ಪಂಕಜ್ ಆಡ್ವಾಣಿಗೆ 15ನೇ ವಿಶ್ವ ಪ್ರಶಸ್ತಿ:-
ಚೀನಾದ ಜಾವೊ ಕ್ಸಿಂಗ್ಟಾಂಗ್
ವಿರುದ್ಧ ರೋಚಕ ಜಯ
ಹರ್ಗದಾ (ಈಜಿಪ್ಟ್): ವಿಶ್ವ ಸ್ನೂಕರ್
ಹಾಗೂ ಬಿಲಿಯರ್ಡ್ಸ್ನಲ್ಲಿ
ಇದುವರೆಗೂ 14 ಪ್ರಶಸ್ತಿಗಳನ್ನು
ಮುಡಿಗೇರಿಸಿಕೊಂಡಿರುವ
ಭಾರತದ ಪಂಕಜ್ ಆಡ್ವಾಣಿ ಶನಿವಾರ
ಈಜಿಪ್ಟ್ನಲ್ಲಿ ನಡೆದ ವಿಶ್ವ ಸ್ನೂಕರ್
ಚಾಂಪಿಯನ್ಷಿಪ್ನಲ್ಲಿ ಮತ್ತೊಂದು
ಯಶಸ್ಸು ಸಾಧಿಸಿ 15ನೇ ವಿಶ್ವ ಕಿರೀಟ
ತಮ್ಮದಾಗಿಸಿಕೊಂಡರು.
18 ವರ್ಷದ ಪ್ರತಿಭಾನ್ವಿತ ಆಟಗಾರ
ಚೀನಾದ ಜಾವೊ ಕ್ಸಿಂಗ್ಟಾಂಗ್
ನೀಡಿದ ಸವಾಲಿಗೆ ತಕ್ಕ ಉತ್ತರ ನೀಡಿದ
ಪಂಕಜ್ 8-6 ಅಂತರದಲ್ಲಿ ಜಯ
ತಮ್ಮದಾಗಿಸಿಕೊಂಡರು. 15
ಸುತ್ತುಗಳ ಫೈನಲ್
ಓಹೋರಾಟದಲ್ಲಿ ಪಂಕಜ್
ಆರಂಭದಲ್ಲೇ 5-2ರ ಮುನ್ನಡೆ
ಕಂಡಿದ್ದರು, ಆದರೆ ಕ್ಸಿಂಗ್ಟಾಂಗ್
ದಿಟ್ಟ ಹೋರಾಟ ನೀಡಿ ಸೋಲಿನ
ಅಂತರವನ್ನು ಕಡಿಮೆ
ಮಾಡಿಕೊಂಡರು.
ಸ್ನೂಕರ್ ಹಾಗೂ ಬಿಲಿಯರ್ಡ್ಸ್
ಎರಡರಲ್ಲೂ ವಿಶ್ವ ಚಾಂಪಿಯನ್ ಪಟ್ಟ
ಗೆದ್ದಿರುವ ಜಗತ್ತಿನ ಏಕೈಕ
ಆಟಗಾರರೆಂಬ ಹೆಗ್ಗಳಿಕೆಗೆ
ಪಾತ್ರರಾಗಿರುವ ಪಂಕಜ್ ಟೈಮ್
ಫಾರ್ಮೆಟ್ ವಿಭಾಗದಲ್ಲಿ 7 ಬಾರಿ ವಿಶ್ವ
ಚಾಂಪಿಯನ್ಪಟ್ಟ ಗೆದ್ದಿರುತ್ತಾರೆ. 2
ಬಾರಿ ಐಡಿಎಸ್ಎಫ್ ವಿಶ್ವ ಸಿಕ್ಸ್-ರೆಡ್ ಸ್ನೂಕರ್
ಚಾಂಪಿಯನ್ ಪಟ್ಟ
ತಮ್ಮದಾಗಿಸಿಕೊಂಡಿದ್ದಾರೆ.
ಪಾಯಿಂಟ್ ಫಾರ್ಮೆಟ್ನಲ್ಲಿ ಮೂರು
ಬಾರಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್
ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.
2014ರಲ್ಲಿ ವಿಶ್ವ ಟೀಮ್ ಬಿಲಿಯರ್ಡ್ಸ್
ಹಾಗೂ 2003ರಲ್ಲಿ ವಿಶ್ವ ಸ್ನೂಕರ್
ಚಾಂಪಿಯನ್ ಪಟ್ಟ ಗೆಲ್ಲುವ ಮೂಲಕ
ಪಂಕಜ್ ಒಟ್ಟು 15 ಬಾರಿ ವಿಶ್ವ
ಕಿರೀಟಕ್ಕೆ ಮುತ್ತಿಟ್ಟ
ಆಟಗಾರರೆನಿಸಿದ್ದಾರೆ.
Comments
Post a Comment