ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ (RIE ಯ ಇಂಗ್ಲೀಷ್ DIPLOMA ಮಾಡಿದವರನ್ನು ಹೊರತುಪಡಿಸಿ)
28 Nov, 2015
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸಾರ್ವಜನಿಕ ಶಿಕ್ಷಣ
ಇಲಾಖೆಯು 2014–15ನೇ ಸಾಲಿನ 9,511
ಪ್ರಾಥಮಿಕ ಶಾಲಾ (ಕಿರಿಯ ಮತ್ತು ಹಿರಿಯ)
ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ
ಪಟ್ಟಿ ಪ್ರಕಟಿಸಿದೆ. ಇದು ಇಲಾಖೆಯ
ವೆಬ್ಸೈಟ್ನಲ್ಲಿ (schooleducation.kar.nic.in)
ಲಭ್ಯವಿದೆ.
----------------------------------------
ಡಿಪ್ಲೊಮಾದವರಿಗೆ ಅವಕಾಶ
ಇಲ್ಲ:
------------------------------------------
ಹಿರಿಯ ಪ್ರಾಥಮಿಕ ಶಾಲಾ
(6ರಿಂದ 8ನೇ ತರಗತಿ) ಶಿಕ್ಷಕರ
ಆಯ್ಕೆ ಪಟ್ಟಿ ಪ್ರಕಟಿಸುವಾಗ,
ಇಂಗ್ಲಿಷ್ ವಿಷಯದಲ್ಲಿ ಒಂದು
ವರ್ಷದ ಡಿಪ್ಲೊಮಾ
ಮಾಡಿರುವ 154 ಅಭ್ಯರ್ಥಿಗಳನ್ನು ಇಲಾಖೆ
ಪರಿಗಣಿಸಿಲ್ಲ. ಸ್ಪರ್ಧಾತ್ಮಕ
ಪರೀಕ್ಷೆ ಬರೆದು ದಾಖಲಾತಿ
ಪರಿಶೀಲನೆಗೆ ಹಾಜರಾಗಿದ್ದ ಈ
ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ
ಪಟ್ಟಿಯಿಂದ
ಹೊರಗಿಡಲಾಗಿದೆ.
ಒಂದು ವರ್ಷದ ಇಂಗ್ಲಿಷ್ ಕೋರ್ಸ್
ಮಾಡಿರುವವರನ್ನು ಪರಿಗಣಿಸಬಾರದು
ಎಂದು ಸೂಚಿಸಿ ಹೈಕೋರ್ಟ್, 2003ರ
ಶಿಕ್ಷಕರ ನೇಮಕಾತಿ ಸಂಬಂಧದ
ವೃಂದ ಮತ್ತು ನೇಮಕಾತಿ
ನಿಯಮಗಳನ್ನು
ರದ್ದುಗೊಳಿಸಿತ್ತು. ಇದೇ
ಕಾರಣಕ್ಕಾಗಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ
ವಿಳಂಬವಾಗಿದೆ.
ಈ ವಿಚಾರವಾಗಿ
'ಪ್ರಜಾವಾಣಿ'ಯೊಂದಿಗೆ
ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, '
ಅನುಕೂಲಕ್ಕೆ ತಕ್ಕಂತೆ ನಿಯಮಗಳಲ್ಲಿ
ಮಾರ್ಪಾಟು ಮಾಡುವ ಸಂಬಂಧ,
ಇಲಾಖೆ ಮಟ್ಟದಲ್ಲಿ ಈಗಾಗಲೇ ಕಾರ್ಯಕಾರಿ
ಆದೇಶ ಇದೆ. ಅದರ ಅನ್ವಯ
ನಿಯಮಗಳಲ್ಲಿ ಮಾರ್ಪಾಟು ಮಾಡಿ ತಾತ್ಕಾಲಿಕ
ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ'
ಎಂದರು.
*
ಆಕ್ಷೇಪಣೆಗೆ ಡಿ.3 ಕೊನೆಯ
ದಿನ
ಆಯ್ಕೆ ಪಟ್ಟಿಯ ಬಗ್ಗೆ
ಕೇಂದ್ರೀಯ ದಾಖಲಾತಿ
ಘಟಕದ (ಸಿಎಸಿ) ವಿಶೇಷ ಅಧಿಕಾರಿಗೆ
ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 3ರ
ವರೆಗೆ ಅವಕಾಶವಿದೆ.
Comments
Post a Comment