ಒರಿಸ್ಸಾದ ಕಡಲ ತೀರದಲ್ಲಿ ಇಂಟರ್ಸೆಪ್ಟರ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ::-
ಬಾಲಸೂರು (ಒರಿಸ್ಸಾ), ನ.22-ರಕ್ಷಣಾ ಇಲಾಖೆಯ
ಬಹುದಿನಗಳ ಅಗತ್ಯವಾಗಿದ್ದ ದೇಶೀ
ನಿರ್ಮಿತ ಖಾಂಡಾಂತರ ಕ್ಷಿಪಣೆಯನ್ನು
ಇಂದು ಒರಿಸ್ಸಾದ ಕಡಲ ತೀರದ
ಕ್ಷಿಪಣಿ ಉಡ್ಡಯನ ಕೇಂದ್ರದಿಂದ
ಪರೀಕ್ಷಾರ್ಥ ಯಶಸ್ವಿಯಾಗಿ
ಉಡಾಯಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ವಿಮಾನದ ಮಾದರಿಯಲ್ಲಿದ್ದ ಶತ್ರುವಿಮಾನ,
ಕ್ಷಿಪಣಿಗಳನ್ನು ಸಮರ್ಥವಾಗಿ ಭೇದಿಸುವ
ಸಾಮರ್ಥ್ಯದ ಕ್ಷಿಪಣಿಯ ಉಡಾವಣೆ
ಯಶಸ್ವಿಯಾಗಿದ್ದು, ಇದರಿಂದ ರಾಷ್ಟ್ರದ
ಸೇನಾಪಡೆಗೆ ಆನೆಯ ಬಲ ಬಂದಂತಾಗಿದೆ
ಎಂದು ರಕ್ಷಣಾ ಖಾತೆ ಮೂಲಗಳು ಹೇಳಿವೆ.
ವಿಜ್ಞಾನಿಗಳು ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ
ಇಂಟರ್ಸೆಪ್ಟರ್ (ಅಂತಃಛೇದ)
ಖಂಡಾಂತರ ಕ್ಷಿಪಣಿಯನ್ನು,
ಸುವ್ಯವಸ್ಥಿತವಾಗಿ ಬೆಳಗ್ಗೆ 9.46ಕ್ಕೆ ಸರಿಯಾಗಿ
ಉಡಾಯಿಸಲಾಯಿತು.
ಈ ಇಂಟರ್ಸೆಪ್ಟರ್ ಕ್ಷಿಪಣಿ 7.5
ಮೀಟರ್ ಉದ್ದವಿದೆ. ಅದರಲ್ಲಿ
ಗಣಕೀಕೃತ ವ್ಯವಸ್ಥೆಯೂ ಇದ್ದು,
ವಿದ್ಯುನ್ಮಾನ ಸ್ವಯಂಚಾಲಿತ ವ್ಯವಸ್ಥೆ
ಇದೆ. ವಿಶೇಷವೆಂದರೆ, ಇದು ತನ್ನದೇ ಆದ
ಸಂಚಾರಿ ಲಾಂಚರ್ ಕೂಡ
ಹೊಂದಿದೆ. ಇತ್ತೀಚೆಗೆ
ಡಾ.ಅಬ್ದುಲ್ಕಲಾಂ ಉಡಾವಣಾ ಕೇಂದ್ರ
ಎಂದು ಮರು ನಾಮಕರಣ ಮಾಡಲ್ಪಟ್ಟ
ವೀಲರ್ ಐಲ್ಯಾಂಡ್
ಕೇಂದ್ರದಿಂದ ಉಡಾಯಿಸಲಾಯಿತು
ಎಂದು ರಕ್ಷಣಾ ಮೂಲಗಳು ಹೇಳಿವೆ.
Comments
Post a Comment