ಎನ್ಪಿಎಸ್ಗೆ ತೆರಿಗೆ ವಿನಾಯಿತಿ ಸಂಭವ:-
ಇಇಇ ಸ್ಟೇಟಸ್ ನೀಡುವಂತೆ ವೇತನ
ಆಯೋಗದ ಶಿಫಾರಸು
ಹೊಸದಿಲ್ಲಿ: ಭವಿಷ್ಯ ನಿಧಿ(ಪಿಎಫ್)
ಹೂಡಿಕೆಗೆ ತೆರಿಗೆ ವಿನಾಯಿತಿ
ನೀಡಿದಂತೆಯೇ, ರಾಷ್ಟ್ರೀಯ
ಪಿಂಚಣಿ ಯೋಜನೆಗೂ(ಎನ್ಪಿಎಸ್)
ವಿನಾಯಿತಿ ನೀಡಲು ಕೇಂದ್ರ
ಸರಕಾರ ಚಿಂತನೆ ನಡೆಸಿದೆ.
ಎನ್ಪಿಎಸ್ ಸೇರಿದಂತೆ ಇತರೆ ಪಿಂಚಣಿ
ಯೋಜನೆಗಳಿಗೂ ತೆರಿಗೆ ವಿನಾಯಿತಿ
ನೀಡಬೇಕು. ಎನ್ಪಿಎಸ್ಗೆ ಪೂರ್ಣ ತೆರಿಗೆ
ವಿನಾಯಿತಿಯ ಇಇಇ ಸ್ಟೇಟಸ್
ನೀಡಬೇಕು ಎನ್ನುವ
ಶಿಫಾರಸನ್ನು ಏಳನೇ ವೇತನ
ಆಯೋಗ ಮಾಡಿದೆ. ಕೇಂದ್ರ
ಸರಕಾರಕ್ಕೆ ಗುರುವಾರ ಸಲ್ಲಿಕೆಯಾದ
ಆಯೋಗದ ವರದಿಯಲ್ಲಿರುವ ಎನ್ಪಿಎಸ್
ಪ್ರಸ್ತಾವನೆ ಜಾರಿಗೊಂಡರೆ,
ದುಡಿಯುವ ವರ್ಗಕ್ಕೆ
ಅನುಕೂಲವಾಗಲಿದೆ.
ಎನ್ಪಿಎಸ್ ಅನ್ನು ತೆರಿಗೆ ಮುಕ್ತವಾಗಿಸುವ
ಕುರಿತಾಗಿ ಮಾತನಾಡಿರುವ ಆರ್ಥಿಕ
ಸೇವೆಗಳ ಕಾರ್ಯದರ್ಶಿ ಅಂಜುಲಿ ಚಿಬ್
ದುಗ್ಗಲ್, ''ತೆರಿಗೆ ಮುಕ್ತಗೊಳಿಸಿ
ವಿನಾಯಿತಿ ನೀಡುವ ವಿಷಯಗಳಲ್ಲಿ
ಎನ್ಪಿಎಸ್ ಸಹ ಒಂದು. ಈ ಕುರಿತಾಗಿ
ಎಲ್ಲ ದೃಷ್ಟಿಯಿಂದಲೂ
ಪರಮಾರ್ಶಿಸಬೇಕಾದ ಅಗತ್ಯವಿದೆ,''
ಎಂದಿದ್ದಾರೆ.
ಸದ್ಯದ ನಿಯಮಗಳ ಪ್ರಕಾರ, ಎನ್ಪಿಎಸ್ನ
ಶ್ರೇಣಿ-1ರ ಖಾತೆಗಳು ಇಇಟಿ
ಸ್ಟೇಟಸ್ ಹೊಂದಿವೆ. ಅಂದರೆ,
ಹೂಡಿಕೆ ಮಾಡುವ ಹಣವು ತೆರಿಗೆ
ವ್ಯಾಪ್ತಿಗೆ ಬರುವುದಿಲ್ಲ. ಆದರೆ,
ಹಣವನ್ನು ವಾಪಸ್ ಪಡೆಯುವಾಗ ತೆರಿಗೆ
ಪಾವತಿಸಬೇಕಾಗುತ್ತದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು
ಅಭಿವೃದ್ಧಿ ಪ್ರಾಧಿಕಾರ(ಪಿಎಫ್ಆರ್ಡಿಎ) ಸಹ
ಎನ್ಪಿಎಸ್ಗೆ ತೆರಿಗೆ ವಿನಾಯಿತಿ ನೀಡುವ
ವಿಷಯಕ್ಕೆ ಒಲವು ಹೊಂದಿದೆ.
''ಸರಕಾರವು ತೆರಿಗೆ ಸ್ವರೂಪವನ್ನು
ಸೂಕ್ತವಾಗಿ ಬದಲಿಸಬೇಕು,''
ಎಂದು ಪ್ರಾಧಿಕಾರದ ಅಧ್ಯಕ್ಷ
ಹೇಮಂತ್ ಕಾಂಟ್ರ್ಯಾಕ್ಟರ್
ಹೇಳಿದ್ದಾರೆ.
ಪಿಎಫ್ಆರ್ಡಿಎ ಜತೆ ಸರಕಾರವು
ಸಮಾಲೋಚನೆ ನಡೆಸಿ ಎನ್ಪಿಎಸ್ನಲ್ಲಿ
ಹೂಡಿಕೆ ಆಯ್ಕೆಗಳನ್ನು
ಹೆಚ್ಚಿಸಬೇಕು. ಎನ್ಪಿಎಸ್ಗೆ
ಸಂಬಂಧಿಸಿದಂತೆ ಖಾತೆದಾರರ
ವೈಯಕ್ತಿಕ ಸಮಸ್ಯೆಗಳನ್ನು
ಇತ್ಯರ್ಥಗೊಳಿಸಲು ಒಂಬುಡ್ಸ್ಮನ್
ವ್ಯವಸ್ಥೆ ಜಾರಿಗೆ ಬರಬೇಕು
ಎನ್ನುವ ಶಿಫಾರಸುಗಳನ್ನು ಏಳನೇ
ವೇತನ ಆಯೋಗವು ತನ್ನ
ವರದಿಯಲ್ಲಿ ಸೇರಿಸಿದೆ.
93 ಲಕ್ಷ ಎನ್ಪಿಎಸ್ ಖಾತೆದಾರರು:
ಎನ್ಪಿಎಸ್ನ ನಿರ್ವಹಣಾ ಆಸ್ತಿಯು
ಒಂದು ಲಕ್ಷ ಕೋಟಿ ರೂ.ಗಳನ್ನು
ಈಗಾಗಲೇ ದಾಟಿದೆ. ಪ್ರಸ್ತುತ
ಎನ್ಪಿಎಸ್ ಈಗ 93 ಲಕ್ಷ ಖಾತೆದಾರರನ್ನು
ಹೊಂದಿದ್ದು, 1,00,163 ಕೋಟಿ
ರೂ.ಹೂಡಿಕೆ ಹಣವನ್ನು
ನಿರ್ವಹಿಸುತ್ತಿದೆ. ಎನ್ಪಿಎಸ್
ಖಾತೆದಾರರಲ್ಲಿ ರಾಜ್ಯ ಮತ್ತು
ಕೇಂದ್ರ ಸರಕಾರದ ನೌಕರರೇ
ಶೇ.50ರಷ್ಟಿದ್ದಾರೆ.
ಏನಿದು ಎನ್ಪಿಎಸ್?
ಇದೊಂದು ದೀರ್ಘಾವಧಿ ಪಿಂಚಣಿ
ಯೋಜನೆಯಾಗಿದ್ದು, ಇಲ್ಲಿ ಪ್ರತಿಫಲ
ಇಷ್ಟೇ ಬರುತ್ತದೆ ಎನ್ನುವ
ಖಾತರಿಯನ್ನು ಎಲ್ಲೂ
ನೀಡಲಾಗಿಲ್ಲ. ಆದರೆ, 2009ರಿಂದ ಈಚೆಗೆ
ಈಯೋಜನೆ ಶೇ.9.20ರಷ್ಟು ರಿಟನ್ಸ್
ಅನ್ನು ನೀಡಿದೆ. ಬಹುತೇಕ ಎಲ್ಲ
ಬ್ಯಾಂಕ್ಗಳಲ್ಲಿ,
ಪೋಸ್ಟಾಫೀಸಿನಲ್ಲಿ ಈ ಸೌಲಭ್ಯ ಇದೆ.
ಆನ್-ಲೈನ್ ಮುಖಾಂತರವೂ
ಎನ್ಪಿಎಸ್ ಖಾತೆಯನ್ನು ತೆರೆದು,
ನಿರ್ವಹಿಸುವ ಸೌಲಭ್ಯವಿದೆ.
ಇದಕ್ಕಾಗಿಯೇ ಇ-ಎನ್ಪಿಎಸ್
ಜಾರಿಯಲ್ಲಿದೆ.
Comments
Post a Comment