೬೦ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ::

ಶನಿವಾರ - ಅಕ್ಟೋಬರ್ -31-2015
ಬೆಂಗಳೂರು, ಅ. 30: ನಿವೃತ್ತ ನ್ಯಾಯಮೂರ್ತಿ
ಎ.ಜೆ. ಸದಾಶಿವ, ಹಿರಿಯ ಸಾಹಿತಿ ಎಚ್.ಎಲ್.
ಕೇಶವಮೂರ್ತಿ, ಹಿರಿಯ ನಟಿ ಸಾಹುಕಾರ್ ಜಾನಕಿ ಮತ್ತು
ಮಂಗಳಮುಖಿ ಅಕೈ ಪದ್ಮಶಾಲಿ ಸೇರಿ ವಿವಿಧ
ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ
60 ಮಂದಿಗೆ ರಾಜ್ಯ ಸರಕಾರ 2015ನೇ ಸಾಲಿನ
ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು
ನಿರ್ಧರಿಸಿ ಪಟ್ಟಿ ಪ್ರಕಟಿಸಿದೆ.
ಸಾಹಿತ್ಯ, ರಂಗಭೂಮಿ,
ಸಂಗೀತ-ನೃತ್ಯ, ಚಿತ್ರಕಲೆ-
ಶಿಲ್ಪಕಲೆ, ಯಕ್ಷಗಾನ-ಬಯಲಾಟ, ಕೃಷಿ-ಪರಿಸರ,
ವಿಜ್ಞಾನ, ವೈದ್ಯಕೀಯ, ಸಿನಿಮಾ-
ಕಿರುತೆರೆ, ಸಮಾಜ ಸೇವೆ, ನ್ಯಾಯಾಂಗ,
ಕ್ರೀಡೆ, ಜಾನಪದ, ಮಾಧ್ಯಮ,
ಹೊರನಾಡು, ಸಂಘ ಸಂಸ್ಥೆ
ಮತ್ತು ಸಂಕೀರ್ಣ ಕ್ಷೇತ್ರಗಳಲ್ಲಿ
ಗಣನೀಯ ಸೇವೆ ಸಲ್ಲಿಸಿದ 60
ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲು
ರಾಜ್ಯ ಸರಕಾರ ನಿರ್ಧರಿಸಿದೆ.
ಸಾಹಿತ್ಯ: ಡಾ. ಕೆ.ಜಿ. ನಾಗರಾಜಪ್ಪ (ತುಮಕೂರು), ಡಾ.
ಜಿನದತ್ತ ದೇಸಾಯಿ (ಬೆಳಗಾವಿ), ಶ್ರೀಮತಿ
ಆರ್ಯಾಂಭ ಪಟ್ಟಾಭಿ (ಮೈಸೂರು), ಡಾ.
ವೀರೇಂದ್ರ ಸಿಂಪಿ
(ಬೀದರ್), ಎಚ್.ಎಲ್. ಕೇಶವಮೂರ್ತಿ
(ಮಂಡ್ಯ).
ರಂಗಭೂಮಿ: ಎಚ್.ಜಿ. ಸೋಮಶೇಖರರಾವ್-
ಹವ್ಯಾಸಿ (ಬೆಂಗಳೂರು), ಬಿ. ಕರಿಯಪ್ಪ
ಮಾಸ್ತರ್- ಹಾರ್ಮೋನಿ (ರಾಯಚೂರು),
ಶ್ರೀಮತಿ ಮುಮ್ತಾಜ್ ಬೇಗಂ- ವೃತ್ತಿ
ಕಂಪನಿ ನಟಿ( ಗದಗ),
ಸಂಜೀವಪ್ಪ ಗಬೂರು- ವೃತ್ತಿ
ಕಂಪನಿ ನಟ(ರಾಯಚೂರು), ವೀಣಾ
ಆದವಾನಿ-ಪೌರಾಣಿಕ(ಬಳ್ಳಾರಿ).
ಸಂಗೀತ-ನೃತ್ಯ:
ಶ್ರೀರಾಮುಲು-ನಾದಸ್ವರ(ಕೋಲಾರ),
ಲೋಕೇಶದಾಸ್- ಹರಿಕಥೆ(ಹಾಸನ),
ಖಾಸೀಂಸಾಬ್ ಜಮಾದಾರ್- ತಬಲ
(ಉತ್ತರ ಕನ್ನಡ), ಶೋಭ ಆರ್.ಹುಯಿಲಗೋಳ-
ಸುಗಮಸಂಗೀತ( ಗದಗ), ಚಿತ್ರಾ
ವೇಣುಗೋಪಾಲ್-ನೃತ್ಯ(ಬೆಂಗಳೂರು).
ವಿಜ್ಞಾನ: ಎ.ಎಸ್. ಕಿರಣ್ಕುಮಾರ್-ಇಸ್ರೋ
(ಚಿಕ್ಕಮಗಳೂರು), ಪ್ರೊ. ಅಬ್ದುಲ್
ಅಜೀಜ್- ಅರ್ಥಶಾಸ್ತ್ರ(ಕೋಲಾರ).
ವೈದ್ಯಕೀಯ: ಡಾ.ಆರ್.ಕೆ. ಸರೋಜ
(ಚಿಕ್ಕಬಳ್ಳಾಪುರ)
ಕೃಷಿ-ಪರಿಸರ: ಡಾ. ಪ್ರಕಾಶ್ ಭಟ್-ಪರಿಸರ(ಧಾರವಾಡ),
ಡಾ. ಮಲ್ಲಣ್ಣ ನಾಗರಾಳ (ಬಾಗಲಕೋಟೆ), ಬನ್ನೂರು
ಕೃಷ್ಣಪ್ಪ (ಮೈಸೂರು), ಮುತ್ತಣ್ಣ ಪೂಜಾರ (ಹಾವೇರಿ).
ಯಕ್ಷಗಾನ-ಬಯಲಾಟ: ಮಾರ್ಗೋಳಿ ಗೋವಿಂದ
ಶಿರೇಗಾರ (ಉಡುಪಿ), ಮೂಡಂಬೈಲು ಗೋಪಾಲಕೃಷ್ಣ
ಶಾಸ್ತ್ರಿ (ದಕ್ಷಿಣ ಕನ್ನಡ), ಸಕ್ರವ್ವ ಯಲ್ಲವ್ವ
ಪಾತ್ರೋಟ -ಸಣ್ಣಾಟ( ಬೆಳಗಾವಿ), ತಮ್ಮಣ್ಣಾಚಾರ್-
ಸೂತ್ರದ ಗೊಂಬೆ(ಮೈಸೂರು).
ಚಿತ್ರಕತೆ-ಶಿಲ್ಪಕಲೆ: ಕಮಲಾಕ್ಷಿ ಎಂ.ಜೆ
(ಬೆಂ. ಗ್ರಾಮಾಂತರ), ಪಿ.ಎಸ್.ಕಡೇಮನಿ
(ವಿಜಯಪುರ), ಮಲ್ಲಪ್ಪ ಮಳಿಯಪ್ಪ ಬಡಿಗೇರ
(ಬಾಗಲಕೋಟೆ), ಮರಿಸ್ವಾಮಿ
(ಬೆಂ.ಗ್ರಾಮಾಂತರ).
ಸಿನಿಮಾ-ಕಿರುತೆರೆ: ಸಾಹುಕಾರ್ ಜಾನಕಿ (ಬೆಂಗಳೂರು),
ಸದಾಶಿವ ಬ್ರಹ್ಮಾವರ (ಧಾರವಾಡ), ಸಾಧು ಕೋಕಿಲ
(ಬೆಂಗಳೂರು), ಶನಿಮಹದೇವಪ್ಪ
(ಮಂಡ್ಯ).
ಸಂಕೀರ್ಣ: ಎಚ್.ಎಸ್.
ಪಾಟೀಲ (ಕೊಪ್ಪಳ),
ಲಕ್ಷ್ಮಣ್ ತೆಲಗಾವಿ (ಚಿತ್ರದುರ್ಗ),
ಫಕೀರಪ್ಪರೆಡ್ಡಿ ಬಸಪ್ಪ ರೆಡ್ಡಿ
ಗದ್ದನಕೇರಿ (ಗದಗ), ಎಸ್. ತಿಪ್ಪೇಸ್ವಾಮಿ (ಮೈಸೂರು).
ಹೊರನಾಡು: ಶಾರದ ರಾಜಣ್ಣ-
ಯು.ಎಸ್.ಎ(ರಾಮನಗರ).
ಸಮಾಜಸೇವೆ: ಎಂ.ಎಸ್. ಹೆಳವರ್ (ಚಿಕ್ಕಮಗಳೂರು)
, ಡಾ. ಕಾರಿನ್ ಕುಮಾರ್ (ಬೆಂಗಳೂರು),
ಮೀರಾ ಶ್ರೀನಿವಾಸ ಶಾನಭಾಗ
(ಉತ್ತರ ಕನ್ನಡ), ಡಾ. ಆರ್.ಆರ್. ಪದಕಿ
(ವಿಜಯಪುರ), ಅಕೈ ಪದ್ಮಶಾಲಿ-
ಮಂಗಳಮುಖಿ (ಬೆಂಗಳೂರು).
ನ್ಯಾಯಾಂಗ: ನಿವೃತ್ತ ನ್ಯಾ. ಎ.ಜೆ. ಸದಾಶಿವ
(ಮಂಡ್ಯ).
ಸಂಘ ಸಂಸ್ಥೆ: ಡಾ. ಫ.ಗು.ಹಳಕಟ್ಟಿ
ಸಂಶೋಧನಾ ಸಂಸ್ಥೆ (ವಿಜಯಪುರ).
ಜಾನಪದ: ಮಾಚಾರ್ ಗೋಪಾಲ ನಾಯಕ-ಸಿರಿ ಪಾಡ್ದಾನ
(ದಕ್ಷಿಣ ಕನ್ನಡ), ಅಪ್ಪಗೆರೆ ತಿಮ್ಮರಾಜು-ಗಾಯನ
(ರಾಮನಗರ), ಕೆಂಚಮಾದೇಗೌಡ-
ಗೊರವಕುಣಿತ (ಚಾಮರಾಜನಗರ),
ಹನಿಫಾ ಎಂ. ಶೇಖ್- ತತ್ವಪದ (ಕಲಬುರಗಿ),
ಗುರುಲಿಂಗಪ್ಪ ವೀರ ಸಂಗಪ್ಪ
ಕರಡಿ- ಕರಡಿ ಮಜಲು(ಬಾಗಲಕೋಟೆ), ಮಾರಿಯಮ್ಮ
ಬಸಣ್ಣ ಶಿರವಾಟಿ-ಬುರ್ರಕಥ (ಯಾದಗಿರಿ).
ಮಾಧ್ಯಮ: ಕಲ್ಲೇ ಶಿವೋತ್ತಮರಾವ್ (ಉಡುಪಿ),
ಪ್ರೊ.ಎಚ್.ಎಸ್. ಈಶ್ವರ್
(ಶಿವಮೊಗ್ಗ), ನಾಗಮಣಿ ಎಸ್.ರಾವ್
(ಬೆಂಗಳೂರು), ಹನುಮಂತ ಹೂಗಾರ (ಧಾರವಾಡ)
, ನಾಗಣ್ಣ-ಪ್ರಜಾ ಪ್ರಗತಿ (ತುಮಕೂರು).
ಕ್ರೀಡೆ: ಪಾಂಡಂಡ ಕುಟ್ಟಪ್ಪ-
ಹಾಕಿ (ಕೊಡಗು), ವಿನಯ್ಕುಮಾರ್-
ಕ್ರಿಕೆಟ್ (ದಾವಣಗೆರೆ), ಎಂ. ನಿರಂಜನ್-
ಈಜು-ವಿಕಲಚೇತನ (ಬೆಂಗಳೂರು).

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು