ಇನ್ನು ವಿದೇಶಿಯರಿಗೆ ಭಾರತದಲ್ಲಿ ಬಾಡಿಗೆ ತಾಯಂದಿರು ಸಿಗುವುದಿಲ್ಲ...! Foreigners cannot have children through Indian surrogate mothers:
ನವದೆಹಲಿ,ಅ.28- ವಿದೇಶಿ ದಂಪತಿಗಳು
ಭಾರತಕ್ಕೆ ಬಂದು ಇಲ್ಲಿ ಬಾಡಿಗೆ
ತಾಯಂದಿರನ್ನು ಪಡೆದು ಸಂತಾನ ಸಮಸ್ಯೆ
ಬಗೆಹರಿಸಿಕೊಳ್ಳುವಂತಿಲ್ಲ.
ಇದುವರೆಗೆ ವಿದೇಶದಿಂದ ಬರುವ ದಂಪತಿ
ಭಾರತದಲ್ಲಿ ಬಡ ಮಹಿಳೆಯರ ಗರ್ಭವನ್ನು ಬಾಡಿಗೆ
ಪಡೆದು ತಮ್ಮ ಸಂತಾನ
ವೃದ್ಧಿಸಿಕೊಳ್ಳುವ ಮೂಲಕ
ನಡೆಸುತ್ತಿದ್ದ ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ
ಸಕಲ ಸಿದ್ದತೆಗಳನ್ನು ನಡೆಸಿದೆ. ಈ ಕುರಿತಂತೆ
ಇಂದು ಕೇಂದ್ರ ಸರ್ಕಾರ ಸರ್ವೋಚ್ಛ
ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ.
ಇನ್ನು ಮುಂದೆ ಭಾರತವು ಈ ವಿಶ್ವದ ಬಾಡಿಗೆ
ತಾಯಂದಿರ ರಾಜಧಾನಿ ಎಂಬ
ಅಪಖ್ಯಾತಿಗೆ ಗುರಿಯಾಗಲು ಬಿಡುವುದಿಲ್ಲ
ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ
ತಿಳಿಸುವಂತೆ ಉನ್ನತ ಮಟ್ಟದ ಸಭೆಯ
ನಂತರ ಮೋದಿ ಸರ್ಕಾರ ಸಾಲಿಸಿಟರ್ ಜನರಲ್
ರಂಜೀತ್ ಕುಮಾರ್ ಅವರಿಗೆ ನಿರ್ದೇಶನ
ನೀಡಿದ್ದ ಹಿನ್ನೆಲೆಯಲ್ಲಿ ಎಸ್ಜಿ
ರಂಜಿತ್ಕುಮಾರ್ ಈ ಪ್ರಮಾಣ ಪತ್ರ
ಸಲ್ಲಿಸಿದ್ದಾರೆ.
ಆದರೆ ಭಾರತೀಯರಿಗೆ ಈ ಬಾಡಿಗೆ
ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವ
ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿರುವ
ರಂಜಿತ್ ಕುಮಾರ್ ವಿದೇಶಿ ದಂಪತಿಗಳು
ಅಲ್ಲಿಂದ ಭ್ರೂಣವನ್ನು ತಂದು ಇಲ್ಲಿ
ಬಾಡಿಗೆ ತಾಯಿ ಮೂಲಕ ಮಗು ಪಡೆಯುವಂತಿಲ್ಲ
ಎಂದು ಹೇಳಿದ್ದಾರೆ. ಇದೇ ವೇಳೆ ವಿದೇಶಿ ಭ್ರೂಣವನ್ನು
ಇಲ್ಲಿ ಅಭಿವೃದ್ಧಿಪಡಿಸಿಕೊಳ್ಳುವ
ಮುಕ್ತ ಅವಕಾಶ ನೀಡುವ 2013ರ
ಕಾಯ್ದೆಯನ್ನು ಹಿಂಪಡೆಯಲಾಗಿದೆ.
ಈ ಮೊದಲು ವಿದೇಶಿಯರು ಇಲ್ಲಿ
ಬಾಡಿಗೆ ಗರ್ಭಗಳನ್ನು ಪಡೆಯುವ ವ್ಯವಸ್ಥೆಯನ್ನು
ನಿಷೇಧಿಸುವಂತೆ ಸುಪ್ರೀಂಕೋರ್ಟ್
ಸರ್ಕಾರಕ್ಕೆ ಸೂಚಿಸಿತ್ತು. ವಿದೇಶಿಯರು ಭಾರತದಲ್ಲಿನ
ಬಡ ಮಹಿಳೆಯರ ಮೂಲಕ ತಮ್ಮ ಸಂತಾ
ಪಡೆಯುತ್ತಿದ್ದು, ಇದು ಇಲ್ಲಿನ ಮಹಿಳೆಯರ
ಶೋಷಣೆಗೆ ಕಾರಣವಾಗಿದೆ. ಇದು ಯಾರ ವಿರುದ್ಧದ
ಕ್ರಮವೂ ಅಲ್ಲ. ಕೇವಲ ಬಡ ಹೆಣ್ಣು ಮಕ್ಕಳ ಶೋಷಣೆ
ತಡೆಯುವುದೇ ಮೂಲ ಉದ್ದೇಶ ಎಂದು
ಕೇಂದ್ರ ಹೇಳಿದೆ.
New Delhi: The Union government on
Wednesday notified the Apex Court
regarding a ban on commercial
surrogacy in the country.
Reports have stated that the
government will not permit foreign
couples on having a child through
Indian surrogate mothers.
A high-level meet by the Modi
government concluded that India will
not be turned into the surrogacy capital
of the world, but they decided that
surrogacy would be an option for
Indians to have a child.
An official source said that the Indian
government was not in favour of
commercial surrogacy.
Though a ruling from the Supreme Court
had stated that commercial surrogacy
should not be allowed, the practice
continued without a legal backing.
It should be noted that a bench
comprising Justices Ranjan Gogoi and
NV Ramana had expressed concern as
several issues with regard to
commercial surrogacy were not covered
under Indian law but it was still being
practiced.
The bench, refusing to stay the 2013
notification, added that trading of the
human embryo led to surrogacy
tourism.
However, the government was
instructed on bringing commercial
surrogacy under the law. They
government was also asked to clarify on
whether the woman who donated her
egg under commercial surrogacy had to
be called the mother or the surrogate
and genetic person could be referred to
as the mother. The Centre had to clarify
on the economic and psychological
exploitation of the surrogate mother and
whether the practice was inconsistent
with dignity of womanhood.
Comments
Post a Comment