ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ:



ಆಂಧ್ರಪ್ರದೇಶದ ನೂತನ
ರಾಜಧಾನಿ ಅಮರಾವತಿಗೆ ಪ್ರಧಾನಿ
ನರೇಂದ್ರ ಮೋದಿ ಯಂತ್ರ
ಪ್ರತಿಷ್ಠಾಪನೆ ಮಾಡುವ ಮೂಲಕ
ಇಂದು ಶಂಕು ಸ್ಥಾಪನೆ
ನೆರವೇರಿಸಿದರು.
ಬಳಿಕ ಜನಸ್ತೋಮವನ್ನು ಉದ್ದೇಶಿಸಿ
ಮಾತನಾಡಿದ ಪ್ರಧಾನಿ ಮೋದಿ,
ಅಮರಾವತಿ ನಿಜಾರ್ಥದಲ್ಲೇ ಜನರ
ರಾಜಧಾನಿಯಾಗಲಿದೆ ಎಂದು
ಬಣ್ಣಿಸಿದರು.
ತನ್ನ ಶ್ರೇಷ್ಠ ಸಂಸ್ಕೃತಿಗಾಗಿ
ಇತಿಹಾಸದಲ್ಲಿ ಮಹತ್ತರ ಸ್ಥಾನಗಳಿಸಿರುವ
ಐತಿಹಾಸಿಕ ಪ್ರದೇಶವನ್ನು ವಿಜಯ
ದಶಮಿಯಂದೇ ತನ್ನ
ರಾಜಧಾನಿಯಾಗಿ ಸ್ವೀಕರಿಸಲು
ಆಂಧ್ರಪ್ರದೇಶ ಮುನ್ನಡಿಯಿಟ್ಟಿದೆ.
ಇಂತಹದ್ದೊಂದು ರಾಜಧಾನಿಯ
ನಿರ್ಮಾಣಕ್ಕಾಗಿ ಮುಖ್ಯಮಂತ್ರಿ
ಚಂದ್ರಬಾಬು ನಾಯ್ಡು ವಿಶ್ವದ
ಅತ್ಯುನ್ನತ ಮನಸ್ಸುಗಳನ್ನು
ಒಂದುಗೂಡಿಸಿದ್ದಾರೆ. ಇದಕ್ಕಾಗಿ
ನಾವವರನ್ನು
ಅಭಿನಂದಿಸಲೇಬೇಕು ಎಂದು
ಮೋದಿ ಶ್ಲಾಘಿಸಿದರು.
ಸ್ವಾತಂತ್ರ್ಯದ ನಂತರ ದೇಶದಲ್ಲಿ
ಕೆಲವೇ ಕೆಲವು ರಾಜಧಾನಿಗಳನ್ನು
ನಿರ್ಮಿಸಲಾಗಿದೆ. ಇದಕ್ಕೆ ಅಡ್ಡಿಯಾಗಿರುವ
ಸಂಗತಿಗಳನ್ನು ನಾವು
ನಿವಾರಿಸಬೇಕಾಗಿದೆ.
ನಗರೀಕರಣವನ್ನು ಒಂದು
ಸಮಸ್ಯೆಯಾಗಿ ಕಾಣದೆ ಅವಕಾಶದಂತೆ
ಕಾಣಬೇಕೆಂದು ಮೋದಿ ಕರೆ
ನೀಡಿದರು.
ಭುಜ್ ಭೂಕಂಪವು ನಮಗೆ ಹೊಸ
ನಗರ ಕಟ್ಟಲು
ಅವಕಾಶವೊಂದನ್ನು
ತೆರೆದುಕೊಟ್ಟಿತು. ಹಾಗೆಯೇ,
ಅಭಿವೃದ್ಧಿಯತ್ತ ದಾಪುಗಾಲಿಡಲು
ರಾಜಕೀಯ
ಇಚ್ಛಾಶಕ್ತಿಯೊಂದನ್ನು
ನೀಡಿತು. ಕಚ್ ಜಿಲ್ಲೆಯು
ಇದಕ್ಕೊಂದು ಜೀವಂತ
ಉದಾಹರಣೆ ಎಂದು ಪ್ರಧಾನಿ
ಮೋದಿ ಹೇಳಿದರು.
ಸ್ಮಾರ್ಟ್ ಸಿಟಿಗಳು ಹೊಚ್ಚ ಹೊಸ
ತಂತ್ರಜ್ಞಾನಗಳನ್ನು
ಹೊಂದಿರಬೇಕು. ಅಲ್ಲಿ
ವೇಸ್ಟೇಜ್ ಇರಬಾರದು, ಸಮೂಹ
ಸಾರಿಗೆ ವ್ಯವಸ್ಥೆ ಇರಬೇಕು.
ಉದ್ಯೋಗ ಸೃಷ್ಟಿ ಹಾಗೂ
ಆದಾಯ ಸೃಷ್ಟಿಸುವ ಹೊಸ ನಗರಗಳಿಗೆ
ಅಮರಾವತಿ ಹೆಗ್ಗುರುತಾಗಲಿದೆ
ಎಂದು ಮೋದಿ ಭರವಸೆ ನೀಡಿದರು.
ತೆಲುಗು ಭಾಷೆಯಲ್ಲಿ ಶೂಭಾಶಯ
ಕೋರಿದ ಮೋದಿ
ಆರಂಭದಲ್ಲಿ ತೆಲುಗು ಭಾಷೆಯ
ಮೂಲಕ ವಿಜಯ ದಶಮಿಯ ಶುಭಾಶಯ
ಸಲ್ಲಿಸುವ ಮೂಲಕ ನೆರೆದ
ಜನಸ್ತೋಮದಿಂದ ಚಪ್ಪಾಳೆ
ಗಿಟ್ಟಿಸಿದರು. ಬಳಿಕ ಕವನವೊಂದನ್ನು
ವಾಚಿಸಿ, ಅಮರಾವತಿಯ ಇತಿಹಾಸ-
ಸಂಸ್ಕೃತಿಗಳನ್ನು ಬಣ್ಣಿಸಿದರು.
ಇದಕ್ಕೂ ಮುನ್ನ ಮಾತನಾಡಿದ
ಮುಖ್ಯಮಂತ್ರಿ ಚಂದ್ರಬಾಬು
ನಾಯ್ಡು, ಸಂಕಷ್ಟ ಸಮಯದಲ್ಲಿ
ಪ್ರಧಾನಿ ಮೋದಿಯವರು ತೆಲುಗು
ಜನರಿಗೆ ನೀಡಿದ ಭರವಸೆಯನ್ನು
ಎಂದೂ ಮರೆಯುವುದಿಲ್ಲ
ಎಂದರು.
ಮುಂದಿನ ದಿನಗಳಲ್ಲಿ ತೆಲುಗು ಜನರು
ಅತೀವ ಪರಿಶ್ರಮದ ಮೂಲಕ
ದೇಶದಲ್ಲೇ ಅತ್ಯಂತ
ಮುಂದುವರಿದ
ರಾಜಧಾನಿಯನ್ನಾಗಿ
ಅಮರಾವತಿಯನ್ನು ಕಟ್ಟಲಿದ್ದಾರೆ.
ಈಗಾಗಲೇ ವ್ಯವಹಾರಗಳನ್ನು
ಅತ್ಯಂತ ಚತುರವಾಗಿ ನಿರ್ವಹಿಸುವಲ್ಲಿ
ದೇಶದಲ್ಲೇ ಎರಡನೇ
ಸ್ಥಾನದಲ್ಲಿದ್ದೇವೆ. 20150ರ ವೇಳೆಗೆ
ದೇಶದಲ್ಲೇ ಅತ್ಯಂತ ಅಭಿವೃದ್ಧಿ
ಹೊಂದಿದ ರಾಜ್ಯಗಳಲ್ಲಿ ಮೊದಲ
ಸ್ಥಾನದಲ್ಲಿರಲಿದ್ದೇವೆ ಎಂದು
ಬಾಬು ಭರವಸೆ ನುಡಿದರು.
ಈ ಸಂದರ್ಭದಲ್ಲಿ ತೆಲಂಗಾನ
ಮುಖ್ಯಮಂತ್ರಿ, ಕೇಂದ್ರ ಸಚಿವ
ವೆಂಕಯ್ಯ ನಾಯ್ಡು, ಹಾಗೂ
ವಿದೇಶಿ ಗಣ್ಯರು ಹಾಜರಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK