಕ್ಕೆ) ತೀರ್ಥೋದ್ಭವ.:-

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಈ ಶುಭ ದಿನವು ಸಾಧಾರಣವಾಗಿ ಆಂಗ್ಲದ ಅಕ್ಟೋಬರ್ ತಿಂಗಳಿನ ಅಂದರೆ ಈ ಈ ಭಾರಿ 17ನೇ ದಿನಾಂಕದಂದು ಬಂದಿದೆ. ಈ ಪುಣ್ಯ ದಿನದಂದು ಗಂಗೆಯೇ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧಾರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ.
ಇದನ್ನೆ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲ್ಲಿ ಮಿಕ್ಕ ಆರೂ ಪುಣ್ಯ ನದಿಗಳು (ಅಂದರೆ - ಗಂಗೆ, ಯಮುನೆ, ಗೋದಾವರೀ, ಸರಸ್ವತೀ, ನರ್ಮದೆ ಮತ್ತು ಸಿಂಧು) ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರಿ ತಾವು ಮನುಷ್ಯರನ್ನು ತೊಳೆದು ಪ್ರಾಪ್ತಿ ಮಾಡಿಕೊಂಡ ಕರ್ಮಗಳನ್ನು ಕಳೆದುಕೊಳ್ಳುತ್ತಾರೆಂಬ ಪ್ರತೀತಿಯಿದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವವು ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆಯಾಗಿದೆ.
ತೀರ್ಥೊದ್ಭವದ ದಿನ ತಲಕಾವೇರಿಯಲ್ಲಿ ಮೀಯುವುದರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಭಕ್ತರ ಧೃಢ ನಂಬಿಕೆ. ತೀರ್ಥೊದ್ಭವದ ದಿನ ತಲಕಾವೇರಿಯ ಕುಂಡದ ನೀರನ್ನು ಶೇಖರಿಸಿಕೊಂಡು ತಮ್ಮ ಬಂಧು ಮಿತ್ರರಲ್ಲಿ ವಿತರಿಸುವ ಆಚರಣೆಯೂ ವಾಡಿಕೆಯಲ್ಲಿದೆ. ಮೃತ್ಯು ಶಯ್ಯೆಯಲ್ಲಿರುವ ವ್ಯಕ್ತಿಗಳಿಗೆ ಈ ನೀರಿನ ಹನಿಗಳನ್ನು ಕುಡಿಸಿದಲ್ಲಿ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಯೆಂದೂ ಆಸ್ತಿಕರು ನಂಬುತ್ತಾರೆ.
ತಮಿಳು ನಾಡಿನ ಜನರಲ್ಲಿ ತುಲಾ ಮಾಸದ ಕಾವೇರಿ ಸ್ನಾನವು ಸರ್ವ ಪಾಪಗಳನ್ನು ಪರಿಹಾರ ಮಾಡುತ್ತದೆ ಎಂಬ ನಂಬಿಕೆ ಇರುವುದರಿಂದ, ಇಡೀ ತುಲಾ ಮಾಸದಲ್ಲಿ ಜನರು ಕಾವೇರಿಯ ದಡಗಳಲ್ಲಿರುವ ಪವಿತ್ರ ಸ್ಥಳಗಳನ್ನು ಸೇರಿ ಅಲ್ಲಿ ಸ್ನಾನವನ್ನಾಚರಿಸಿ ದೇವತಾ ದರ್ಶನ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ.

ಈ ಬಾರಿ ಸಂಜೆ ವೇಳೆಯಲ್ಲಿ(ಅ.17ರ ಸಂಜೆ 6 ಗಂಟೆ 7 ನಿಮಿಷಕ್ಕೆ) ತೀರ್ಥೋದ್ಭವ ಜರುಗಲಿದ್ದು, ಭಕ್ತಾಧಿಗಳು ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಅಗತ್ಯ ಬಸ್ ಸೌಲಭ್ಯ ಒದಗಿಸುವುದು. ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ.
ಭಾಗಮಂಡಲದಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಶುಲ್ಕ ವಸೂಲಾತಿ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ವಾಹನಗಳ ಮಾಲೀಕರು ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದು ಕೋರಿದ್ದಲ್ಲಿ ಅಂತಹ ವಾಹನಗಳಿಗೆ ಮಾತ್ರ ಪಾರ್ಕಿಂಗ್ ಶುಲ್ಕ ಸಂಗ್ರಹಿಸಬಹುದಾಗಿದೆ. ಆದರೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಕಿರಿಕಿರಿ ಆಗದಂತೆ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ತಲಕಾವೇರಿ ಜಾತ್ರೆ ಪ್ರಯುಕ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಆರೋಗ್ಯ ಸಂಬಂಧ ವಿಶೇಷ ಗಮನ ಹರಿಸಬೇಕಿದೆ. ಅಗತ್ಯ ನುರಿತ ವೈದ್ಯರು ಹಾಗೂ ದಾದಿಯರನ್ನು ನಿಯೋಜಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರೂ.

ಕಾವೇರಿ ಮೈಸೂರಿನ ಬಳಿ ಇರುವ ಶಿವನಸಮುದ್ರ ಜಲಪಾತ ಮೈಸೂರಿನ ಬಳಿ ಇರುವ ಶಿವನಸಮುದ್ರ ಜಲಪಾತ
ಉಗಮ ತಲಕಾವೇರಿ ಕೊನೆ ಬಂಗಾಳ ಕೊಲ್ಲಿ ಮೂಲಕ ಹರಿಯುವ ದೇಶಗಳು ಭಾರತ (ಕರ್ನಾಟಕ ಮತ್ತು ತಮಿಳುನಾಡು) ಉದ್ದ 765 ಕಿ.ಮಿ.
ಜಲನಯನ ಪ್ರದೇಶ 27,700 ಚದುರ ಕಿ.ಮಿ.

ಕಾವೇರಿ ನದಿಯ ಹರಿವಿನ ದಾರಿ:ಜಲಾನಯನ ಪ್ರದೇಶ 81,155 km2(31,334 ಚದರ ಮೈಲಿ); ನದಿಯ ಉದ್ದ 765 km/475 ಮೈಲಿ
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು 765 ಕಿ.ಮಿ.ಗಳಷ್ಟು ಉದ್ದವಾಗಿದೆ.

ಕಾವೇರಿ ಜಲಾನಯನ ಪ್ರದೇಶ 27,700 ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಧ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.

ಪುರಾಣ ಮೂಲದಲ್ಲಿ ಕಾವೇರಿ ಚರಿತ್ರೆ

ಬ್ರಹ್ಮನ ಮಗಳಾದ ಲೋಪಾಮುದ್ರೆಯು ಭೂಲೋಕದಲ್ಲಿ ಲೊಕೊದ್ಧಾರಕ್ಕಾಗಿ ವಾಸಿಸುತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವನ್ನು ಪಡೆದನು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು.
ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ, ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದನೆಂದು ನಂಬಲಾಗಿದೆ. ಅಗಸ್ತ್ಯ ಮಹಾಮುನಿಯು ಲೋಪಾಮುದ್ರೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾನೆ. ಅದಕ್ಕೆ ಲೋಪಾಮುದ್ರೆ ಮೊದಲು ನಿರಾಕರಿಸುತ್ತಾಳೆ.
ನಂತರ ದಾರಿಯಲ್ಲಿ ತೆರಳುತ್ತಿರುವ ವೇಳೆ ಅಗಸ್ತ್ಯ ಮಹಾಮುನಿ ಭೇಟಿಯಾದಾಗ, ಲೋಪಾಮುದ್ರೆಯು ತನ್ನನ್ನು ಎಂದೂ ಕಾಯಿಸಬಾರದು, ಕಾಯಿಸಿದರೆ ನಾನು ಸ್ವತಂತ್ರಳು. ಇದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಅದಕ್ಕೆ ಓಪ್ಪಿದ ಅಗಸ್ತ್ಯಮುನಿಯು ಲೋಪಾ ಮುದ್ರೆಯನ್ನು ಮದುವೆಯಾಗುತ್ತಾನೆ.
ಒಂದು ದಿನ ಅಗಸ್ತ್ಯಮುನಿಯು ತನ್ನ ಶಿಷ್ಯಂದಿರಿಗೆ ಪಾಠ ಮಾಡುತ್ತಾ ತಲ್ಲೀನನಾಗಿ ಸಮಯವನ್ನು ಮರೆತು ಬಿಡುತ್ತಾನೆ. ಆಗ ಲೋಪಾಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲದಲ್ಲಿ ಹಾರಿ ನದಿಯಾಗಿ ಹರಿಯುತ್ತಾಳೆ. ಅವಳು ಕವೇರನೆಂಬ ಮುನಿಯ ಮಗಳಾದು ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ.
ಇನ್ನೊಂದು ಕಥೆಯ ಪ್ರಕಾರ ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು. ಆ ಕಥೆ ಹೀಗಿದೆ :- ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ,ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು.
ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು. ವಾಸ್ತವವಾಗಿ, ಆ ಬಾಲಕ ವೇಷ ಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿ ಕೊಳ್ಳುವುದು ಸಭಾಪರ್ವದಲ್ಲಿ ಬರುತ್ತದೆ.

ನದಿಯ ಪಾತ್ರ

ಕೊಡಗಿನ ಬಳಿಯ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿ ನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ 320 ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ.

ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ 1902 ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕರ್ನಾಟಕದಲ್ಲಿ ಕಾವೇರಿ

ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ 72 ಮೈಲಿಗಳಷ್ಟು ಉದ್ದವಿದ್ದು,10,000 ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.

ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್‍ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.

ತಮಿಳು ನಾಡಿನಲ್ಲಿ ಕಾವೇರಿ

ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು