'ಹಾರ್ವರ್ಡ್ ಹ್ಯುಮಾನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿಗೆ ಕೈಲಾಶ್ ಸತ್ಯಾರ್ಥಿ ಆಯ್ಕೆ:
ವಾಷಿಂಗ್ಟನ್: ನೊಬೆಲ್
ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ,
ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರತಿಷ್ಠಿತ
ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಕ್ಕಳ ಹಕ್ಕುಗಳ ಪರವಾಗಿ ಅವರು ಸಲ್ಲಿಸಿರುವ
ಗಣನೀಯ ಸೇವೆಯನ್ನು ಪರಿಗಣಿಸಿ ಈ
ವರ್ಷದ ಮಾನವೀಯ ಪ್ರಶಸ್ತಿಯನ್ನು
ನೀಡಲಾಗಿದೆ.
ಜೀವನದ ಗುಣಮಟ್ಟ ಸುಧಾರಣೆಗೆ
ಶ್ರಮಿಸುವ ಹಾಗೂ ಎಲ್ಲರಿಗೂ ಪ್ರೇರಣೆಯಾಗುವ
ಮಟ್ಟದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು
ಗುರುತಿಸಿ ವಿಶ್ವವಿದ್ಯಾಲಯ ಪ್ರತಿ ವರ್ಷ ಈ
ಪ್ರತಿಷ್ಠಿತ ಪ್ರಶಸ್ತಿ ನೀಡುವುದು. ಈ
ಗೌರವಕ್ಕೆ ಪಾತ್ರರಾಗಿರುವ ಮೊದಲ
ಭಾರತೀಯ ಕೈಲಾಶ್ ಸತ್ಯಾರ್ಥಿ.
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ದಾಸ್ಯವನ್ನು
ನಿರ್ಮೂಲನೆ ಮಾಡಲು ಶ್ರಮಿಸಿರುವ ಸತ್ಯಾರ್ಥಿಗೆ
'ಹಾರ್ವರ್ಡ್ ಹ್ಯುಮಾನಿಟೇರಿಯನ್ ಆಫ್ ದಿ ಇಯರ್'
ಪ್ರಶಸ್ತಿ ನೀಡುವುದಾಗಿ ವಿಶ್ವವಿದ್ಯಾಲಯ
ಘೋಷಿಸಿದೆ.
Comments
Post a Comment