ಅಗ್ನಿ- 1 ಕ್ಷಿಪಣಿ ಪರೀಕ್ಷೆ ಯಶಸ್ವಿ:-
· NOV 27, 2015
ಬಾಲಸೋರ್ (ಒಡಿಶಾ)
ದೇಶೀಯವಾಗಿ ನಿರ್ಮಿಸಿದ ಪರಮಾಣು
ಸಾಮರ್ಥ್ಯ ದ ಅಗ್ನಿ-1 ಕ್ಷಿಪಣಿಯ
ಪರೀಕ್ಷಾ ಉಡಾವಣೆಯನ್ನು ಭಾರತ
ಶುಕ್ರವಾರ ಯಶಸ್ವಿಯಾಗಿ ನಡೆಸಿತು. 700 ಕಿ.ಮೀ.
ದೂರದ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿಯನ್ನು
ಒಡಿಶಾ ಕರಾವಳಿಯ ಪರೀಕ್ಷಾ
ವಲಯದಿಂದ ಯಶಸ್ವಿಯಾಗಿ
ಪರೀಕ್ಷಿಸಲಾಯಿತು.
ಭೂ ಮೇಲ್ಮೈಯಿಂದ ಮೇಲ್ಮೈಗೆ
ಒಂದೇ ಹಂತದಲ್ಲಿ ನೆಗೆಯುವ
ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪದ
(ವ್ಹೀಲರ್ ದ್ವೀಪ) ಸಮಗ್ರ
ಪರೀಕ್ಷಾ ವಲಯದ ಸಂಚಾರಿ
ಉಡಾವಕದ ಮೂಲಕ ಉಡಾಯಿಸಲಾಯಿತು. ಈ
ಉಡಾವಣೆಯನ್ನು ಭಾರತೀಯ ಸೇನೆಯ
ವ್ಯೂಹಾತ್ಮಕ ಪಡೆಗಳ ತರಬೇತಿ ಕವಾಯತಿನ
ಅಂಗವಾಗಿ ನಡೆಸಲಾಯಿತು. ಅದು
ಅತ್ಯಂತ ಸಮರ್ಪಕ ಉಡಾವಣೆಯಾಗಿತ್ತು
ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅತ್ಯಂತ ಸಮಪರ್ಕವಾಗಿ
ಪರೀಕ್ಷಿಸಲಾಗಿದೆ.
ಪ್ರಯೋಗ
ಪರೀಕ್ಷೆಯು ಯಶಸ್ವಿಯಾಗಿದೆ
ಎಂದು ಮೂಲಗಳು ಹೇಳಿವೆ.
Comments
Post a Comment