ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ನಾಳೆ 27-10-2015' TOMORROW ADI KAVI VALMIKI JAYANTHI.


ಭಗವಂತನ ನಾಮ ಸ್ಮರಣೆಯು  ಎಂಥ ಪಾಪವನ್ನೂ ತೊಳೆಯ ಬಲ್ಲದು  ತಿಳಿಯದೆ  ಉಚ್ಚರಿಸಿದರೂ ಭಗವನ್ನಾನವು ಪುಣ್ಯ  ಪ್ರದವಾಗುತ್ತದೆ. ನಮ್ಮ ದೇಶದ ಆದಿ ಕಾವ್ಯವೆನಿಸಿದ ಶ್ರೀ ಶ್ರೀ ಮದ್ರಾಮಾಯಣದ ಕವಿ ವಾಲ್ಮೀಕಿಯ  ಕಥೆಯೇ  ಇದಕ್ಕೆ ಸಾಕ್ಷಿ .

ಪ್ರಚೇತಸನ ಮಗ ವಾಲ್ಮೀಕಿ  ಕಾಡಿನಲ್ಲಿ ಬೇಡರ ಸಂಗಡ ಸೇರಿ  ಆತನು ದಾರಿಗಳ್ಳನಾಗಿದೆ. ಹಾಗೂ ಕಾಡಿನಲ್ಲಿ ಬೇಟೆಯಾಡಿ ಪ್ರಾಣಿ ವಧೆ ಮಾಡಿ  ಬೇಯಿಸಿ  ತಿನ್ನುತ್ತಿದ್ದನು  ಪಮ್ಮೆ ಸಪ್ತರ್ಷಿಗಳು ಬಂದಾಗ ಅವರನ್ನು  ಅಡ್ಡಗಟ್ಟಿದ  ಅವರು ನೀನುಮಾಡುವ ಕಾಯಕ  ಪಾಪದ ಕಾರ್ಯ ಈ ಪಾಪ ಲೇಸಗಳಿಗೆ  ನೀನೇ  ಫಲವನ್ನಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.  ಸಂಸಾರ ನಿರ್ವಹಣೆಗಾಗಿ ತಾನು  ಈ ಕೃತ್ಯವನ್ನು  ಮಾಡಿದುದರಿಂದ ಈ ಪಾಪದ  ಫಲದಲ್ಲಿ  ತನ್ನ  ಹೆಂಡತಿ  ಮಕ್ಕಳಿಗೂ ಸಮ ಪಾಲಿದೆ.  ಎಂದು ಉತ್ತರಿಸುತ್ತಾನೆ.  ಹಾಗಾದರೆ ಕೇಳಿ ಕೊಂಡು ಬಾ ಎನ್ನಲಾಗಿ ಸ್ವಾಮಿ ಸ್ವಲ್ಪ ಹೊತ್ತು  ನೀವೆಲ್ಲೌ ಇರಿ ಮನೆಗೆ ಹೋಗಿ  ವಿಚಾರಿಸಿಕೊಂಡು  ಬರುತ್ತೇನೆ.ಎಂದು  ಮನೆಗೆ ಹೋಗಿ ನಾನು ಮಾಡುವ  ಕೆಲಸದಲ್ಲಿ ಪಾಪದ ಕೆಲಸವಿದೆ.  ಅಂತೆ ಅದರಲ್ಲಿ ನೀವು ಪಾಲುದಾರರಾಗುತ್ತೀರಾ? ಎಂದು ಎಲ್ಲರನ್ನು ಕೇಳುತ್ತಾನೆ. ಅವರು ಅದಕ್ಕೆ ಬಪ್ಪುವದಿಲ್ಲ.

ಆಗ ಬೇಡನ ಮಗನನ್ನು ಸಂಸಾರ ಬಂಧನದಿಂದ ಮುಕ್ತನಾಗಿ ವೈರಾಗ್ಯದ ಕಡೆಗೆ ತಿರುಗುತ್ತದೆ. ಮರಳಿ ಸಪ್ತರ್ಷಿಗಳ  ಬಳಿ ಬಂದು  ಇದಕ್ಕೆ ಪರಿಹಾರವೇನು  ಎಂದು ಕೇಳಲಾಗಿ ವಾರದ ಮಹರ್ಷಿಗಳು  ತುಂಬಾ ಸರಳವಾದ ಮಂತ್ರವನ್ನು ಹೇಲಿಕೊಡುತ್ತೇನೆ ನೀನು ರಾಮ ನಾಮ  ಜಪ ಮಾಡು ಎನ್ನುತ್ತಾರೆ. ಆದರೆ ಅವನ ನಾಲಿಗೆಯಲ್ಲಿ ರಾಮ ಎಂಬ ಎರಡಕ್ಷರಗಳು ಹೊರ ಬರಲಾರದೇ  ಆಗ ನಾರದರು.  ಈ ಕಾಡಿನಲ್ಲಿ  ನಿನಗೆ ಪರಿಚಯವಿರುವುದು ಮರ ಅದನ್ನೇ ಕುರಿತು ಧ್ಯಾನ ಮಾಡು ಎಂದು ಹೇಳುತ್ತಾರೆ.  ಮರಾಮರಾಮರಾ  ಅನ್ನುವುದೇ ರಾಮ  ತಾಮ ರಾಮ ಎಂದು  ಮಂತ್ರ  ಜಪದಿಂದ ದಿನಗಳು ವಾರಗಳು ತಿಂಗಳಾಗಿ  ವರ್ಷಗಳಾಗಿ ಉರುಳಿ  ಮೈ ಕೃಶಗೊಂಡಿತು. ಮೈ  ಮೇಲೆ ಹುತ್ತ ಬೆಳೆಯಿತು. ಸಪ್ತರ್ಷಿಗಳು  ಮತ್ತೆ ಬಂದು  ಆತನನ್ನು ಎಚ್ಚರಿಸಿದಾಗ ಅವನಿಗೆ ಹೊಸ ಜನ್ಮ ಬಂದಿತು. ವಾಲ್ಮೀಕಿ  ಎಂದರೆ ಹುತ್ತ  ವಲ್ಮೀಕದಿಂದ ಹೊರ ಬಂದವನಾದ ಕಾರಣ ಅವನು ವಾಲ್ಮಿಕಿ ಎನಿಸಿಕೊಂಡ.

ವಾಲ್ಮೀಕಿ ಒಂದು ದಿನ ತಮಸಾ ನದಿಗೆ ಸ್ನಾನಕ್ಕಾಗಿ  ಹೋಗುತ್ತಿದ್ದಾಗ ಆಕಾಶದಲ್ಲಿ  ಹಾರಾಡುತ್ತಿದ್ದ ಕ್ರೌಂಚ  ಪಕ್ಷಿ ಜೋಡಿಯನ್ನು ನೋಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಬೇಡನೊಬ್ಬ  ಬಾಣದಿಂದ ನೆಲಕ್ಕೆ ಕೆಡವಿದ ರಕ್ತ ಕಾರುತ ಚೀರುತ ನೆಲಕ್ಕೆ  ಬಿದ್ದ ಗಂಡು ಹಕ್ಕಿಯನ್ನು ಕಂಡು ಹೆಣ್ಣು  ಹಕ್ಕಿ  ಕೂಗಿಕೊಂಡಿತು  ಶೋಕಾತಿರೇಕದಿಂದ ವಾಲ್ಮೀಕಿ  ಬೇನನ್ನು  ಶಪಿಸಿದ ಅಂದಿನ ಘಟನೆಯಿಂದ ಮನಸ್ಸು ವ್ಯಾಕುಲವಾಯಿತು.

ಆಶ್ರಮದಲ್ಲಿ ಧ್ಯಾನ ಮಗ್ನವಾಗಿದ್ದಾಗ ಬ್ರಹಗಮನು ಕಾಣಿಸಿ ಕೊಂಡು ನಾರದರಿಂದ ಕೇಳಿದಂತೆ ರಾಮಾಯಣ ಕಥೆಯನ್ನು ಬರೆಯಲು  ಹೇಳಿದರು.

ಬ್ರಹ್ಮನಿಂದ ಸ್ಪೂರ್ತಿ ಮತ್ತು ಆಶೀರ್ವಾದದಿಂದ  ವಾಲ್ಮೀಕಿ  ರಾಮಾಯಣ ಮಹಾ ಕಾವ್ಯವನ್ನು ರಚಿಸಿದ  ಈ ಭೂಮಿಯ ಮೇಲೆ  ನದಿಗಳು  ಹರಿಯುತ್ತಿರುವಷ್ಟು ಕಾಲ ಗಿರಿಗಳು  ನಿಂತಿರುವಷ್ಟು  ಕಾಲ  ರಾಮಾಯಣವೂ ಪ್ರಚಲಿತವಾಗಿರುತ್ತದೆ ಎಂಬುದು  ರಾಮಾಯಣವನ್ನು  ಕುರಿತು  ಒಂದು ಹೇಲಿಕೆ ರಾಮಾಯಣವನ್ನು ಬರೆಯುವಂತೆ ವಾಲ್ಮೀಕಿಗೆ ಸೂಚಿಸಿದ ಸಂದರ್ಭದಲ್ಲಿ ಬ್ರಹ್ಮ  ಈ ಮಾತನ್ನು  ಹೇಳಿದನಂತೆ.

ರಾಮಾಯಣವನ್ನು ಆದಿ  ಕಾವ್ಯ ಎನ್ನುವರು ರಾಮಾಯಣ ರಚನೆಗೆ ಹಿಂದೆ ಸಂಸ್ಕ್ಕತದಲ್ಲಿ  ರಚನೆಗಳು ಇದ್ದಿರಬಹುದಾದರೂ  ಪೂರ್ಣ ಸ್ವರೂಪದ ಕಾವ್ಯ ರೂಪು ಗೊಂಡದ್ದು  ರಾಮಾಯಣದ  ರಚನೆಯಿಂದಲೇ ಎಂಬುದು ಇದರ ಅರ್ಥ ರಾಮಾಯಣ ಆದಿ  ಕಾವ್ಯ  ಮಾತ್ರವಲ್ಲ ಅದು ಅಮರ ಕಾವ್ಯ  ಎಂದೆನಿಸುತ್ತದೆ.

ಶ್ರೀ ರಾಮನು ಲೋಕಾಪವಾದದಿಂದ ಹೆದರಿ ಸೀತೆಯನ್ನು ವಾಲ್ಮೀಕಿ ಮುನಿಯ ಆಶ್ರಮದ  ಬಳಿ ಬಿಟ್ಟು   ಬರುವಂತೆ ಲಕ್ಮ್ಮಣಗಿಗೆ ಹೇಳಿ  ಕಳಿಸುತ್ತಾನೆ. ಲಕ್ಷ್ಮಣ ಸೀತೆಯನ್ನು  ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ.  ಆಗ ಗರ್ಭಿಣಿಯಾಗಿದ್ದ ಸೀತೆ ತನ್ನ ದುವಸ್ಥೆಗಾಗಿ ಶೋಕಿಸುತ್ತಿರುವಲ್ಲಿ ವಾಲ್ಮೀಕಿ  ಮುನಿ ಅಲ್ಲಿಗೆ ಬಂದು ಸೀತೆಯನ್ನು ಗುರುತಿಸಿ  ತನ್ನ ಆಶ್ರಮಕ್ಕೆ  ಕರೆದುಕೊಂಡು ಬಂದು ಆಶ್ರಮ ನೀಡುತ್ತಾನೆ. ಸೀತೆಯು ವಾಲ್ಮೀಕಿ ಮುನಿಯ  ಆಶ್ರಮದಲ್ಲಿ  ಋುಷಿ ಪತ್ನಿಯರ ಆರೈಕೆಯಲ್ಲಿರುವಾಗ  ನವ ಮಾಸಗಳು ತುಂಬಿದ ನಂತರ  ಅವಳಿ ಮಕ್ಕಳನ್ನು  ಹೆರುತ್ತಾಳೆ  ವಾಲ್ಮೀಕಿ  ಮುನಿ ಆನಂದದಿಂದ  ಅಲ್ಲಿಗೆ ಬಂದು ಕುಷಮಿಷ್ಟಿ ಮತ್ತೊಬ್ಬನಿಗೆ  ಲವ ಮುಷ್ಟಿಯಿಂದಲೂ ರಕ್ಷೆಯನ್ನೂ  ಮಾಡಿ ಅವರಿಬ್ಬರಿಗೂ ಕುಶ- ಲವ  ಎಂದು ಹೆಸರಿಡುತ್ತಾನೆ.

ಇವರಿಬ್ಬರೂ ಮಹಾ ಪರಾಕ್ರಮಶಾಲಿಗಳಾಗಿ ಬಾಳುವರೆಂಬುದಾಗಿ  ಸೀತೆಗೆ  ಹೇಳುತ್ತಾರೆ  ಹೀಗೆ ಲವಕುಶರು ವಾಲ್ಮೀಕಿ  ಮುನಿಯ ಮೂಲಕ  ಸಂಸ್ಕಾರ ಗಳನ್ನು ಪಡೆದು ಸಕಲ ವಿದ್ಯಾಪಾರಂಗತರಾದ ವಾಲ್ಮೀಕಿ  ಮುನುಗಳು  ತಾವು ರಚಿಸಿದ ಆದಿಕಾವ್ಯವೆನಿಸಿದ  ರಾಮಾಯಣವನ್ನು  ಇಬ್ಬರಿಗೂ ವಾದ್ಯ  ಸಹಿತವಾಗಿ ಹಾಡುವದಕ್ಕೆ ಕಲಿಸಿಕೊಡುತ್ತಾರೆ.

ರಾ ಎಂಬ ಅಕ್ಷರ  ಉಚ್ಚಾರಣೆಯು ಸಪ್ತ  ಮತ್ತು ಅರಿಷಡ್ ವರ್ಗಗಳನ್ನು ನಾಶ ಮಾಡುವ ಶಕ್ತಿ ಇದೆ ಎಂದು  ಹೇಳಬಹುದು  ಶ್ರೀರಾಮನ ದಿವ್ಯ ಕಥೆಯನ್ನು ಮಹಾ ಕಾವ್ಯವಾಗಿ ಹಾಡಿ ವಾಲ್ಮೀಕಿ  ಆದಿ ಕವಿಯೆನಿಸಿದರು. ಮರಾ ಜಪವು ರಾಮ ಜಪವಾಗಿ ಪರಿಣಮಿಸಿ ವ್ಯಾದ ಮಹರ್ಷಿ  ವಾಲ್ಮೀಕಿಯನ್ನಾಗಿ  ಪರಿವರ್ತಿಸಿತ್ತು. ಇಪ್ಪತ್ತನಾಲ್ಕು ಸಾವಿರ ಗ್ರಂಥ ಪರಿ ಮಿತಿಯುಳ್ಳ ರಾಮಾಯಣ ಮಹಾ ಕಾವ್ಯವು  ರಚಿಸಿದ ಋುಷಿ  ಪುಂಗವ  ವಾಲ್ಮೀಕಿಯಾದರು.

ಮಾಹಿತಿ:-

ಎಣ್ಣೆಗೆರೆ ಆರ್. ವೆಂಕಟರಾಮಯ್ಯ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು