270 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ:-
ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಎ, ಬಿ ಮತ್ತು
ಗ್ರೂಪ್ ಸಿ ಗೆ ಸೇರಿದ ಸುಮಾರು 270 ಹುದ್ದೆಗಳ ನೇಮಕಕ್ಕೆ
ಅಧಿಸೂಚನೆ ಹೊರಡಿಸಿದೆ. ಈ
ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ
ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ,
ಅಂಗವಿಕಲ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಇಲಾಖೆ, ಭೂಮಾಪನ
ಕಂದಾಯ ವ್ಯವಸ್ಥೆ, ಭೂದಾಖಲೆಗಳ ಇಲಾಖೆ,
ಕರ್ನಾಟಕ ಮತ್ತು ನಾಗರಿಕ ಸರಬರಾಜು ನಿಗಮ
ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ
ನಡೆಯಲಿದೆ.
ಹುದ್ದೆಗಳ ವಿವರ
ವಿದ್ಯಾರ್ಹತೆ:
ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ರಾಜ್ ಇಲಾಖೆಯಲ್ಲಿ ಸಹಾಯಕ
ಕಾರ್ಯಪಾಲಕ ಇಂಜಿನಿಯರ್ : ಸಿವಿಲ್ ಅಥವಾ
ಎನ್ವಿರಾನ್ಮೆಂಟಲ್
ಎಂಜಿನಿಯರಿಂಗ್ ಪದವಿ
ಪೌರಾಡಳಿತ ನಿರ್ದೇಶನಾಲಯ (ಸ್ಥಳೀಯ
ಸೇರಿ) ಕಾರ್ಯಪಾಲಕ ಅಭಿಯಂತರ/ ಅಭಿವೃದ್ಧಿ
ಅಧಿಕಾರಿ/ ಸಹಾಯಕ
ಕಾರ್ಯಪಾಲಕ ಅಭಿಯಂತರರು (ನೀರು
ಸರಬರಾಜು ಮತ್ತು ಒಳಚರಂಡಿ) : ಸಿವಿಲ್ ಅಥವಾ
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ
ಸಹಾಯಕ ಅಭಿಯಂತರರು(ಸಿವಿಲ್): ಸಿವಿಲ್
ಎಂಜಿನಿಯರಿಂಗ್ ಪದವಿ
ಪರಿಸರ ಅಭಿಯಂತರರು:
ಎನ್ವಿರಾನ್ಮೆಂಟಲ್ ಅಥವಾ ಕೆಮಿಕಲ್
ಎಂಜಿನಿಯರಿಂಗ್ನಲ್ಲಿ ಪದವಿ
ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ
ಸಹಾಯಕ ನಿರ್ದೇಶಕರು : ಬಿ.ಇ/ಬಿ.ಟೆಕ್/ಬಿಸಿನೆಸ್
ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ : ಕಲೆ
ಅಥವಾ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ
(ಎಂಎಸ್ಡಬ್ಲ್ಯೂ)
ಭೂದಾಖಲೆಗಳ ಸಹಾಯಕ ನಿರ್ದೇಶಕರು :
ಎಂಜಿನಿಯರಿಂಗ್ ಪದವಿ (ಸಿವಿಲ್) ಅಥವಾ
ಬಿ.ಟೆಕ್
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ನಿಯಮಿತದಲ್ಲಿ
ಸಹಾಯಕ ವ್ಯವಸ್ಥಾಪಕ: ಎಂಬಿಎ (ಶೇಕಡಾ 50
ಅಂಕಗಳು) ಜೊತೆಗೆ
ಮಾರ್ಕೆಟಿಂಗ್, ಫೈನಾನ್ಸ್ ಹಾಗೂ ಎಚ್ಆರ್
ವಿಭಾಗದಲ್ಲಿ ವಿಶೇಷ ಪರಿಣತಿ
ಹಿರಿಯ ಸಹಾಯಕ ಲೆಕ್ಕಪತ್ರ: ಕಾಮರ್ಸ್ನಲ್ಲಿ
ಪದವಿ
ಗುಣಮಟ್ಟ ಪರಿವೀಕ್ಷಕ: ಕೃಷಿ
ವಿಜ್ಞಾನದಲ್ಲಿ ಪದವಿ ಜೊತೆಗೆ
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮತ್ತು ಕೋ-
ಆಪರೇಷನ್ನಲ್ಲಿ ವಿಶೇಷ ಪರಿಣತಿ
ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ
18ರಿಂದ 35
ವರ್ಷದೊಳಗಿರಬೇಕು. ಪ್ರವರ್ಗ 2ಎ,
2ಬಿ, 3ಎ, 3ಬಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ
38 ವರ್ಷ ಹಾಗೂ ಎಸ್ಸಿ/ಎಸ್ಟಿ ಹಾಗೂ ಪ್ರವರ್ಗ-1ರ
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40
ಎಂದು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
-ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್
ತೆರೆದಾಗ ಅದರಲ್ಲಿ ONLINE APPLICATION
FOR TECHNICAL POSTS ಅನ್ನು ಕ್ಲಿಕ್ ಮಾಡಿ.
ಅಲ್ಲಿ ನೀಡಿರುವ ಸೂಚನೆಗಳನ್ನು
ಓದಿಕೊಳ್ಳಿ. ಕೊನೆಗೆ
Open Application Button ಅನ್ನು ಪ್ರೆಸ್ ಮಾಡಿ
ಮುಂದುವರೆಯಿರಿ.
-ಅರ್ಜಿ ಭರ್ತಿ ಮಾಡಿದ ಬಳಿಕ
ಮತ್ತೊಮ್ಮೆ Preview Button
ಒತ್ತಿ ಮುಂದುವರೆಯಬೇಕು.
-ಅರ್ಜಿಯ ವಿವರಗಳಲ್ಲಿ ಏನಾದರೂ ಬದಲಾವಣೆ
ಮಾಡಬೇಕಾದ್ದಲ್ಲಿ Button ಅನ್ನು ಒತ್ತಿ
ನೀವು ನಮೂದಿಸಿದ ವಿವರಗಳು
ಸರಿಯಾಗಿವೆಯೇ ಎಂದು ಪರಿಶೀಲಿಸಿ
ಅಪ್ಲೋಡ್ ಮಾಡಲು Next Button ಒತ್ತಿ. ಆಗ
ಕಂಪ್ಯೂಟರ್ ಪರದೆಯ ಮೇಲೆ
Registration ID ಮೂಡುತ್ತದೆ. ಅದನ್ನು ತಪ್ಪದೆ
ನೋಟ್ ಮಾಡಿಕೊಳ್ಳಿ.
-ಅರ್ಜಿಯನ್ನು ಭರ್ತಿ ಮಾಡುವ ಮುನ್ನ
ಅಭ್ಯರ್ಥಿಯು ತನ್ನ ಇತ್ತೀಚಿನ
ಭಾವಚಿತ್ರವನ್ನು ಒಂದು ಸ್ವಚ್ಛವಾದ ಬಿಳಿ
ಹಾಳೆಯ ಮೇಲೆ ಲಗತ್ತಿಸಿ ಅದರ ಕೆಳಗೆ ಕಪ್ಪು
ಶಾಯಿಯ ಸ್ಕೆಚ್/ಮಾರ್ಕರ್/ಪೆನ್ನಿನಿಂದ ಸಹಿ
ಮಾಡಿ. ನಂತರ ಭಾವಚಿತ್ರ ಮತ್ತು ಸಹಿಯನ್ನು
ಒಳಗೊಂಡಂತೆ (ಅಳತೆಯ
ವಿವರ ಕೆಪಿಎಸ್ಸಿ ವೆಬ್ಸೈಟ್ನಲ್ಲಿ)ಸ್ಕ್ಯಾನ್ ಮಾಡಿ
ಇಟ್ಟುಕೊಂಡಿರಬೇಕು.
-ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ
ಯಾವುದಾದರೂ ತಾಂತ್ರಿಕ
ತೊಂದರೆ ಅಥವಾ ಸಮಸ್ಯೆ
ಎದುರಾದಲ್ಲಿ ಸಹಾಯವಾಣಿ 7259270641 ಗೆ ಫೋನ್
ಮಾಡಿ ಮಾಹಿತಿ ಪಡೆಯಿರಿ
-ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ.
ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು
-ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು
ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಪ್ರತಿ ಹುದ್ದೆಗೂ
ಪ್ರತ್ಯೇಕ ಶುಲ್ಕ ಕಟ್ಟಬೇಕು
- ಶುಲ್ಕವನ್ನು ಎಲೆಕ್ಟ್ರಾನಿಕಲ್ ಅಂಚೆ
ಕಚೇರಿಗಳಲ್ಲಿ ಮಾತ್ರವೇ ಪಾವತಿಸಬೇಕು.
ನೇಮಕಾತಿ ಹೇಗೆ ನಡೆಯುತ್ತದೆ?
ಕರ್ನಾಟಕ ಆಹಾರ ಮತ್ತು ನಾಗರೀಕ
ಸರಬರಾಜು ನಿಗಮ ನಿಯಮಿತ (ಭಾಗ-2)ದಲ್ಲಿನ 76
ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
ಮೂಲಕ ನೇಮಕಾತಿ ನಡೆದರೆ ಮಿಕ್ಕ ಹುದ್ದೆಗಳಿಗೆ
(ಭಾಗ-1) ಸ್ಪರ್ಧಾತ್ಮಕ ಪರೀಕ್ಷೆ ಮತ್ತು
ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಭಾಗ -1: ಸ್ಪರ್ಧಾತ್ಮಕ ಪರೀಕ್ಷೆ ಮತ್ತು
ಸಂದರ್ಶನ
ಕನ್ನಡ ಕಡ್ಡಾಯ ಭಾಷಾ ಪರೀಕ್ಷೆ
ಕೆಪಿಎಸ್ಸಿ ನಡೆಸುವ ಎಸ್ಎಸ್ಎಲ್ಸಿ ಯ ಕನ್ನಡ
ಪ್ರಥಮ ಭಾಷೆಯ ಮಟ್ಟದ 150 ಅಂಕಗಳ
ಪರೀಕ್ಷೆಯಲ್ಲಿ ಕನಿಷ್ಠ 50
ಅಂಕಗಳೊಂದಿಗೆ
ಕಡ್ಡಾಯವಾಗಿ ತೇರ್ಗಡೆ
ಹೊಂದಿರಬೇಕು. ಆದರೆ
ಎಸ್ಎಸ್ಎಲ್ಸಿ ಅಥವಾ ಎಸ್ಎಸ್ಎಲ್ಸಿ
ಪರೀಕ್ಷೆಗಿಂತ ಮೇಲ್ಪಟ್ಟದ
ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು
ಮುಖ್ಯ ಭಾಷೆಯನ್ನಾಗಿ /ದ್ವಿತೀಯ
ಭಾಷೆ/ ಐಚ್ಛಿಕ ವಿಷಯವಾಗಿ ಅಥವಾ ಮೇಲಿನ
ಪರೀಕ್ಷೆಗಳಲ್ಲಿ ಕನ್ನಡ
ಮಾಧ್ಯಮದಲ್ಲಿ ವ್ಯಾಸಂಗ ಮಾಡಿ
ತೇರ್ಗಡೆಯಾಗಿರುವ ಅಭ್ಯರ್ಥಿಗಳು/ಕೆಪಿಎಸ್ಸಿ ಈ
ಹಿಂದೆ ನಡೆಸಲ್ಪಟ್ಟ ಕಡ್ಡಾಯ ಕನ್ನಡ ಭಾಷೆ
ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ
ಅಭ್ಯರ್ಥಿಗಳು ಕನ್ನಡ ಕಡ್ಡಾಯ ಭಾಷಾ
ಪರೀಕ್ಷೆ ಬರೆಯಬೇಕಾಗಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆ: ಇದು ಎರಡು
ಪತ್ರಿಕೆಗಳನ್ನು (ಪತ್ರಿಕೆ-1 ಮತ್ತು ಪತ್ರಿಕೆ-2)
ಒಳಗೊಂಡಿದ್ದು, ವಸ್ತುನಿಷ್ಠ
ಬಹು ಆಯ್ಕೆ ಮಾದರಿಯ
ಪ್ರಶ್ನೆಪತ್ರಿಕೆಗಳಾಗಿರುತ್ತವೆ.
ಪತ್ರಿಕೆ-1: ಸಾಮಾನ್ಯ ಪತ್ರಿಕೆ: 200 ಅಂಕಗಳು:
ಒಂದೂವರೆ ಗಂಟೆ
ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ): 200
ಅಂಕಗಳು: 2 ಗಂಟೆ
ಗಮನಿಸಿ: ಈ ಎರಡೂ ಪತ್ರಿಕೆಗಳಿಗೆ
ಸಂಬಂಧಿಸಿದ ಪಠ್ಯಕ್ರಮವನ್ನು
ಕೆಪಿಎಸ್ಸಿ ವೆಬ್ಸೈಟ್ನ ಸಿಲೆಬಸ್ ವಿಭಾಗದಲ್ಲಿ
ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು
ಅಲ್ಲಿಂದಲೇ ಮಾಹಿತಿ
ಪಡೆದುಕೊಳ್ಳಬಹುದು.
ಕನ್ನಡ ಕಡ್ಡಾಯ ಭಾಷಾ ಪರೀಕ್ಷೆಯಲ್ಲಿ
ಅರ್ಹರಾದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ
ಪರೀಕ್ಷೆಯಲ್ಲಿ ಗಳಿಸಿದ ಒಟ್ಟು
ಅಂಕಗಳ ಶೇಕಡಾವಾರು ಮತ್ತು ಚಾಲ್ತಿಯಲ್ಲಿರುವ
ಮೀಸಲಾತಿ ನಿಯಮಗಳ ಅನುಸಾರ
1:3ಅನುಪಾತದಲ್ಲಿ ಸಂದರ್ಶನಕ್ಕೆ
ಆಹ್ವಾನಿಸಲಾಗುತ್ತದೆ.
ಸಂದರ್ಶನ: ಸ್ಪರ್ಧಾತ್ಮಕ
ಪರೀಕ್ಷೆಗೆ ನಿಗದಿಪಡಿಸಿದ ಒಟ್ಟು
ಅಂಕಗಳ ಶೇಕಡಾ 12.5ರಷ್ಟು
ಸಂದರ್ಶನಕ್ಕೆ ನಿಗದಿಪಡಿಸಿದ ಗರಿಷ್ಠ
ಅಂಕಗಳಾಗಿರುತ್ತವೆ. ಸ್ಪರ್ಧಾತ್ಮಕ
ಪರೀಕ್ಷೆಯಲ್ಲಿ ಗಳಿಸಿದ ಒಟ್ಟು
ಅಂಕಗಳು ಮತ್ತು ಸಂದರ್ಶನದಲ್ಲಿ
ಗಳಿಸಿದ ಅಂಕಗಳ ಶೇಕಡಾವಾರು ಆಧರಿಸಿ
ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ.
ಭಾಗ-2
ಕರ್ನಾಟಕ ಆಹಾರ ಮತ್ತು ನಾಗರೀಕ
ಸರಬರಾಜು ನಿಗಮ ನಿಯಮಿತದಲ್ಲಿ ಖಾಲಿ ಇರುವ
ಮೂರೂ ವಿಭಾಗಗಳ ಹುದ್ದೆಗಳಿಗೂ ಸ್ಪರ್ಧಾತ್ಮಕ
ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ
ನಡೆಯುತ್ತದೆ.
ಎಲ್ಲಾ ಹುದ್ದೆಗಳಿಗೂ ಕಂಪ್ಯೂಟರ್ ಸಾಕ್ಷರತಾ
ಪರೀಕ್ಷೆ ಕಡ್ಡಾಯ. ಒಟ್ಟು 80
ಅಂಕಗಳ ಈ ಪರೀಕ್ಷೆಯಲ್ಲಿ
ಅಭ್ಯರ್ಥಿಗಳು ಶೇಕಡಾ 40 ಅಂಕಗಳು
ಪಡೆಯುವುದು ಕಡ್ಡಾಯ. ಪರೀಕ್ಷಾ ಅವಧಿ
ಒಂದೂವರೆ ಗಂಟೆ.
ಸ್ಪರ್ಧಾತ್ಮಕ ಪರೀಕ್ಷೆ: ಪತ್ರಿಕೆ-1
(ಸಾಮಾನ್ಯ ಜ್ಞಾನ) ಮತ್ತು ಪತ್ರಿಕೆ-2 (ನಿರ್ದಿಷ್ಟ
ಪತ್ರಿಕೆ) ಎರಡು ಪತ್ರಿಕೆಗಳನ್ನು
ಒಳಗೊಂಡಿದ್ದು, ತಲಾ 150
ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು 2
ಗಂಟೆ ಕಾಲಾವಕಾಶವಿರುತ್ತದೆ.
ಕ್ವಿಕ್ಲುಕ್
ಒಟ್ಟು ಹುದ್ದೆಗಳು: 270
ಅರ್ಜಿ ಸಲ್ಲಿಕೆ ಪ್ರಾರಂಭ: ನವೆಂಬರ್ 24,
2015
ಅರ್ಜಿ ಸಲ್ಲಿಸಲು ಕೊನೆಯ ದಿನ:
ಡಿಸೆಂಬರ್ 26, 2015
ಅರ್ಜಿ ಶುಲ್ಕ ಪಾವತಿಸಲು ಕೊನೆಯ
ದಿನ: ಡಿಸೆಂಬರ್ 28, 2015
ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ),
2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ :
300 ರೂ.
ಎಸ್ಸಿ/ಎಸ್ಟಿ, ಪ್ರವರ್ಗ-1, ಅಂಗವಿಕಲ ಹಾಗೂ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 25 ರೂ.
ಹೆಚ್ಚಿನ ಮಾಹಿತಿಗೆ ವೆಬ್: http://
kpsc.kar.nic.in
Comments
Post a Comment