ಭಾಗ್ಯಲಕ್ಷ್ಮೀ ಯೋಜನೆಯ ಸಮಗ್ರ ಮಾಹಿತಿ :-

ಬಿಪಿಎಲ್ ಕುಟುಂಬದ ಹೆಣ್ಮಕ್ಕಳಿಗೆ
ಭಾಗ್ಯಲಕ್ಷ್ಮೀ
BY ವಿಜಯವಾಣಿ ನ್ಯೂಸ್
· NOV 26, 2015
ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ
ಯೋಜನೆಗಳನ್ನು ಜಾರಿಗೆ
ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ
ಯೋಜನೆಗಳು ಅರ್ಹ
ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಈ
ಕೊರತೆ ನೀಗಿಸಿ
ಯೋಜನೆಗಳ
ಪ್ರಯೋಜನ ಜನಸಾಮಾನ್ಯರಿಗೆ
ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ಗುರುವಾರ
ಪ್ರಕಟಿಸುತ್ತಿರುವ 'ನಿಮ್ಮ ಹಕ್ಕಿಗೆ ನಮ್ಮ ಧ್ವನಿ'
ಮಾಹಿತಿ ಕೈಪಿಡಿ ಸರಣಿಯಲ್ಲಿ ಈ ವಾರ
ಭಾಗ್ಯಲಕ್ಷ್ಮೀ
ಯೋಜನೆಯ ಸಮಗ್ರ
ಮಾಹಿತಿಯನ್ನು ನೀಡಲಾಗಿದೆ.
ನಿರೂಪಣೆ: ನಾಗರತ್ನ. ಎಸ್
***
2001ರ ಜನಗಣತಿಯಂತೆ ಪ್ರಕಾರ
ರಾಜ್ಯದಲ್ಲಿನ ಲಿಂಗಾನುಪಾತದ ಪ್ರಕಾರ 1000
ಪುರುಷರಿಗೆ 964 ಮಹಿಳೆಯರಿದ್ದಾರೆ. ದಿನದಿಂದ
ದಿನಕ್ಕೆ ಇಳಿಯುತ್ತಿರುವ ಅನುಪಾತವನ್ನು ಸರಿದೂಗಿಸಿ,
ಹೆಣ್ಣು ಮಗುವಿನ ಹುಟ್ಟಿನಿಂದಲೇ ಆಕೆಯ
ಜೀವನಕ್ಕೆ ಹೆಚ್ಚಿನ ಮೌಲ್ಯ
ಕಲ್ಪಿಸುವುದರ ಜತೆಗೆ, ಲಿಂಗಾನುಪಾತ ಸರಿದೂಗಿಸುವುದು,
ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ
ತಡೆಗಟ್ಟುವಿಕೆ, ಆರ್ಥಿಕ ಸ್ವಾವಲಂಬಿಯನ್ನಾಗಿ
ಮಾಡುವುದು, ಹೆಣ್ಣುಮಗುವಿನ ಶಿಕ್ಷಣ,
ಆರೋಗ್ಯಮಟ್ಟ
ಉತ್ತಮಪಡಿಸಿ, ಸರ್ವಾಂಗೀಣ
ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2006-07ನೇ
ಸಾಲಿನಲ್ಲಿ 'ಭಾಗ್ಯಲಕ್ಷ್ಮೀ' ಎಂಬ
ಕಲ್ಯಾಣ ಯೋಜನೆ
ಜಾರಿಗೊಳಿಸಿದೆ.
***
ಯಾರು ಅರ್ಹರು?
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕಾರ್ಡ್​
ದಾರರು) ಗ್ರಾಮಾಂತರ ಹಾಗೂ ನಗರ
ಪ್ರದೇಶದಲ್ಲಿನ ಕುಟುಂಬಗಳ ಹೆಣ್ಣುಮಕ್ಕಳು
ಈ ಯೋಜನೆಯ
ಸದುಪಯೋಗ ಪಡೆಯಲು
ಅರ್ಹರಾಗಿರುತ್ತಾರೆ. ಪ್ರತಿ ಕುಟುಂಬದಲ್ಲಿ
ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ
ಯೋಜನೆಯ ಲಾಭ ಸಿಗಲಿದೆ.
