' ಸಿ ' ವರ್ಗದ ಹುದ್ದೆ ನೇಮಕಕ್ಕೆ ಸಂದರ್ಶನ ಇಲ್ಲ:
:
ಉದಯವಾಣಿ, Oct 21, 2015, 3:45 AM IST
ಬೆಂಗಳೂರು: ಸರ್ಕಾರದ ಇಲಾಖಾ ನೇರ ನೇಮಕಾತಿಗಳಲ್ಲಿ ಸಿ ವರ್ಗದ
ಹುದ್ದೆಗಳಿಗೆ ಇನ್ನು ಮುಂದೆ ಸಂದರ್ಶನ ಇರುವುದಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ
ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಮಂಗಳವಾರ ನಡೆದ
ರಾಜ್ಯ ಸಚಿವ ಸಂಪುಟ
ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು,
ನೇಮಕಾತಿ ವ್ಯವಸ್ಥೆ ಸುಧಾರಣೆ ಕುರಿತು ಹೋಟಾ ಸಮಿತಿ
ನೀಡಿರುವ ಶಿಫಾರಸುಗಳನ್ನು ಎಲ್ಲ ನೇಮಕಾತಿಗಳಿಗೂ
ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಟಿ.ಬಿ.ಜಯಚಂದ್ರ, ಇಲಾಖಾ
ನೇಮಕಾತಿಗಳಲ್ಲಿ ಸಿ ವರ್ಗದ ಹುದ್ದೆಗಳಿಗೆ ಸಂದರ್ಶನ
ಮಾಡದಿರಲು ನಿರ್ಧರಿಸಲಾಗಿದೆ. ಪರೀಕ್ಷೆ ಅಂಕಗಳ
ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು
ಹೇಳಿದರು. ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡುವ ಎ ಮತ್ತು ಬಿ ವರ್ಗದ
ಹುದ್ದೆಗಳ ಪರೀಕ್ಷಾ ಅಂಕಗಳನ್ನು ಮೌಖೀಕ
ಸಂದರ್ಶನಕ್ಕೂ ಮುಂಚೆ ಪ್ರಕಟಿಸುವಂತಿಲ್ಲ. ಹೋಟಾ
ಸಮಿತಿ ಶಿಫಾರಸು ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು
ತಿಳಿಸಿದರು.
ಇದಕ್ಕಾಗಿ ಕರ್ನಾಟಕ ಸಿವಿಲ್ ಸೇವೆಗಳು (ಸ್ಪರ್ಧಾತ್ಮಕ
ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ)
ತಿದ್ದುಪಡಿ ನಿಯಮ-2006ಕ್ಕೆ ತಿದ್ದುಪಡಿ ತರಲು ಸಂಪುಟ
ಒಪ್ಪಿಗೆ ನೀಡಿದೆ ಎಂದರು. ಅರಣ್ಯ
ಇಲಾಖೆಯಲ್ಲಿ ಗಾರ್ಡ್ಗಳ ನೇಮಕಾತಿ ಸಂಬಂಧದ
ವಿದ್ಯಾರ್ಹತೆ ನಿಗದಿ ಕುರಿತ ಕರ್ನಾಟಕ ಅರಣ್ಯ ಇಲಾಖೆ ಮತ್ತು
ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿದೆ.
ಲಾಬಿಗೆ ಬ್ರೇಕ್: ಸಂದರ್ಶನ ವ್ಯವಸ್ಥೆ
ರದ್ದುಪಡಿಸಿರುವುದರಿಂದ ಲಾಬಿ, ಪ್ರಭಾವ, ಹಣದ ವ್ಯವಹಾರಕ್ಕೆ
ಬ್ರೇಕ್ ಬೀಳಲಿದೆ. ಈ ಹಿಂದೆ ಇಲಾಖಾ ಮುಖ್ಯಸ್ಥರ
ನೇತೃತ್ವದ ಸಮಿತಿಯ
ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡುವ ಹಾಲಿ
ವ್ಯವಸ್ಥೆಯಡಿ ಅನರ್ಹ ಹಾಗೂ ಪ್ರಭಾವ ಉಳ್ಳವರು
ಆಯ್ಕೆಯಾಗುತ್ತಿದ್ದು ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ
ಎಂಬ
ಆರೋಪಗಳು ಕೇಳಿಬಂದಿದ್ದವು.
Comments
Post a Comment