ಉನ್ನತ ಶಿಕ್ಷಣದಲ್ಲಿ ಎಲ್ಲಾ ಬಗೆಯ ಮೀಸಲಾತಿಗಳನ್ನು ರದ್ದು ಮಾಡಿ : ಸುಪ್ರೀಂ ಕೋರ್ಟ್ ಸೂಚನೆ:
ನವದೆಹಲಿ. ಅ. 28- ಭಾರತಕ್ಕೆ ಸ್ವಾತಂತ್ರ್ಯ
ಬಂದು 68 ವರ್ಷಗಳೇ ಕಳೆದಿದ್ದರೂ ಕೆಲವು
ವ್ಯವಸ್ಥೆಗಳು ಬದಲಾಗದೆ ಇರುವುದು ದುರದೃಷ್ಟಕರ
ಎಂದಿರುವ ಸರ್ವೋಚ್ಚ ನ್ಯಾಯಾಲಯ
ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯ
ಸಲುವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ
ಎಲ್ಲಾ ಬಗೆಯ ಮೀಸಲಾತಿಗಳನ್ನು ರದ್ದು
ಮಾಡಬೇಕು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ
ಮತ್ತು ಪಿ.ಸಿ.ಪಂಥ್ ಅವರಿದ್ದ
ವಿಭಾಗೀಯ ಪೀಠ ಕೇಂದ್ರ
ಸರ್ಕಾರವು ಉನ್ನತ ಶಿಕ್ಷಣದಲ್ಲಿನ ಕೆಲವು
ಮೀಸಲಾತಿ ಪದ್ಧತಿಗಳನ್ನು ರದ್ದು ಮಾಡಲು
ವಸ್ತುನಿಷ್ಠವಾಗಿ ಕ್ರಮಕೈಗೊಳ್ಳಬೇಕು
ಎಂದು ಸೂಚಿಸಿದೆ. ಅರ್ಹತೆ ಆಧಾರದ ಮೇಲೆ
ನೇಮಕಾತಿ ಮಾಡುವ ವ್ಯವಸ್ಥೆ ಇಂದಿನ
ಅಗತ್ಯವಾಗಿದ್ದು, ವೈದ್ಯಕೀಯ
ಶಿಕ್ಷಣದಂತಹ ಉನ್ನತ ಶಿಕ್ಷಣ
ವ್ಯವಸ್ಥೆಯಲ್ಲಿರುವ ಪ್ರಸಕ್ತ
ಮೀಸಲಾತಿ ವ್ಯವಸ್ಥೆಯನ್ನು
ರದ್ದುಪಡಿಸಬೇಕು.
ಅಭ್ಯರ್ಥಿಯ ಅರ್ಹತೆಯೇ
ಮಾನದಂಡವಾಗಬೇಕು. ಆಗ ನಾವು ಎಲ್ಲರಿಗೂ
ನ್ಯಾಯ ಒದಗಿಸಲು ಸಾಧ್ಯ ಎಂದು
ಪೀಠ ಅಭಿಪ್ರಾಯಪಟ್ಟಿದೆ.
ಮೀಸಲಾತಿ ಪದ್ಧತಿಯನ್ನು ಎಲ್ಲಾ
ಕ್ಷೇತ್ರಗಳಲ್ಲೂ ನಿರಂತರವಾಗಿ
ಮುಂದುವರೆಸಿಕೊಂಡು ಹೋಗುವ
ಅಗತ್ಯವಿರುವುದಿಲ್ಲ ಮತ್ತು ಸಾಮಾಜಿಕ
ನ್ಯಾಯಕ್ಕೆ ಮಾರ್ಗವೂ ಆಗುವುದಿಲ್ಲ. ಈ
ಹಿನ್ನೆಲೆಯಲ್ಲಿ 1988 ರಲ್ಲೇ ಸರ್ವೋಚ್ಚ
ನ್ಯಾಯಾಲಯ ನೀಡಿದ್ದ ಎರಡು
ತೀರ್ಪುಗಳಲ್ಲೂ ಕೂಡ ಈಬಗ್ಗೆ ಪ್ರಸ್ತಾಪ
ಮಾಡಿತ್ತು. ಆದರೆ ಅದು ಆಗ ಅನುಷ್ಟಾನಕ್ಕೆ
ಬರಲಿಲ್ಲ. ವಿಶೇಷ ವೈದ್ಯಕೀಯ
ಶಿಕ್ಷಣದಲ್ಲಿ ನಿಜಕ್ಕೂ ಮೀಸಲಾತಿಯ
ಅಗತ್ಯವಿರುವುದಿಲ್ಲ. ಇಲ್ಲಿ ಅರ್ಹತೆಯಷ್ಟೇ
ಆಧಾರವಾಗಬೇಕೆಂದು ನ್ಯಾಯಾಧೀಶರು
ತಮ್ಮ ಅಭಿಪ್ರಾಯ ಸೂಚಿಸಿದ್ದಾರೆ.
ಆಂಧ್ರಪ್ರದೇಶ, ತೆಲಂಗಾಣ ಮತ್ತು
ತಮಿಳುನಾಡುಗಳಲ್ಲಿರುವ ವೈದ್ಯಕೀಯ
ಕಾಲೇಜುಗಳಲ್ಲಿನ ಮೀಸಲಾತಿ
ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ
ಅರ್ಜಿಯನ್ನು ಪರಿಶೀಲಿಸಿದ
ನ್ಯಾಯಾಲಯ ಈ ಪ್ರತಿಕ್ರಿಯೆ
ನೀಡಿದೆ.
Comments
Post a Comment