2016ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ
ಇಲಾಖೆ 2016ನೇ ಸಾಲಿನ ದ್ವಿತೀಯ
ಪಿಯು ಪರೀಕ್ಷೆಯನ್ನು ಮಾ.11
ರಿಂದ 28ರವರೆಗೆ ನಡೆಸಲಿದೆ.
ಈ ಹಿಂದೆ ಮಾ.10 ರಿಂದ 26ವರೆಗೆ
ನಡೆಸಲು ಪ್ರಸ್ತಾವಿತ ವೇಳಾಪಟ್ಟಿ
ಬಿಡುಗಡೆ ಮಾಡಿ ಸಾರ್ವಜನಿಕರಿಂದ
ಅಪೇಕ್ಷಣೆ ಸಲ್ಲಿಸಲು ಅವಕಾಶ
ಕಲ್ಪಿಸಿತ್ತು. ಅದಕ್ಕೆ ಸಾರ್ವಜನಿಕರಿಂದ
ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಈ
ಹಿನ್ನೆಲೆಯಲ್ಲಿ ಮಾ.11 ರಿಂದ 28ರವರೆಗೆ
ಪರೀಕ್ಷೆ ನಡೆಸಲು ಅಂತಿಮ
ವೇಳಾಪಟ್ಟಿ ಸಿದ್ಧಪಡಿಸಿದ ಪದವಿ ಪೂರ್ವ
ಶಿಕ್ಷಣ ಇಲಾಖೆ ಅದನ್ನು
ಸೋಮವಾರ ಬಿಡುಗಡೆ ಮಾಡಿದೆ.
ವೇಳಾ ಪಟ್ಟಿಯನ್ನು
ಕಾಲೇಜುಗಳ ಸೂಚನಾ ಫಲಕಗಳಲ್ಲಿ
ಪ್ರಕಟಿಸುವಂತೆ ಪದವಿ ಪೂರ್ವ ಶಿಕ್ಷಣ
ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್
ರಾಜ್ಯ ಎಲ್ಲಾ ಪದವಿ ಪೂರ್ವ
ಕಾಲೇಜುಗಳ ಪ್ರಾಂಶುಪಾಲರಿಗೆ
ಸೂಚಿಸಿದ್ದಾರೆ.
ಪರೀಕ್ಷಾ ದಿನಾಂಕ – ಸಮಯ
ಬೆ.9ರಿಂದ ಮ.12.15
ಮಾ.11 – ಜೀವಶಾಸ್ತ್ರ,
ಎಲೆಕ್ಟ್ರಾನಿಕ್ಸ್
ಮಾ.12 – ಇತಿಹಾಸ, ಗಣಕ ವಿಜ್ಞಾನ
ಮಾ.13 – ರಜಾ ದಿನ
ಮಾ.14 – ಭೂಗೋಳ ಶಾಸ್ತ್ರ,
ಗಣಿತ
ಮಾ.15 – ರಾಜ್ಯಶಾಸ್ತ್ರ, ಬೇಸಿಕ್
ಮ್ಯಾಥ್ಸ್
ಮಾ. 16 – ಅರ್ಥಶಾಸ್ತ್ರ ಮತ್ತು ಭೂ
ಗರ್ಭಶಾಸ್ತ್ರ
ಮಾ.17 – ಮನಃಶಾಸ್ತ್ರ, ಭೌತಶಾಸ್ತ್ರ
(ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ
ಸಂಗೀತ- ಮ.2ರಿಂದ ಸಂ.5.15)
ಮಾ.18 – ತರ್ಕಶಾಸ್ತ್ರ, ಶಿಕ್ಷಣ
ಮಾ.19 – ಐಚ್ಛಿಕ ಕನ್ನಡ,
ಸಂಖ್ಯಾಶಾಸ್ತ್ರ, ಗೃಹವಿಜ್ಞಾನ
ಮಾ.20 – ರಜಾ ದಿನ
ಮಾ.21 – ವ್ಯವಹಾರ ಅಧ್ಯಯನ,
ರಾಸಾಯನಶಾಸ್ತ್ರ
ಮಾ.22 – ಮರಾಠಿ, ಉರ್ದು,
ಸಂಸ್ಕೃತ, ಫ್ರೆಂಚ್
ಮಾ.23 – ಹಿಂದಿ, ತೆಲುಗು,
ಮಾ.24 – ಸಮಾಜಶಾಸ್ತ್ರ,
ಲೆಕ್ಕಶಾಸ್ತ್ರ
ಮಾ.25 – ಗುಡ್​ಫ್ರೖೆಡೆ- ರಜಾದಿನ
ಮಾ.26 – ಆಂಗ್ಲಭಾಷೆ
ಮಾ.27 – ರಜಾ ದಿನ
ಮಾ.28 – ಕನ್ನಡ, ತಮಿಳು,
ಮಲೆಯಾಳಂ, ಅರೇಬಿಕ್

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26