ಮುಂದಿನ ವರ್ಷ ನೂತನ ಶಿಕ್ಷಣ ನೀತಿ ಜಾರಿ: ಸ್ಮೃತಿ ಇರಾನಿ:-
30 Nov, 2015
ನವದೆಹಲಿ(ಪಿಟಿಐ):
ಮುಂದಿನ ವರ್ಷ ನೂತನ
ಶಿಕ್ಷಣ ನೀತಿ ಜಾರಿ
ಮಾಡಲಾಗುವುದು ಎಂದು
ಸರ್ಕಾರ ಸೋಮವಾರ ಲೋಕಸಭೆಯಲ್ಲಿ
ತಿಳಿಸಿದೆ.
ಹೊಸ ಶಿಕ್ಷಣ
ನೀತಿ ಪುನರ್ ರಚನೆ
ಸಂಬಂಧ ಕೇಳಲಾದ
ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ
ಕೇಂದ್ರ ಮಾನವ
ಸಂಪನ್ಮೂಲ ಖಾತೆ ಸಚಿವೆ
ಸ್ಮೃತಿ ಇರಾನಿ ಅವರು, ಪ್ರಸ್ತಾವಿತ
ನೂತನ ಶಿಕ್ಷಣ ನೀತಿ
ಮುಂದಿನ ವರ್ಷ
ಫಲಪ್ರದವಾಗಲಿದೆ ಎಂದು
ಸದನಕ್ಕೆ ತಿಳಿಸಿದರು.
'ಇ-ಪಾಠಶಾಲ': 'ಇ-ಪಾಠಶಾಲ'
ಯೋಜನೆ ಜಾರಿಯಾಗಲಿದ್ದು,
ಒಂದರಿಂದ 12ನೇ
ತರಗತಿ(ಪಿಯು)ವರೆಗಿನ ಸಿಬಿಎಸ್ಇ
ಪಠ್ಯಕ್ರಮದ ಪುಸ್ತಕಗಳು
ಆನ್ಲೈನ್ ಹಾಗೂ
ಮೊಬೈಲ್ ಪೋನ್
ಅಪ್ಲಿಕೇಷನ್ಗಳ ಮೂಲಕ
ಉಚಿತವಾಗಿ ಲಭ್ಯವಾಗಲಿವೆ
ಎಂದು ತಿಳಿಸಿದರು.
Comments
Post a Comment