ಕಾರ್ಮಿಕರ ಕನಿಷ್ಠ ವೇತನ 10.520ಕ್ಕೆ ನಿಗದಿ : ಅಂತರ್ಜಾಲದಲ್ಲಿ ಸಕಲ ಮಾಹಿತಿ:-


ಬೆಂಗಳೂರು, ನ.27- ಕಾರ್ಮಿಕ ಇಲಾಖೆಯ 80
ವರ್ಷಗಳ ಇತಿಹಾಸದಲ್ಲಿ ಇದೇ
ಮೊದಲನೆ ಬಾರಿಗೆ 23 ವಿವಿಧ
ಉದ್ಯಮಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ
ತಿಂಗಳಿಗೆ 10520 ರೂ. ನಿಗದಿ ಮಾಡಿ ಕಾರ್ಮಿಕ
ಇಲಾಖೆ ಅಧಿಸೂಚನೆ ಹೊರಡಿಸಿದೆ.
ನ.20ರಂದು ಅಧಿಸೂಚನೆ ಪ್ರಕಟವಾಗಿದ್ದು ,
ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಧಿ
ನೀಡಲಾಗಿದೆ. ಮುಂದಿನ
ಏ.1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ.
ಕಾರ್ಮಿಕ ಇಲಾಖೆಯ ವೆಬ್ಸೈಟ್ ಉದ್ಘಾಟನೆ
ನಂತರ ಸಚಿವ ಪರಮೇಶ್ವರ್ ನಾಯಕ್ ಕನಿಷ್ಠ
ವೇತನ ನಿಗದಿಯನ್ನು ಪ್ರಕಟಿಸಿದರು. ನೂತನ
ಅಧಿಸೂಚನೆಯಂತೆ 23 ಉದ್ದಿಮೆಗಳಲ್ಲಿ ಕೆಲಸ
ಮಾಡುವ ಸುಮಾರು 32 ಲಕ್ಷ ಕಾರ್ಮಿಕರಿಗೆ
ಅನುಕೂಲವಾಗಲಿದೆ. ಕುಶಲವಲ್ಲದ ತಾಂತ್ರಿಕರಿಗೆ
ಮಾಸಿಕ 10500 ರೂ., ಅರೆಕುಶಲ ಮತ್ತು ಕುಶಲ
ಕಾರ್ಮಿಕರು ಇದಕ್ಕಿಂತಲೂ ಹೆಚ್ಚಿನ ವೇತನ
ಪಡೆಯುತ್ತಾರೆ. ದೇಶದಲ್ಲೇ ಪ್ರಥಮ ಬಾರಿಗೆ ಕನಿಷ್ಠ
ವೇತನ ಪರಿಷ್ಕರಣೆ ಮಾಡಲಾಗಿದೆ ಎಂದರು.
ಆಹಾರ ಸಂಸ್ಕರಣೆ, ಆಹಾರ ಪದಾರ್ಥಗಳ
ಪ್ಯಾಕಿಂಗ್ ಲಾಂಡ್ರಿ ಉದ್ಯಮ, ಮಿನಿ
ಸಿಮೆಂಟ್ ಪ್ಲ್ಯಾಂಟ್, ಟಿಂಬರ್
ಡಿಪೊ, ಎಲೆಕ್ಟ್ರಾನಿಕ್ ಉದ್ಯಮ,
ಮದ್ಯ ತಯಾರಿಕೆ ಉದ್ಯಮ, ಬೈಕ್ ತಯಾರಿಕೆ
ಉದ್ಯಮ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ
ಕಾರ್ಮಿಕರು , ಮನೆಗೆಲಸ ಕಾರ್ಮಿಕರು, ಎಲೆಕ್ಟ್ರೋ
ಪ್ಲೇಟಿಂಗ್ ಉದ್ಯಮ, ಗ್ಲಾಸ್ ಉದ್ಯಮ,
ಹಾಲು ಉತ್ಪಾದನೆ ಸಂಗ್ರಹಣೆ, ಹಂಚಿಕೆ
ಕ್ಷೇತ್ರದ ಕಾರ್ಮಿಕರಿಗೆ ಖಾಸಗಿ ಫೈನಾನ್ಸ್ ಮತ್ತು
ಚಿಟ್ಫಂಡ್ ಕಾರ್ಮಿಕರಿಗೆ, ಆಯುರ್ವೇದ,
ಹೋಮಿಯೋಪಥಿ ಔಷಧ ತಯಾರಿಕೆ ಉದ್ಯಮ, ಸ್ಟೂಲ್,
ಅಲ್ಮೆರಾ, ಟೇಬಲ್ ಮತ್ತು ಪಿಠೋಪಕರಣ, ಆಸ್ಪತ್ರೆ,
ನರ್ಸಿಂಗ್ ಹೋಂ, ಕ್ಲಬ್ಗಳು, ವೃತ್ತಿಪರ
ಔಷಧ, ಗ್ರಾಹಕ ಉದ್ಯಮ, ಸಿನಿಮಾ ಉದ್ಯಮ,
ಮ್ಯಾನ್ಯುಫ್ಯಾಕ್ಚರಿಂಗ್ ಉದ್ಯಮ,
ಸಾರ್ವಜನಿಕ ಸಾರಿಗೆ ಉದ್ಯಮದಲ್ಲಿ ಕೆಲಸ ಮಾಡುವ
ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ
ಅನ್ವಯಗೊಳ್ಳುತ್ತವೆ. ಪ್ರತಿ
ತಿಂಗಳು ದಿನಕ್ಕೆ 8 ಗಂಟೆಯಂತೆ
ಕೆಲಸದ ಅವಧಿಯಿದ್ದು, 26 ಕೆಲಸದ ದಿನ, 4
ರಜಾದಿನಗಳನ್ನು ಲೆಕ್ಕ ಹಾಕಿ ವೇತನ
ನೀಡಬೇಕು. 8 ಗಂಟೆ ನಂತರ
ಮಾಡುವ ಹೆಚ್ಚುವರಿ ಅವಧಿಗೆ ಮತ್ತು ವಾರದ, ಹಬ್ಬದ
ರಜಾದಿನಗಳ ಕೆಲಸಕ್ಕೆ ಕನಿಷ್ಠ
ಮೊತ್ತದ ಎರಡು ಪಟ್ಟು
ಮೊತ್ತ ಪಾವತಿಸಬೇಕು. ಮಹಿಳೆಯರು,
ಪುರುಷರು ಒಂದೇ ರೀತಿ ಕೆಲಸ
ಮಾಡುತ್ತಿದ್ದರೆ ಸಮಾನ ವೇತನ
ನೀಡಬೇಕು,ತರಬೇತಿ ಅಭ್ಯರ್ಥಿಗಳಿಗೆ
ಕನಿಷ್ಠ ವೇತನದ ಶೇ.75ರಷ್ಟು ಶಿಷ್ಯವೇತನವಾಗಿ
ಪಾವತಿಸಲು ಅಧಿನಿಯಮದಲ್ಲಿ ಪ್ರಕಟಿಸಲಾಗಿದೆ.
ಆಕ್ಷೇಪಣೆಗಳನ್ನು ಸರ್ಕಾರದ ಅಪರ ಮುಖ್ಯ
ಕಾರ್ಯದರ್ಶಿ, ಕಾರ್ಮಿಕ ಇಲಾಖೆ, 4ನೇ ಮಹಡಿ, ವಿಕಾಸ
ಸೌಧ ಅಥವಾ ಕಾರ್ಮಿಕ ಆಯುಕ್ತರು ಕಾರ್ಮಿಕ ಭವನ,
ಬನ್ನೇರುಘಟ್ಟ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು