ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ PETA ದ ‘ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ::-

ಬೀದಿ ನಾಯಿಗಳ ದತ್ತು
ಸ್ವೀಕಾರಕ್ಕೆ
ಸಂಬಂಧಿಸಿದಂತೆ
ಕೆಲಸ ಮಾಡುತ್ತಿರುವ ಪ್ರಾಣಿ ಹಕ್ಕುಗಳ
ಸಂಸ್ಥೆ 'ಪೆಟಾ' ಹಾಸ್ಯನಟ
ಕಪಿಲ್ ಶರ್ಮಾ ಅವರಿಗೆ 'ವರ್ಷದ
ವ್ಯಕ್ತಿ' ಎಂದು ಪ್ರಶಸ್ತಿ
ನೀಡಿ ಗೌರವಿಸಿದೆ.
'ಪ್ರಾಣಿಗಳಿಗೆ ಸಹಾಯ ಹಸ್ತ ಚಾಚುವ
ವಿಷಯಕ್ಕೆ
ಸಂಬಂಧಿಸಿದಂತೆ
ನನ್ನನ್ನು ಗುರುತಿಸಿ ಪೆಟಾ ಪ್ರಶಸ್ತಿ
ನೀಡಿರುವುದು ನಿಜಕ್ಕೂ ನನಗೆ
ರೋಮಾಂಚನ
ಉಂಟುಮಾಡಿದೆ. ನನಗೆ
ಜನರನ್ನು ನಗಿಸುವುದೆಂದರೆ
ತುಂಬಾ ಇಷ್ಟ. ಆದರೆ ಸೂರಿಲ್ಲದ
ನಾಯಿ ಹಾಗೂ ಬೆಕ್ಕುಗಳ ವಿಷಯ
ನಗುವಂತಹದ್ದಲ್ಲ'
ಎಂದಿದ್ದಾರೆ ಕಪಿಲ್.
''ಹಣ, ಸಮಯ ಹಾಗೂ ಎಲ್ಲ
ಸೌಕರ್ಯಗಳನ್ನು
ಹೊಂದಿರುವ
ಪ್ರತಿಯೊಬ್ಬರೂ
ಒಂದೊಂದು
ನಾಯಿ ಅಥವಾ ಬೆಕ್ಕನ್ನು ಮನೆಗೆ
ತಂದು ಸಾಕಬಹುದು.
ಸಂಸ್ಥೆಗಳಲ್ಲಿ ಆಶ್ರಯ
ಪಡೆಯುತ್ತಿರುವ ಅಥವಾ ಮನೆಯನ್ನು
ಕಾಯುತ್ತಿರುವ ಬೀದಿ
ನಾಯಿಗಳು, ಬೆಕ್ಕುಗಳನ್ನು ದತ್ತು
ಸ್ವೀಕರಿಸಬೇಕು. ಪೆಟಾ
ನೀಡಿರುವ ಈ
ಪ್ರಶಸ್ತಿಯನ್ನು ನಾನು ಮತ್ತು ನನ್ನ
ನಾಯಿ 'ಜಂಜೀರ್' ಸದಾ
ನೆನೆಯುತ್ತೇವೆ'' ಎಂದು
ಹೇಳಿದ್ದಾರೆ ಅವರು.
ಸದಾ ಜನರನ್ನು ನಗೆಗಡಲಲ್ಲಿ
ತೇಲಿಸುವ ಕಪಿಲ್,
'ಜಂಜೀರ್'
ಎಂಬ ಹೆಸರಿನ ನಾಯಿಯನ್ನು
ದತ್ತು ಸ್ವೀಕರಿಸಿದ್ದಾರೆ. 'ದ
ಪೀಪಲ್ ಫಾರ್ ಎಥಿಕಲ್
ಟ್ರೀಟ್ಮೆಂಟ್ ಆಫ್
ಅನಿಮಲ್ಸ್' ಸಂಸ್ಥೆ ನಿರಾಶ್ರಿತ
ಪ್ರಾಣಿಗಳ ದತ್ತು ಸ್ವೀಕಾರ
ಕುರಿತಂತೆ ನಡೆಸಿದ
ಅಭಿಯಾನದಲ್ಲೂ ಕಪಿಲ್
ಭಾಗವಹಸಿಸಿದ್ದು ವಿಶೇಷ. 'ಪೆಟಾ'
ನೀಡುವ ವರ್ಷ ವ್ಯಕ್ತಿ
ಪ್ರಶಸ್ತಿಯನ್ನು ಈ ಹಿಂದೆ
ಆರ್. ಮಾಧವನ್, ಜಾಕ್ವೆಲಿನ್
ಫರ್ನಾಂಡಿಸ್, ಹೇಮಾ ಮಾಲಿನಿ, ಶಶಿ
ತರೂರ್ ಸಹ ಪಡೆದಿದ್ದಾರೆ.

Comments

Popular posts from this blog

KARNATAK STATE SSLC RESULT 2024

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*