35 ವರ್ಷಗಳ ಬಳಿಕ "ಒಂದೇ ಮಗು'" ನೀತಿಯನ್ನು ರದ್ದುಗೊಳಿಸಿದ ಚೀನಾ:(China scraps one-child policy)
ಬೀಜಿಂಗ್: ವಿವಾದಾತ್ಮಕ ಒಂದೇ
ಮಗು ನೀತಿಯನ್ನು ಚೀನಾ
ಕೊನೆಗೂ ಸುಮಾರು 35 ವರ್ಷಗಳ ಬಳಿಕ
ರದ್ದು ಮಾಡುವ ಮೂಲಕ ದೇಶದ ಎಲ್ಲಾ
ದಂಪತಿಗಳು 2 ಮಕ್ಕಳನ್ನು
ಹೊಂದಲು ಕಮ್ಯೂನಿಷ್ಟ್
ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
1979ರಲ್ಲಿ ಚೀನಾ ಸರ್ಕಾರ ಒಂದೇ
ಮಗು ನೀತಿಯನ್ನು ಜಾರಿಗೆ ತಂದಿತ್ತು.
ಆ ಬಳಿಕ ಒಂದೇ ಮಗು ನೀತಿಯನ್ನು
ಸಡಿಲಿಸಬೇಕೆಂದು ಸಾಕಷ್ಟು ಒತ್ತಡ
ಬಂದಿದ್ದರೂ ಕೂಡಾ ಚೀನಾ ಅದಕ್ಕೆ
ಮಣಿದಿರಲಿಲ್ಲವಾಗಿತ್ತು. ಇದೀಗ
ಚೀನಾ ಒಂದೇ ಮಗು
ನೀತಿಯನ್ನು
ರದ್ದುಗೊಳಿಸಿರುವುದಾಗಿ
ಚೀನಾದ ಅಧಿಕೃತ ನ್ಯೂಸ್ ಏಜೆನ್ಸಿ ಕ್ಸಿನ್
ಹುವಾ ವರದಿ ಮಾಡಿದೆ.
ಸುಮಾರು 5 ದಿನಗಳ ಕಾಲ ಚೀನಾದ ಆಡಳಿತ
ಕಮ್ಯೂನಿಷ್ಟ್ ಪಕ್ಷ ಚರ್ಚೆ ನಡೆಸಿದ ಬಳಿಕ
ಇನ್ಮುಂದೆ ಚೀನಾದಲ್ಲಿ
ದಂಪತಿಗಳು 2 ಮಕ್ಕಳನ್ನು
ಹೊಂದಬಹುದು ಎಂದು
ತಿಳಿಸಿದೆ. ಸುಮಾರು 3 ದಶಕಗಳ ಬಳಿಕ ಚೀನಾ
ಮೊದಲ ಬಾರಿಗೆ ಒಂದೇ ಮಗು
ನೀತಿಯನ್ನು ಸಡಿಲಿಸಿದೆ. ಪ್ರಸಕ್ತ
ಚೀನಾ ಜನಸಂಖ್ಯೆ 136 ಕೋಟಿ ಇದೆ.
ಒಂದೇ ಮಗು ನೀತಿಯಿಂದಾಗಿ
ದೇಶದಲ್ಲಿ ಬಲವಂತದ ಗರ್ಭಪಾತ ಹೆಚ್ಚಿತ್ತು.
ಅಲ್ಲದೇ ಇದಕ್ಕೆ ಚೀನಾದಲ್ಲೇ
ತೀವ್ರ ವಿರೋಧ ವ್ಯಕ್ತವಾಗಿತ್ತು.
Comments
Post a Comment