ಕೃಷಿ ವಿವಿಗಳಲ್ಲಿ ಒಟ್ಟು 211 ಹುದ್ದೆಗಳು*:


Nov 30, 2015, 04.00 AM IST

ರಾಯಚೂರು ಕೃಷಿ ವಿವಿ
167 ಹುದ್ದೆಗಳನ್ನು ಭರ್ತಿ ಮಾಡಲು ರಾಯಚೂರು ಕೃಷಿ
ವಿವಿಯು ಹೈ-ಕ ಭಾಗದ ಅರ್ಹ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ಖಾಲಿ ಇರುವ
ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ
ಅಧಿಸೂಚನೆ ಹೊರಡಿಸಿತ್ತು, ಆದರೆ
ಹಲವು ಕಾರಣಗಳಿಂದ ಈ ಅಧಿಸೂಚನೆಯನ್ನು
ಹಿಂಪಡೆದಿತ್ತು. ಇದೀಗ ಕೃಷಿ ವಿವಿಯು
ತಿದ್ದುಪಡಿಸಿಗೊಳಿಸಿದ
ಅಧಿಸೂಚನೆಯನ್ನು ಹೊರಡಿಸುವ
ಮೂಲಕ ಮತ್ತೆ ಹಲವು ಹುದ್ದೆಗಳಿಗೆ ಅರ್ಜಿ
ಸಲ್ಲಿಸುವಂತೆ ಅಭ್ಯರ್ಥಿಗಳನ್ನು ಕೋರಿದೆ.
ಆದರೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು
ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.
ಕೆಲವು ಹುದ್ದೆಗಳ ಹೆಸರು ಮತ್ತು
ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದ್ದು,
ಇದನ್ನು ಅಭ್ಯರ್ಥಿಗಳು ಗಮನಿಸಬೇಕಾಗಿದೆ.
ಹುದ್ದೆಗಳ ವಿವರಗಳು
1. ಧಾರವಾಡದ ಕೃಷಿ ವಿವಿಯಿಂದ
ವರ್ಗಗೊಂಡ ಬ್ಯಾಕ್ಲಾಗ್
ಹುದ್ದೆ: (ಜೂನಿಯರ್ ಎಂಜಿನಿಯರ್-1 (ಎಸ್ಸಿ)
2. ಹೈದರಬಾದ್-ಕರ್ನಾಟಕದ ಅಭ್ಯರ್ಥಿಗಳಿಗೆ
ಮೀಸಲಿಟ್ಟಿರುವ ಹುದ್ದೆಗಳ ವಿವರ
ಸರ್ವೀಸ್ ಪರ್ಸನಲ್ (ಡೈರೆಕ್ಟ್
ರಿಕ್ರೂಟ್ಮೆಂಟ್)
ವಿದ್ಯಾರ್ಹತೆಗಳೇನು? ಅಸಿಸ್ಟೆಂಟ್
ವೈದ್ಯಾಧಿಕಾರಿ-ಎಂಬಿಬಿಎಸ್ (50%
ಅಂಕಗಳು) + 3 ವರ್ಷ ಸೇವಾನುಭವ
ಜೂನಿಯರ್ ಎಂಜಿನಿಯರ್ (ಸಿವಿಲ್/ಅಗ್ರಿ)-
ಸಿವಿಲ್ ಅಥವಾ ಅಗ್ರಿ
ಎಂಜಿನಿಯರಿಂಗ್ನಲ್ಲಿ 3 ವರ್ಷದ
ಡಿಪ್ಲೊಮಾ
ಸ್ಟೆನೋಗ್ರಾಫರ್-ಪದವಿ + ಕನ್ನಡ ಅಥವಾ
ಇಂಗ್ಲಿಷ್ ಟೈಪ್ರೈಟಿಂಗ್
(ಸೀನಿಯರ್) ತೇರ್ಗಡೆ+ ಕಂಪ್ಯೂಟರ್
ಜ್ಞಾನ ಕಡ್ಡಾಯ
ಲೈಬ್ರೆರಿ ಅಸಿಸ್ಟೆಂಟ್ -ಲೈಬ್ರೆರಿ ಸೈನ್ಸ್ನಲ್ಲಿ
ಪದವಿ/ ಸ್ನಾತಕೋತ್ತರ ಪದವಿ (ದ್ವಿತೀಯ
ದರ್ಜೆಯಲ್ಲಿ ತೇರ್ಗಡೆ)
ಸೂಪರಿಂಡೆಂಟೆಂಡ್ (ಅಕೌಂಟ್ಸ್)-
ಪದವಿ + 5 ವರ್ಷ ಸೇವಾನುಭವ
ಪ್ರೋಗ್ರಾಂ ಅಸಿಸ್ಟೆಂಟ್/ಲ್ಯಾಬ್
ಟೆಕ್ನಿಷಿಯನ್/ಫಾರಂ ಮ್ಯಾನೇಜರ್-
ಯಾವುದಾದರೂ ಕೃಷಿ ವಿವಿಯಿಂದ ಪದವಿ
ಅಸಿಸ್ಟೆಂಟ್/ಟೈಪಿಸ್ಟ್/ಕಂಪ್ಯೂಟರ್
ಆಪರೇಟರ್-ಪದವಿ/ ಕನ್ನಡ ಅಥವಾ ಇಂಗ್ಲಿಷ್
ಟೈಪ್ರೈಟಿಂಗ್ (ಸೀನಿಯರ್) ತೇರ್ಗಡೆ+
ಕಂಪ್ಯೂಟರ್ ಜ್ಞಾನ ಕಡ್ಡಾಯ
ಫೀಲ್ಡ್ ಅಸಿಸ್ಟೆಂಟ್/ಲ್ಯಾಬ್
ಅಸಿಸ್ಟೆಂಟ್- ಎಸ್ಎಸ್ಎಲ್ಸಿ + ಯಾವುದೇ ಕೃಷಿ
ವಿವಿಯ 3 ತಿಂಗಳ ತರಬೇತಿ
ಕಾರ್ಯಕ್ರಮದಲ್ಲಿ ಭಾಗಿಯಾಗಿರಬೇಕು.
ಸೆಲ್ಫ್ ಅಸಿಸ್ಟೆಂಟ್-ಲೈಬ್ರೆರಿ ಸೈನ್ಸ್ನಲ್ಲಿ 2
ವರ್ಷಗಳ ಡಿಪ್ಲೊಮಾ ಕೋರ್ಸ್ + 2
ವರ್ಷಗಳ ಸೇವಾನುಭವ
ಫಾರ್ಮಸಿಸ್ಟ್-ಎಸ್ಎಸ್ಎಲ್ಸಿ/ಫಾರ್ಮಸಿಯಲ್ಲಿ
ಡಿಪ್ಲೊಮಾ
ಡ್ರಾಪ್ಟ್ಸ್ ಮನ್ (ಸಿವಿಲ್)-3 ವರ್ಷಗಳ
ಡಿಪ್ಲೊಮಾ (ಸಿವಿಲ್)
ಟೆಲಿಪೋನ್ ಆಪರೇಟರ್-ಪದವಿ +1 ವರ್ಷ ಸೇವಾನುಭವ
ಡ್ರೈವರ್- ಎಸ್ಎಸ್ಎಲ್ಸಿ +ಚಾಲನಾ ಪರವಾನಗಿ +1
ವರ್ಷ ಸೇವಾನುಭವ
ಸರ್ವೇಯರ್-ಎಸ್ಎಸ್ಎಲ್ಸಿ +ಸರ್ವೇಯರ್
ಟ್ರೈನಿಂಗ್ ಸರ್ಟಿಫಿಕೇಟ್
ಜೂನಿಯರ್ ಟೆಕ್ನಿಷಿಯನ್-ಎಸ್ಎಸ್ಎಲ್ಸಿ /ಐಟಿಐ
ಕಾರ್ಪೆಂಟರ್/ಪ್ಲಂಬರ್/ ವಾರ್ಡ್ಬಾಯ್/
ಫಿಶರ್ಮ್ಯಾನ್- 7ನೇ ತರಗತಿ ತೇರ್ಗಡೆ + ಆಯಾ
ಕ್ಷೇತ್ರಗಳಲ್ಲಿ 3ರಿಂದ 5 ವರ್ಷಗಳ ಸೇವಾನುಭವ
ವಯೋಮಿತಿ /ಸೇವಾವಧಿ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವಯೋಮಿತಿ
ನಿಗದಿಪಡಿಸಲಾಗಿದೆ. ನೇಮಕವಾದ ಅಭ್ಯರ್ಥಿಗಳು
ಕನಿಷ್ಠ 5 ವರ್ಷ ವಿವಿಯಲ್ಲಿ ಕಾರ್ಯನಿರ್ವಹಿಸುವುದು
ಕಡ್ಡಾಯ. ನಿವೃತ್ತಿ ವಯಸ್ಸು 60 ವರ್ಷ
ಆಗಿರುತ್ತದೆ.
ಶುಲ್ಕ ಪಾವತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ.
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 300 ರೂ.
ನಿಗದಿಪಡಿಸಲಾಗಿದೆ. ವಿಶ್ವವಿದ್ಯಾಲಯದ ಅಧಿಕೃತ
ವೆಬ್ಸೈಟ್ ನಲ್ಲಿ ಲಭ್ಯವಿರುವ ಚಲನ್ ಅನ್ನು ಪಡೆದು
ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾದ ಯಾವುದೇ ಶಾಖೆಯಲ್ಲಿ
ಪಾವತಿಸಬೇಕು. ಅಂತೆಯೇ ಒಮ್ಮೆ ಪಾವತಿಸಿದ
ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ವಿವಿಯ ವೆಬ್ಸೈಟ್ನಲ್ಲಿ
ಲಭ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಬೇಕು.
ಭರ್ತಿ ಮಾಡಿದ ಅರ್ಜಿಯ ಎನ್ವಲಾಪ್ ಮೇಲೆ 'ಯಾವ
ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇವೆ?'
ಎಂಬುದನ್ನು ಸ್ಪಷ್ವವಾಗಿ ನಮೂದಿಸಬೇಕು. ಅರ್ಜಿ
ಸಲ್ಲಿಸಬೇಕಾದ ವಿಳಾಸ: ದಿ ರಿಜಿಸ್ಟ್ರಾರ್, ಯುನಿವರ್ಸಿಟಿ
ಆಫ್ ಅಗ್ರಿಕಲ್ಚರ್ ಸೈನ್ಸ್. ಪಿ.ಬಿ. ನಂ. 329,
ರಾಯಚೂರು-584104.
ಕ್ವಿಕ್ಲುಕ್
ಒಟ್ಟು ಹುದ್ದೆಗಳು: 167
ಅರ್ಜಿ ಸಲ್ಲಿಸಲು ಕೊನೆಯ ದಿನ:
ಡಿಸೆಂಬರ್ 03, 2015
ಅರ್ಜಿ ಶುಲ್ಕ ಪಾವತಿಸಲು ಕೊನೆಯ
ದಿನ: ಡಿಸೆಂಬರ್ 03, 2015
ಹೆಚ್ಚಿನ ಮಾಹಿತಿಗೆ ವೆಬ್:
www.uasraichur.edu.in/

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK