ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಮುಖ್ಯ ಅತಿಥಿ: French President Francois Hollande to be Chief Guest on Republic Day:
ಫ್ರಾನ್ಸ್ ಮತ್ತು ಭಾರತ ದೇಶಗಳ ಬಾಂಧವ್ಯ
ವೃದ್ಧಿಗೆ ಪ್ರಧಾನಿ ಮೋದಿ
ಮತ್ತೊಂದು ಹೆಜ್ಜೆಯನ್ನು
ಮುಂದಿಟ್ಟಿದ್ದಾರೆ. ಜನೆವರಿ 26 ರಂದು
ನಡೆಯಲಿರುವ 67ನೇ ಗಣರಾಜ್ಯೋತ್ಸವಕ್ಕೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕು ಎನ್ನುವ ಮೋದಿ
ಆಹ್ವಾನವನ್ನು ಫ್ರಾನ್ಸ್ ಅಧ್ಯಕ್ಷ
ಫ್ರಾಂಕೋಯಿಸ್ ಹೊಲಾಂಡೆ
ಸ್ವೀಕರಿಸಿದ್ದಾರೆ.
ಪ್ಯಾರಿಸ್ ದಾಳಿಯ ನಂತರ ಉಭಯ ದೇಶಗಳ
ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸಲು
ಫ್ರಾನ್ಸ್ ಅಧ್ಯಕ್ಷ
ಹೊಲಾಂಡೆಯವರಿಗೆ
ಗಣರಾಜ್ಯೋತ್ಸವಕ್ಕೆ ಆಹ್ವಾನ
ನೀಡಲಾಗಿದೆ.
ಹೊಲಾಂಡೆ, ಭಾರತಕ್ಕೆ ಬರಲು
ಒಪ್ಪಿರುವುದು ಭಾರತದ ರಾಜತಾಂತ್ರಿಕ ಗೆಲುವಾಗಿದೆ
ಎಂದು ಬಣ್ಣಿಸಲಾಗುತ್ತಿದೆ.
ಸರಕಾರಿ ಮೂಲಗಳ ಪ್ರಕಾರ, ಭಾರತ ಸರಕಾರ
ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎನ್ನುವ ಕಠಿಣ
ಸಂದೇಶವನ್ನು ವಿಶ್ವಕ್ಕೆ ಸಾರಲು ಬಯಸುತ್ತಿದೆ
ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾರತಕ್ಕೆ
ಆಗಮಿಸಿದ್ದರು.
Comments
Post a Comment