‘ಪ್ರಭಾ ಪಥ’ (Prabha's Walk) :-
ಆಸ್ಟ್ರೇಲಿಯಾದ ಪಥಕ್ಕೆ ಮೃತ ಪ್ರಭಾ
ಹೆಸರು:ಆಸ್ಟ್ರೇಲಿಯಾದ ಪಥಕ್ಕೆ ಮೃತ ಪ್ರಭಾ
ಹೆಸರು:-
ಮೆಲ್ಬರ್ನ್ (ಪಿಟಿಐ) :
ಆಸ್ಟೇಲಿಯಾದಲ್ಲಿ ಕಳೆದ ಮಾರ್ಚ್
ತಿಂಗಳಲ್ಲಿ ಬರ್ಬರವಾಗಿ
ಹತ್ಯೆಯಾಗಿದ್ದ ಪ್ರಭಾ ಅರುಣ್
ಕುಮಾರ್ ಅವರ ಸ್ಮರಣಾರ್ಥ
ಕೊನೆಯದಾಗಿ ಅವರು
ನಡೆದುಕೊಂಡು
ಬಂದಿದ್ದ ದಾರಿಗೆ ಅವರ
ಹೆಸರಿಡಲಾಗಿದೆ.
ಮಂಗಳೂರು ಮೂಲದ ಪ್ರಭಾ ಅವರು
ಐ.ಟಿ ಉದ್ಯೋಗಿಯಾಗಿದ್ದರು.
ಆಸ್ಟ್ರೇಲಿಯಾದಲ್ಲಿ ಕೆಲಸ
ಮಾಡುತ್ತಿದ್ದರು. ಕಳೆದ ಮಾರ್ಚ್ನಲ್ಲಿ
ಅವರು ಕೆಲಸ ಮುಗಿಸಿ ಮರಳುತ್ತಿದ್ದಾಗ
ಪರ್ರಮಟ್ಟಾ ಪ್ರದೇಶದಲ್ಲಿ ಅಪರಿಚಿತ
ವ್ಯಕ್ತಿಯೊಬ್ಬ
ಅವರಿಗೆ ಚಾಕುವಿನಿಂದ ಇರಿದಿದ್ದ.
ಬಳಿಕ ಅವರು ಆಸ್ಪತ್ರೆಯಲ್ಲಿ
ಸಾವನ್ನಪ್ಪಿದ್ದರು.
ಪ್ರಭಾ ಅವರು ಅರ್ಗೈಲ್
ಸ್ಟ್ರೀಟ್ ಮೂಲಕ ವೆಸ್ಟ್
ಮೀಡ್ನತ್ತ ತೆರಳುತ್ತಿದ್ದಾಗ
ಈ ಅವಘಡ ನಡೆದಿತ್ತು.
ಇದೀಗ ಅದೇ ದಾರಿಗೆ 'ಪ್ರಭಾ
ಪಥ' (Prabha's Walk) ಎಂದು
ನಾಮಕರಣ ಮಾಡಲಾಗಿದೆ.
ಭಾನುವಾರ ನಡೆದ ಈ
ಕಾರ್ಯಕ್ರಮದಲ್ಲಿ ಭಾರತದಿಂದ
ಬಂದಿದ್ದ ಪ್ರಭಾ ಅವರ ಪುತ್ರಿ,
ಪತಿ ಹಾಗೂ ತಂದೆ–ತಾಯಿ ಅವರು
ಪಾಲ್ಗೊಂಡಿದ್ದರು.
Comments
Post a Comment