3ಕ್ಕೂ ಹೆಚ್ಚು ಮಕ್ಕಳಿದ್ದರೆ ಈ
ಯೋಜನೆ
ಅನ್ವಯವಾಗುವುದಿಲ್ಲ.
***
ಇಬ್ಬರು ಹೆಣ್ಣುಮಕ್ಕಳಿಗೆ ಸೌಲಭ್ಯ
2008ರ ನಂತರ ಜನಿಸಿದ
ಮೊದಲನೇ ಹೆಣ್ಣುಮಗುವಿಗೆ 19,300
ರೂ. ಹಾಗೂ 2ನೇ ಹೆಣ್ಣುಮಗುವಿಗೆ 18,350 ರೂ.ನಿಶ್ಚಿತ
ಠೇವಣಿಯನ್ನು ಸರ್ಕಾರ ಎಲ್​ಐಸಿಗೆ
ನೀಡುತ್ತದೆ. ಹೆಣ್ಣುಮಗು 18 ವರ್ಷ
ಪೂರ್ಣಗೊಂಡ ಬಳಿಕ
ಮೊದಲನೇ ಮಗಳಿಗೆ 1,00,052 ರೂ.
ಹಾಗೂ 2ನೇ ಮಗಳಿಗೆ 1,00,097 ರೂ.
ಮೊತ್ತ ಸಿಗಲಿದೆ.
***
ಸವಲತ್ತುಗಳೇನು?
ಯೋಜನೆಗೆ ಒಳಪಟ್ಟ ಮಗುವು
15 ವರ್ಷ ಪೂರ್ಣಗೊಂಡು, 10ನೇ
ತರಗತಿ ಉತ್ತೀರ್ಣಳಾಗಿ, ಮುಂದಿನ
ವಿದ್ಯಾಭ್ಯಾಸ ಮುಂದುವರಿಸಲು ಆಸಕ್ತಿ
ಇದ್ದಲ್ಲಿ ಬಾಂಡನ್ನು ರಾಷ್ಟ್ರೀಕೃತ
ಬ್ಯಾಂಕ್​ಗಳಲ್ಲಿ ಅಡಮಾನವಿರಿಸಿ 50 ಸಾವಿರ
ರೂ.ವರೆಗೆ ಸಾಲ ಪಡೆದುಕೊಳ್ಳಬಹುದು.
***
ಅರ್ಜಿಯೊಂದಿಗೆ ಸಲ್ಲಿಸಬೇಕಾದ
ದಾಖಲೆ
ಅಂಗನವಾಡಿ/ಶಿಶು ಅಭಿವೃದ್ಧಿ
ಯೋಜನೆ/ಇಲಾಖೆ
ಉಪನಿರ್ದೇಶಕರ ಕಚೇರಿಯಿಂದ ಉಚಿತವಾಗಿ
ಅರ್ಜಿ ಪಡೆದು, ಬಿಪಿಎಲ್ ಪಡಿತರ ಚೀಟಿ,
ಮಗುವಿನ ಜನನ ನೋಂದಣಿ
ಪ್ರಮಾಣಪತ್ರ, ಪಾಲಕರೊಂದಿಗೆ
ಮಗುವಿನ ಭಾವಚಿತ್ರ, ಪರಿಶಿಷ್ಟ ಜಾತಿ/
ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣಪತ್ರ,
ಆರೋಗ್ಯ ಇಲಾಖೆಯಿಂದ
ಮಗುವಿಗೆ ರೋಗ
ನಿರೋಧಕ ಲಸಿಕೆ ಹಾಕಿಸಿದ ದಾಖಲೆ
ಪತ್ರ, ಚುಚ್ಚುಮದ್ದು ಲಸಿಕೆ ಕಾರ್ಡ್, ಶಾಶ್ವತ
ಕುಟುಂಬ ಯೋಜನೆ ಪದ್ಧತಿ
ಅಳವಡಿಸಿಕೊಂಡಿರುವ
ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು.
ಮಂಜೂರಾತಿಗೆ ಭಾರತೀಯ
ಜೀವವಿಮಾ ನಿಗಮಕ್ಕೆ (ಎಲ್​ಐಸಿ) ಮಾಹಿತಿ
ನೀಡಿರಬೇಕು.
***
ಪಾಲಕರ ವಿಮಾ ಸೌಲಭ್ಯ
2008ರ ನಂತರ ಜನಿಸಿದ ಮಕ್ಕಳ ಪಾಲಕರು
ಅಪಘಾತದಲ್ಲಿ ನಿಧನರಾದರೆ ಅಥವಾ ಅಪಘಾತದಲ್ಲಿ
ಪೂರ್ಣ ಅಂಗವಿಕಲರಾದರೆ ಆ ಪಾಲಕರ ಮಕ್ಕಳಿಗೆ
75 ಸಾವಿರ ರೂ. ವಿಮೆ ಸಿಗಲಿದೆ. ಅಪಘಾತದಲ್ಲಿ ಭಾಗಶಃ
ಅಂಗವಿಕಲರಾದರೆ 37,500 ರೂ, ಸಹಜ ಸಾವಿಗೆ
30 ಸಾವಿರ ರೂ. ವಿಮಾ ಮೊತ್ತ
ಮಕ್ಕಳಿಗೆ ಸಿಗಲಿದೆ. ಪಾಲಕರ ಸಾವಿನ ಬಳಿಕ ಮಗುವಿನ
ಜವಾಬ್ದಾರಿ ಹೊರುವ ಬೇರೆ
ಪೋಷಕರನ್ನು ನಾಮನಿರ್ದೇಶನ
ಮಾಡಿ, ಈ ಮಾಹಿತಿಯನ್ನು ಎಲ್​ಐಸಿಗೆ
ನೀಡಬೇಕು.
***
ಸಲ್ಲಿಕೆ ಹೇಗೆ?
ಅರ್ಜಿ ಜತೆಗೆ ಸಂಬಂಧಪಟ್ಟ
ದಾಖಲೆಗಳನ್ನು ಸ್ಥಳೀಯ
ಅಂಗನವಾಡಿ ಕಾರ್ಯಕರ್ತೆಯರಿಗೆ ಸಲ್ಲಿಸಬೇಕು.
ಅರ್ಜಿಯನ್ನು ಅಂಗನವಾಡಿ ಕಾರ್ಯಕರ್ತೆಯರ
ಮೇಲ್ವಿಚಾರಕಿಗೆ ತಲುಪಿಸಲಾಗುತ್ತದೆ. ಅವರು ಶಿಶು
ಅಭಿವೃದ್ಧಿ ಯೋಜನಾಧಿಕಾರಿಗಳಿಗೆ
ನೀಡುತ್ತಾರೆ.
ಯೋಜನಾಧಿಕಾರಿಗಳು ಜಿಲ್ಲಾ
ಉಪನಿರ್ದೇಶಕರಿಗೆ ಸಲ್ಲಿಸಿದ ನಂತರ, ಅರ್ಜಿ
ಪರಿಶೀಲಿಸಿ ಮಂಜೂರಾತಿ
ನೀಡಿ ಇಲಾಖೆ ಕೇಂದ್ರ ಕಚೇರಿಗೆ
ನೀಡುತ್ತಾರೆ. ಕೇಂದ್ರ
ಕಚೇರಿಯಿಂದ
ಪರಿಶೀಲನೆಗೊಂಡ
ನಂತರ ಮಾಹಿತಿಯನ್ನು ಎಲ್​ಐಸಿಗೆ
ಕಳುಹಿಸಲಾಗುತ್ತದೆ. ಇಲಾಖೆ ನೀಡಿದ
ಅನುದಾನಕ್ಕೆ ಅನುಗುಣವಾಗಿ ಭಾರತೀಯ
ಜೀವವಿಮಾ ನಿಗಮವು ಬಾಂಡ್​ಗಳನ್ನು
ಮುದ್ರಿಸಿ ಆಯಾ ಜಿಲ್ಲೆಗಳಿಗೆ ಸರಬರಾಜು ಮಾಡುತ್ತದೆ.
ವರ್ಷದೊಳಗೆ ಬಾಂಡ್ ವಿತರಣೆ
ಮಾಡಲಾಗುತ್ತದೆ.
****
ಬಾಂಡ್​ನ ಪೂರ್ಣ ಹಣ ಪಡೆಯಲೇನು
ಮಾನದಂಡ?
* ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.
* 18 ವರ್ಷಪೂರ್ಣಗೊಂಡ
ನಂತರವೇ ವಿವಾಹವಾಗಬೇಕು.
* 6 ವರ್ಷದವರೆಗೆ ಶಾಲಾ ಪೂರ್ವ ಶಿಕ್ಷಣಕ್ಕೆ
ಹಾಜರಾಗಿರಬೇಕು.
* ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗೆ
ದಾಖಲಾಗಿರಬೇಕು.
* ಬಾಲಕಾರ್ವಿುಕಳಾಗಿರಬಾರದು.
* ಕಳ್ಳ ಸಾಗಾಣೆಗೆ ಒಳಪಟ್ಟಿರಬಾರದು.
***
ವಿಮಾ ಸೌಲಭ್ಯ ಪಡೆಯುವುದು ಹೇಗೆ?
* ಸಂಬಂಧಪಟ್ಟ ಶಿಶು ಅಭಿವೃದ್ಧಿ
ಯೋಜನೆಯಡಿ ಅರ್ಜಿ ಪಡೆದು,
ಪಾಲಕರು ಮೃತಪಟ್ಟ ಬಗ್ಗೆ ಮರಣ
ದೃಢೀಕರಣ ಮೂಲ ಪ್ರತಿ ಮತ್ತು ಝೆರಾಕ್ಸ್
ಪ್ರತಿಯನ್ನು
ಯೋಜನಾಧಿಕಾರಿಗಳಿಂದ
ದೃಢೀಕರಿಸಿರಬೇಕು.ಪಾಲಕರ ವಯಸ್ಸಿನ
ದೃಢೀಕರಣಕ್ಕೆ ಶಾಲಾ ಪ್ರಮಾಣಪತ್ರ (ಟಿಸಿ/
ಮಾರ್ಕ್ಸ್ ಕಾರ್ಡ್), ಮತದಾರರ ಗುರುತಿನ ಚೀಟಿ
ಅಥವಾ ಪಡಿತರ ಚೀಟಿ ಒದಗಿಸಬೇಕು.ಮಗು
ಮತ್ತು ತಾಯಿ ಹೆಸರಲ್ಲಿ ರಾಷ್ಟ್ರೀಕೃತ
ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು,
ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
ನೀಡಬೇಕು.
* ಪಾಲಕರ ಮರಣಕ್ಕೆ
ಸಂಬಂಧಿಸಿದಂತೆ ಎಫ್​ಐಆರ್,
ಪೊಲೀಸ್ ತನಿಖಾ ವರದಿ,
ಮರಣೋತ್ತರ
ಪರೀಕ್ಷಾ ವರದಿ ಪ್ರತಿಗಳನ್ನೂ
ಅರ್ಜಿಯೊಂದಿಗೆ ದಾಖಲಿಸಬೇಕು.
* ಘಟನೆ ನಡೆದ 6
ತಿಂಗಳೊಳಗಾಗಿ ಎಲ್ಲ
ದಾಖಲಾತಿಗಳನ್ನು ಶಿಶು ಅಭಿವೃದ್ಧಿ
ಯೋಜನಾಧಿಕಾರಿ ಮೂಲಕ ಎಲ್​
ಐಸಿಗೆ ತಲುಪಿಸಬೇಕು.
* ಒಂದು ವೇಳೆ ಕೋರ್ಟ್​ನಲ್ಲಿ
ಪ್ರಕರಣವಿದ್ದರೆ, ಪ್ರಕರಣದ
ಸಂಖ್ಯೆಯನ್ನು
ಅರ್ಜಿಯೊಂದಿಗೆ
ನೀಡಬೇಕು. ಪ್ರಥಮ ಹಂತದಲ್ಲಿ
ಸಹಜ ಮರಣಕ್ಕೆ ನೀಡುವ ವಿಮಾ
ಮೊತ್ತ ನೀಡಲಾಗುತ್ತದೆ.
ಪ್ರಕರಣ ಇತ್ಯರ್ಥಗೊಂಡ
ಬಳಿಕ ವರದಿಯನ್ನು ಎಲ್​ಐಸಿಗೆ ತಲುಪಿಸಿದರೆ ಪೂರ್ಣ
ಮೊತ್ತ ನೀಡಲಾಗುತ್ತದೆ.
ದಾಖಲೆ ಸಲ್ಲಿಸಿದ ಬಳಿಕ ಬ್ಯಾಂಕ್ ಖಾತೆಗೆ ಹಣ
ವರ್ಗಾವಣೆಯಾಗುತ್ತದೆ.
***
ಸಂಪೂರ್ಣ ಉಚಿತ
ಬಿಪಿಎಲ್ ಪಡಿತರ ಹೊಂದಿರುವ
ಕುಟುಂಬದ ಹೆಣ್ಣುಮಗುವಿನ ಪಾಲಕರು ಅರ್ಜಿ
ಪಡೆಯುವ ವೇಳೆಯಿಂದ ಅರ್ಜಿ ಸಲ್ಲಿಸಿ,
ಬಾಂಡ್ ಪಡೆದು, ಆ ಬಾಂಡ್​ನ ಪೂರ್ಣ ಹಣ
ಖಾತೆಗೆ ಬರುವವರೆಗೂ ಯಾವುದೇ ಹಣ ವೆಚ್ಚ ಮಾಡುವ
ಅಗತ್ಯವಿಲ್ಲ.
***
ಹೆಣ್ಣುಮಗು ಮೃತಪಟ್ಟರೆ ಹಣವಿಲ್ಲ
ಒಂದು ವೇಳೆ ಫಲಾನುಭವಿ ಹೆಣ್ಣುಮಗು
ಸಾವನ್ನಪ್ಪಿದರೆ ಭಾಗ್ಯಲಕ್ಷ್ಮೀ
ಯೋಜನೆ
ಅಂತ್ಯಗೊಳ್ಳಲಿದ್ದು, ಆ
ಬಾಂಡ್​ಅನ್ನು ಪಾಲಕರು ಹಿಂತಿರುಗಿಸಬೇಕು.
***
ಹೆಚ್ಚಿನ ಮಾಹಿತಿಗೆ ಸಂರ್ಪಸಿ
ಆಯಾ ತಾಲೂಕಿನ ಮಹಿಳೆಯರ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳು ಹಾಗೂ ಜಿಲ್ಲಾ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉಪನಿರ್ದೇಶಕರನ್ನು ಸಂರ್ಪಸಬಹುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ನಿರ್ದೇಶನಾಲಯ , 2ನೇ ಮಹಡಿ, ಬಹುಮಹಡಿಗಳ
ಕಟ್ಟಡ, ಡಾ.ಬಿ.ಆರ್. ಅಂಬೇಡ್ಕರ್
ವೀಧಿ ಬೆಂಗಳೂರು-560001 ಮಹಿಳಾ
ಮತ್ತು ಮಕ್ಕಳ ಇಲಾಖೆ ನಿರ್ದೇಶಕರು:
ದೂ.080-22355984, 26578688,
ವೆಬ್​ಸೈಟ್- dwcdkar.gov.in

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು