ಕೌಲಾಲಂಪುರದಲ್ಲಿ ೧೨ ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಮೋದಿ:-
ಕೌಲಾಲಂಪುರ್: ಇತ್ತೀಚೆಗೆ
ಇಂಗ್ಲೆಂಡ್ನಲ್ಲಿ ಬಸವ ಹಾಗೂ
ಅಂಬೇಡ್ಕರ್ ಪುತ್ಥಳಿ
ಲೋಕಾರ್ಪಣೆಗೊಳಿಸಿದ ಪ್ರಧಾನಿ
ಮೋದಿ, ಇಲ್ಲಿ 12 ಅಡಿ ಎತ್ತರದ ಸ್ವಾಮಿ
ವಿವೇಕಾನಂದ ಅವರ ಕಂಚಿನ
ಪ್ರತಿಮೆಯನ್ನು
ಅನಾವರಣಗೊಳಿಸಿದರು.
'ವಿವೇಕಾನಂದ ಎಂದರೆ ವ್ಯಕ್ತಿಯ
ಅಥವಾ ಯಾವುದೇ ಗುರುತಿನ
ಸಂಕೇತವಲ್ಲ. ಬದಲಿಗೆ ಭಾರತದ ಆತ್ಮ
ಹಾಗೂ ಭಾರತದ ಸಾವಿರಾರು
ವರ್ಷಗಳ ಸನಾತನ ಸಂಸ್ಕೃತಿಯ
ಪ್ರತೀಕ,' ಎಂದು ಮೋದಿ ಈ
ಸಂದರ್ಭದಲ್ಲಿ ಹೇಳಿದರು.
ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ
ಬೇಲೂರು ಮಠ ಕೊಡುಗೆಯಾಗಿ
ನೀಡಿದ, ಕೊಲ್ಕತ್ತಾದ ಅನಿಲ್
ಕುಮಾರ್ ಘೋಷ್ ಸೃಷ್ಟಿಸಿದ ಪ್ರತಿಮೆ
ಅನಾವರಣಗೊಳಿಸಿ ಮಾತನಾಡಿದ
ಮೋದಿ, 'ಇದೀಗ ಪೂರ್ವ ಏಷ್ಯಾ
ಶೃಂಗಸಭೆಯಲ್ಲಿ
ಮಾತನಾಡುತ್ತಿರುವ ಏಕ ಏಷ್ಯಾ
ಕಲ್ಪನೆಯನ್ನು ಮೊದಲು
ನೀಡಿದ್ದು ವಿವೇಕಾನಂದ,'
ಎಂದರು.
ವಿಶ್ವ ಎದುರಿಸುತ್ತಿರುವ ಬಹು
ದೊಡ್ಡ ಸಮಸ್ಯೆಗಳಾದ ಹವಾಮಾನ
ವೈಪರಿತ್ಯ ಮತ್ತು
ಭಯೋತ್ಪಾದನೆ ಬಗ್ಗೆ ಮಾತನಾಡಿದ
ಮೋದಿ, 'ವೈರುಧ್ಯಗಳು
ಕೊನೆಯಾದಾಗ
ಭಯೋತ್ಪಾದನೆಗೆ ಅಂತ್ಯ
ಹಾಡಬಹುದು. ಯಾವುದಕ್ಕೂ
ಸತ್ಯವೇ ಮೇಲಾಗಬೇಕು,'
ಎಂದು ಸುಮಾರು 2000
ಭಾರತೀಯರು ಸೇರಿದ್ದ
ಕಾರ್ಯಕ್ರಮದಲ್ಲಿ ಮೋದಿ
ಹೇಳಿದರು.
ವಿವೇಕಾನಂದ ಅವರ ಜೀವನದ
ಅನೇಕ ಘಟನೆಗಳನ್ನು ಮೋದಿ
ನೆನಪಿಸಿಕೊಂಡರು.
ಇಲ್ಲಿನ ಆಶ್ರಮದ ನೇತೃತ್ವ ವಹಿಸಿದ
ಸ್ವಾಮಿ ಸುಪ್ರೀಯಾನಂದ
ಅವರಿಂದ ಸ್ವಾಗತ ಪಡೆದ ಮೋದಿ,
ಯೋಗ ಗುರು ಅಜಯ್ ಸಾಹೂ
ಅವರು ಬರೆದ 'ಯೋಗ ಮತ್ತು
ಆರೋಗ್ಯ' ಪುಸ್ತಕರವನ್ನು
ಬಿಡುಗಡೆಗೊಳಿಸಿದರು.
Comments
Post a Comment