ಲಂಡನ್ ನಲ್ಲಿ ಅಂಬೇಡ್ಕರ್ ಭವನ ಮತ್ತು ಬಸವಣ್ಣ ಪ್ರತಿಮೆ ಉದ್ಘಾಟಿಸಲಿರುವ ಮೋದಿ:
ನವದೆಹಲಿ: ಲಂಡನ್ ನಲ್ಲಿ ಅಂಬೇಡ್ಕರ್
ಭವನವನ್ನು ಮತ್ತು ಬಸವಣ್ಣನ ಪ್ರತಿಮೆಯನ್ನು
ಅನಾವರಣಗೊಳಿಸುವುದಾಗಿ ಪ್ರಧಾನ
ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅವರು ಬರುವ ತಿಂಗಳು ಬ್ರಿಟನ್ ಗೆ ಭೇಟಿ
ನೀಡಲಿದ್ದಾರೆ.
ದೀಪಾವಳಿ ಹಬ್ಬ ಮುಗಿದ ಬಳಿಕ ನಾನು
ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದೇನೆ.
ಅಲ್ಲಿ ಅಂಬೇಡ್ಕರ್ ಭವನವನ್ನು
ಉದ್ಘಾಟಿಸಲಿದ್ದೇನೆ. ಅದು ಭಾರತ ಸರ್ಕಾರದ
ಆಸ್ತಿಯಾಗಿದೆ ಎಂದು ತಮ್ಮ ರೇಡಿಯೋ
ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ತಿಳಿಸಿದ್ದಾರೆ.
ಬ್ರಿಟನ್ ನ ಅಂಬೇಡ್ಕರ್ ಭವನ ನಮಗೆಲ್ಲರಿಗೂ
ಸ್ಪೂರ್ತಿಯ ಮೂಲವಾಗಿದೆ.ಕೆಲವು ವಾರಗಳ ಹಿಂದೆ
ಮುಂಬೈಯ ಬಾಬಾ ಸಾಹೇಬ್ ಚೈತ್ಯ ಭೂಮಿಯ
ಪಕ್ಕದಲ್ಲಿ ಸ್ಮಾರಕವೊಂದನ್ನು
ಉದ್ಘಾಟಿಸಲು ಹೋಗಿದ್ದೆ. ಇಲ್ಲಿಯೇ
ಅಂಬೇಡ್ಕರ್ ಅವರು ತಮ್ಮ
ಜೀವನದಲ್ಲಿ
ಇಷ್ಟೊಂದು ಸಾಧನೆ ಮಾಡಿದ
ಸ್ಥಳವಾಗಿದೆ ಎಂದರು.
ಇಂದು ವಿದೇಶಗಳಿಗೆ ಅಧ್ಯಯನಕ್ಕೆಂದು
ತೆರಳುವ ದಲಿತ ಮಕ್ಕಳಿಗೆ, ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳಿಗೆ ಶಿಷ್ಯ ವೇತನ
ನೀಡುತ್ತದೆ. ಅವರಿಗೆ ಪ್ರೋತ್ಸಾಹ
ನೀಡುತ್ತದೆ ಎಂದು ಹೇಳಿದರು.
Comments
Post a Comment