7,538 ಮಂದಿಗೆ ಸರಕಾರಿ ನೌಕರಿ ಭಾಗ್ಯ:

7,538 ಮಂದಿಗೆ ಸರಕಾರಿ ನೌಕರಿ ಭಾಗ್ಯ:
www.freegksms.blogspot.in
-ಕೆಪಿಎಸ್ಸಿಯಿಂದ ಆಯ್ಕೆಪಟ್ಟಿ ಸಿದ್ಧತೆಗೆ
ಕಸರತ್ತು-
* ಆರ್. ತುಳಸಿಕುಮಾರ್ ಬೆಂಗಳೂರು
ವಿವಾದಗಳಿಂದಾಗಿ ಸದಾ ಸುದ್ದಿಯಲ್ಲಿದ್ದ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)
ಇದೀಗ ನಾನಾ ಇಲಾಖೆಗಳ ನೇಮಕ
ಪ್ರಕ್ರಿಯೆಗೆ ಸಂಬಂಧಿಸಿದಂತೆ
ಆಯ್ಕೆಪಟ್ಟಿಯನ್ನು ಸರಕಾರಕ್ಕೆ ರವಾನಿಸಲು
ಅಂತಿಮ ಸಿದ್ಧತೆ
ಮಾಡಿಕೊಂಡಿದೆ.
ಸರಕಾರದ ಸಚಿವಾಲಯ ಸೇರಿದಂತೆ ನಾನಾ
ಇಲಾಖೆಗಳಲ್ಲಿ ಖಾಲಿ ಇರುವ 7,538 ಹುದ್ದೆಗಳಿಗೆ
ಪರೀಕ್ಷೆಗಳು
ಪೂರ್ಣಗೊಂಡಿವೆ. ಅರ್ಹ
ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ
ವರ್ಷಾಂತ್ಯದ ವೇಳೆಗೆ ಸರಕಾರಕ್ಕೆ ರವಾನಿಸಲು
ಆಯೋಗ ಮಗ್ನವಾಗಿದೆ. ಆಯ್ಕೆ ಪಟ್ಟಿ
ಸಲ್ಲಿಸುತ್ತಿದ್ದಂತೆಯೇ ಹೊಸ
ವರ್ಷದಲ್ಲಿ ಅಷ್ಟೂ ಮಂದಿ ಸರಕಾರಿ ನೌಕರಿ
ಭಾಗ್ಯ ಪಡೆಯಲಿದ್ದಾರೆ.
ಸಾವಿರಾರು ಸಂಖ್ಯೆಯ ಹುದ್ದೆಗಳಿಗೆ
ಸಂಬಂಧಿಸಿದ ಆಯ್ಕೆ ಪಟ್ಟಿ ಒಂದೇ
ಬಾರಿಗೆ ಕೆಪಿಎಸ್ಸಿಯಿಂದ ಸರಕಾರಕ್ಕೆ
ಸಲ್ಲಿಕೆಯಾಗಲ್ಲ. ಏನಿದ್ದರೂ, ವರ್ಷಕ್ಕೆ 2-3 ಸಾವಿರ
ಹುದ್ದೆಗಳಿಗಷ್ಟೇ ಆಯ್ಕೆ ಪಟ್ಟಿ
ಸಿದ್ಧಗೊಳ್ಳುತ್ತಿತ್ತು. ನಾನಾ
ಇಲಾಖೆಗಳಲ್ಲಿ ದೊಡ್ಡ
ಸಂಖ್ಯೆಯಲ್ಲಿ ಹುದ್ದೆಗಳು ಭರ್ತಿ
ಆಗಬೇಕಿದ್ದರೂ, ನೇಮಕ ಪ್ರಕ್ರಿಯೆಗೆ ಒಪ್ಪಿಗೆ
ದೊರೆಯುವುದು
ವಿಳಂಬವಾಗುತ್ತಿತ್ತು. ನೌಕರಿ
ನೀಡುವಂತೆ ಯುವಜನತೆ
ಮೊರೆ ಇಟ್ಟಿದ್ದರೂ, ನಿರುದ್ಯೋಗಿಗಳ
ಕೂಗಿಗೆ ಸರಕಾರದಿಂದ ಸ್ಪಂದನೆ
ಸಿಗುತ್ತಿರಲಿಲ್ಲ. ಈಗ ಎಲ್ಲಾ 7,538 ಹುದ್ದೆಗಳಿಗೂ
ಆರ್ಥಿಕ ಇಲಾಖೆಯು ಅನುಮೋದನೆ
ನೀಡಿರುವುದರಿಂದ ಆಯ್ಕೆ ಪಟ್ಟಿ
ರವಾನೆಯಾಗುತ್ತಿದ್ದಂತೆ ಅಭ್ಯರ್ಥಿಗಳು
ಸರಕಾರಿ ಉದ್ಯೋಗ ಪಡೆಯಲಿದ್ದಾರೆ.
ಈ ಹುದ್ದೆಗಳಲ್ಲದೆ ನಾನಾ ಇಲಾಖೆಗಳಿಗೆ ಸೇರಿದ ಇನ್ನೂ
250 ಹುದ್ದೆಗಳಿಗೆ ಆಯ್ಕೆ ಪಟ್ಟಿ
ಸಿದ್ಧಗೊಳ್ಳಬೇಕಿದೆ. ಕೆಲ ಇಲಾಖೆಗಳು
ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ
ಮಾರ್ಗಸೂಚಿ, ಮೀಸಲು ನಿಗದಿ ವಿಚಾರದಲ್ಲಿ
ಸ್ಪಷ್ಟನೆ ನೀಡದ ಕಾರಣ ಆಯ್ಕೆ ಪಟ್ಟಿ
ಇನ್ನಷ್ಟೇ
ಅಂತಿಮಗೊಳ್ಳಬೇಕಿದೆ. ಜತೆಗೆ
ಕೆಎಎಸ್ ದರ್ಜೆಗೆ ಸೇರಿದ 465 ಹುದ್ದೆಗಳ ಆಯ್ಕೆ
ಪಟ್ಟಿಯೂ 2016ರ ಆರಂಭದಲ್ಲಿ
ಪ್ರಕಟವಾಗುವ ನಿರೀಕ್ಷೆ ಇದೆ.
ಕಂತುಗಳಲ್ಲಿ ಆಯ್ಕೆ ಪಟ್ಟಿ ರವಾನೆ
ನಾನಾ ಇಲಾಖೆಗಳ ಹುದ್ದೆಗಳಿಗೆ ನಡೆದಿರುವ
ಪರೀಕ್ಷೆಗೆ ಸಂಬಂಧಿಸಿದ
ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು,
ಕಂತುಗಳಲ್ಲಿ ಸರಕಾರಕ್ಕೆ ಪಟ್ಟಿ
ರವಾನೆಯಾಗಲಿದೆ. ವೈದ್ಯ ಹುದ್ದೆಗಳಿಗೆ ನೇರ
ನೇಮಕಾತಿ ಪರೀಕ್ಷೆ ನಡೆದಿರುವುದರಿಂದ
1401 ಹುದ್ದೆಗಳಿಗೆ ಆಯ್ಕೆಯಾಗಿರುವ ಅರ್ಹರ
ಪಟ್ಟಿ ವಾರದೊಳಗೆ ರವಾನೆಯಾಗಲಿದೆ.
ಇದೇ ರೀತಿ ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ 930, ತಾಂತ್ರಿಕ/
ತಾಂತ್ರಿಕೇತರ ಹುದ್ದೆಗಳ 900 ಹುದ್ದೆಗಳ
ಪಟ್ಟಿಯೂ ಶೀಘ್ರ ಸರಕಾರಕ್ಕೆ ತಲುಪಲಿದೆ.
ಇತ್ತೀಚೆಗೆ ಎಫ್ಡಿಎ/ಎಸ್ಡಿಎನ 4,307
ಹುದ್ದೆಗಳ ಭರ್ತಿಗೆ ಪರೀಕ್ಷೆ
ಪೂರ್ಣಗೊಂಡಿದ್ದು,
ಮೌಲ್ಯಮಾಪನಕ್ಕೆ ಸಿದ್ಧತೆ ನಡೆದಿದೆ.
ಸರಕಾರದಿಂದ ಕಾಲಮಿತಿಯೊಳಗೆ
ಆಯ್ಕೆಪಟ್ಟಿ ಕಳುಹಿಸಿಕೊಡುವ ಕೋರಿಕೆ
ಬಂದಿರುವ ಹಿನ್ನೆಲೆಯಲ್ಲಿ
ಫಲಿತಾಂಶವನ್ನು
ವರ್ಷಾಂತ್ಯದೊಳಗೆ
ಪ್ರಕಟಿಸುವ ವಿಶ್ವಾಸ ಕೆಪಿಎಸ್ಸಿಯಿಂದ
ವ್ಯಕ್ತವಾಗಿದೆ. ಆಯ್ಕೆ ಪಟ್ಟಿ
ಸಿದ್ಧಗೊಂಡ ಬೆನ್ನಲ್ಲೇ
ಸರಕಾರಕ್ಕೆ ಕಳಹಿಸಿಕೊಟ್ಟಿದನ್ನು
ಆಯಾ ಇಲಾಖೆಗಳು ಪರಾಮರ್ಶೆಗೆ ಒಳಪಡಿಸಿ
ಉದ್ಯೋಗದ ಆದೇಶ ಪತ್ರ ನೀಡುವ
ಪ್ರಕ್ರಿಯೆ ಕೈಗೊಳ್ಳಲಿವೆ.
ದಾಖಲೆ ಸಂಖ್ಯೆಯ ತಜ್ಞ ವೈದ್ಯರು
ಆರೋಗ್ಯ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಿಗೆ
ಹಲವು ವರ್ಷಗಳಿಂದ ಭರ್ತಿ
ಮಾಡಿಕೊಳ್ಳದ ಹಿನ್ನೆಲೆಯಲ್ಲಿ
1,401 ವೈದ್ಯರನ್ನು ನೇರ ನೇಮಕಾತಿ ಅಡಿ
ತೆಗೆದುಕೊಳ್ಳಲಾಗುತ್ತಿದೆ. ಈ ಪೈಕಿ 983
ಸಂಖ್ಯೆಯ ಹುದ್ದೆಗಳು ತಜ್ಞ ವೈದ್ಯರಿಗೆ
ಸಂಬಂಧಿಸಿದ್ದು, ಇಷ್ಟು
ದೊಡ್ಡ ಸಂಖ್ಯೆಯಲ್ಲಿ
ನೇಮಕ ಮಾಡಿಕೊಳ್ಳುತ್ತಿರುವುದು ಇದೇ
ಪ್ರಥಮ. ಹಿರಿಯ ವೈದ್ಯಾಧಿಕಾರಿ/ತಜ್ಞರು
(ಜನರಲ್ ಮೆಡಿಸಿನ್) 243 ಹುದ್ದೆಗಳು, ಹಿರಿಯ
ವೈದ್ಯಾಧಿಕಾರಿ/ ಪ್ರಸೂತಿ-ಸ್ತ್ರೀರೋಗ
ತಜ್ಞರು 141, ಹಿರಿಯ ವೈದ್ಯಾಧಿಕಾರಿ/ಮಕ್ಕಳ
ತಜ್ಞರು 144 ಹುದ್ದೆಗಳು ಪ್ರಮುಖವಾಗಿವೆ. ಸರಕಾರದ
ಈ ನಿಲುವಿನಿಂದಾಗಿ ರಾಜಧಾನಿಯ
ಹೊರಗಿನ ಜಿಲ್ಲೆಗಳಲ್ಲಿರುವ ಸರಕಾರಿ
ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ
ಬಹುಮಟ್ಟಿಗೆ ನೀಗಬಹುದೆಂದು
ನಿರೀಕ್ಷಿಸಲಾಗಿದೆ.
ನೇಮಕ ಹುದ್ದೆಗಳ ವಿವರ
ಆರೋಗ್ಯ ಇಲಾಖೆಯ ವೈದ್ಯರು1401
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ930
ತಾಂತ್ರಿಕ/ತಾಂತ್ರಿಕೇತರ (ನಾನಾ ಇಲಾಖೆ)900
ಎಫ್ಡಿಎ/ಎಸ್ಡಿಎ4307
-----
ನಾನಾ ಇಲಾಖೆಗಳ ಹುದ್ದೆಗಳ ಪರೀಕ್ಷೆ ನಡೆಸಿ
ಆಯ್ಕೆ ಪಟ್ಟಿಯನ್ನು
ಕಳುಹಿಸಿಕೊಡಲು ಸಿದ್ಧತೆ ನಡೆದಿದೆ.
ವೈದ್ಯರ ಹುದ್ದೆಗಳಿಗೆ
ಸಂಬಂಧಿಸಿದಂತೆ
ವಾರದೊಳಗೆ ಅರ್ಹರ ಪಟ್ಟಿಯನ್ನು
ಸರಕಾರಕ್ಕೆ ರವಾನಿಸಲಾಗುವುದು.
- ಮನೋಜ್ಕುಮಾರ್ ಮೀನಾ, ಕೆಪಿಎಸ್ಸಿ
ಕಾರ್ಯದರ್ಶಿ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು