The Blade Runner::-

ಕಾಲಿಲ್ಲದ ಬ್ಲೇಡ್ ರನ್ನರ್
25 Nov, 2015
ಪಿ.ರಾಮ
ದಕ್ಷಿಣ ಆಫ್ರಿಕದ ಅಥ್ಲೀಟ್
ಆಸ್ಕರ್ ಪಿಸ್ಟೋರಿಯಸ್ ಜನ್ಮತಃ
ಅಂಗವಿಕಲರು.
ಮೊಣಗಂಟುಗಳಿಂದ
ಕೆಳಗೆ ನಿಷ್ಕ್ರಿಯವಾಗಿದ್ದ ಕಾಲುಗಳನ್ನು
ಹನ್ನೊಂದು ತಿಂಗಳು
ವಯಸ್ಸಿನಲ್ಲೇ ವೈದ್ಯರು ಕತ್ತರಿಸಿ ಹಾಕಿದ್ದರು.
ವಿಶಿಷ್ಟವಾಗಿರುವ ಅಲಗಿನಂತಿರುವ ಕೃತಕ
ಕಾಲುಗಳನ್ನು ಕಟ್ಟಿಕೊಂಡು
ಓಟದ ಸ್ಪರ್ಧೆಯಲ್ಲಿ
ಪಾಲ್ಗೊಂಡು
ಬಂಗಾರದ ಪದಕಗಳನ್ನು
ಬಾಚಿಕೊಂಡರು. 'ಬ್ಲೇಡ್
ರನ್ನರ್' ಎಂಬ ಅಭಿದಾನಕ್ಕೂ ಪಾತ್ರರಾದರು.
ಭಗವಂತನ ಕೃಪೆಯಿದ್ದರೆ ಮೂಗನೂ
ಮಾತನಾಡಬಹುದು, ಹೆಳವನೂ ಗಿರಿಯನ್ನೇರಬಹುದು
ಎಂಬ ಭಗವದ್ಗೀತೆಯ ಮಾತು
ಸುಳ್ಳಲ್ಲ ಎನಿಸುವುದು ದಕ್ಷಿಣ ಆಫ್ರಿಕದ
ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್
ಮಾಡಿದ ಸಾಧನೆಯನ್ನು ನೋಡಿದಾಗ.
ಇವರು ಜನ್ಮತಃ ಅಂಗವಿಕಲರು.
ಮೊಣಗಂಟುಗಳಿಂದ
ಕೆಳಗೆ ನಿಷ್ಕ್ರಿಯವಾಗಿದ್ದ ಕಾಲುಗಳನ್ನು
ಹನ್ನೊಂದು ತಿಂಗಳು
ವಯಸ್ಸಿನಲ್ಲೇ ವೈದ್ಯರು ಕತ್ತರಿಸಿ ಹಾಕಿದ್ದರು.
ಹೆಳವನಾಗಿ ಜೀವನವಿಡೀ
ಯಾರಿಗೋ ಆತ
ಹೊರೆಯಾಗಲಿಲ್ಲ.
ವಿಶಿಷ್ಟವಾಗಿರುವ ಅಲಗಿನಂತಿರುವ ಕೃತಕ
ಕಾಲುಗಳನ್ನು ಕಟ್ಟಿಕೊಂಡು
ಓಟದ ಸ್ಪರ್ಧೆಯಲ್ಲಿ
ಪಾಲುಗೊಂಡು
ಬಂಗಾರದ ಪದಕಗಳನ್ನು
ಬಾಚಿಕೊಂಡರು. 'ಬ್ಲೇಡ್
ರನ್ನರ್' ಎಂಬ ಅಭಿದಾನಕ್ಕೂ ಪಾತ್ರರಾದರು.
ಹಲವು ಸಲ ವಿಶ್ವ ಚಾಂಪಿಯನ್
ಪದವಿಯ ಕಿರೀಟವನ್ನು
ಮುಡಿಗೇರಿಸಿಕೊಂಡರು.
ಇವರು ಜನಿಸಿದ್ದು 1989ರಲ್ಲಿ.
ಕಾಲಿಲ್ಲದಿದ್ದರೂ ಇವರು ಶಾಲೆ ಕಲಿಯುವಾಗಲೇ
ಟೆನಿಸ್, ವಾಟರ್ ಪೋಲೊ, ಕುಸ್ತಿ
ಆಟಗಳನ್ನು ಆಡುತ್ತಿದ್ದರು. ಇಂಥ
ಕ್ರೀಡಾಸಕ್ತಿಯನ್ನು ಕಂಡು
ದಕ್ಷಿಣ ಆಫ್ರಿಕದ
ಕ್ಯಾಥೊಲಿಕ್ ಗುರು
ಪ್ರಾಂಕೋಯಿಸ್ ವ್ಯಾನ್ ಡೆರ್ವಾಟ್
ಸ್ಥಳೀಯ
ತಂತ್ರಜ್ಞರೊಂದಿಗೆ
ಸಮಾಲೋಚನೆ ನಡೆಸಿದರು. ಕಾರ್ಬನ್
ಪ್ರಾಸ್ಟೆಟಿಕ್ನಿಂದ ವಿಶೇಷವಾದ
ಅಲುಗಿನಂತಹ ಕಾಲುಗಳನ್ನು ತಯಾರಿಸಿ
ಮೊಣಕಾಲುಗಳಿಗೆ ಜೋಡಿಸಿದರು.
ಸಹಜವಾದ ಕಾಲುಗಳೆಂಬಂತೆ ಅದನ್ನು
ಧರಿಸಿ ಸಲೀಸಾಗಿ ಓಡಾಟ
ಆರಂಭವಾಯಿತು.
ಹದಿನಾರನೆಯ ವಯಸ್ಸಿನಲ್ಲಿ ಆಸ್ಕರ್ ವೇಗದ
ಓಟಗಾರನಾದರು. ಕಾಲಿದ್ದವರು ನಾಚುವಂತೆ
ಓಡಿದರು. ಇಟಲಿಯ
ಲಿಗ್ನಾನೊದಲ್ಲಿ 2004ರಲ್ಲಿ
ನಡೆದ 400 ಮೀಟರ್ ದೂರದ ಓಟದ
ಪಂದ್ಯದಲ್ಲಿ
ಜಯಶೀಲನಾಗಿ ಕಂಚಿನ ಪದಕ
ಗಳಿಸಿದರು. ಅದೇ ವರ್ಷ ಅಥೆನ್ಸ್ನಲ್ಲಿ ನಡೆದ
ಒಲಿಂಪಿಕ್ ಪಂದ್ಯದಲ್ಲಿ 400
ಮೀಟರ್ ಓಟದಲ್ಲಿ ಚಿನ್ನ
ಸಂಪಾದಿಸಿದರು. ದಕ್ಷಿಣ ಆಫ್ರಿಕದ
ರಾಷ್ಟ್ರೀಯ ಹಿರಿಯ
ಅಥ್ಲೀಟ್ ಚಾಂಪಿಯನ್ ಪಟ್ಟ
ಸಂಪಾದಿಸಿದರು.
2005ರ ಅಂತರರಾಷ್ಟ್ರೀಯ
ಪಂದ್ಯದಲ್ಲಿ ವಿಶ್ವಕಪ್, ನೂರು ಮತ್ತು
ಇನ್ನೂರು ಮೀಟರ್ ಓಟದಲ್ಲಿ ಎರಡು
ಸುವರ್ಣ ಪದಕ ಪಡೆದರು. 2007ರಲ್ಲಿ
ಅಂತರರಾಷ್ಟ್ರೀಯ
ಅಥ್ಲೆಟಿಕ್ ಫೆಡರೇಷನ್ ಕೃತಕ ಕಾಲುಗಳನ್ನು ಧರಿಸಿ
ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ
ತಕರಾರು ತೆಗೆದು ಇವರಿಗೆ ನಿಷೇಧ ಹೇರಿತು. ಆಸ್ಕರ್
ಕ್ರೀಡಾ ನ್ಯಾಯಾಲಯದ
ಮೊರೆಹೊಕ್ಕರು
ನ್ಯಾಯಾಲಯವು, 'ಕಾಲಿದ್ದವರಿಗಿಂತ
ಕೃತಕ ಕಾಲು ಧರಿಸಿದವರ ಕಾರ್ಯಕ್ಷಮತೆ ಶೇ
25ರಷ್ಟು ಕಡಮೆಯಿದ್ದರೂ ಈ ಆಟಗಾರ
ಜಗತ್ತಿನ ಕಣ್ಣಿನಲ್ಲಿ ಪವಾಡ ಪುರುಷನಾಗಿದ್ದಾನೆ'
ಎಂದು ಹೇಳಿ ನಿಷೇಧವನ್ನು
ರದ್ದುಗೊಳಿಸಿತು.
2008ರಲ್ಲಿ ನಡೆದ ಅಂಗವಿಕಲರ
ಒಲಿಂಪಿಕ್ಸ್ ಪಂದ್ಯಗಳಲ್ಲಿ ನೂರು,
ಇನ್ನೂರು ಮತ್ತು ನಾನ್ನೂರು ಮೀಟರ್ಗಳ
ಓಟದ ಪಂದ್ಯಗಳಲ್ಲಿ ಮೂರು ಚಿನ್ನದ
ಪದಕಗಳು ಒಲಿದದ್ದು ಆಸ್ಕರ್ಗೆ. 2009ರಲ್ಲಿ
ಅಪಘಾತಕ್ಕೊಳಗಾಗಿ
ಗಂಭೀರವಾಗಿ
ಗಾಯಗೊಂಡು ಮುಖದ
ಶಸ್ತ್ರಚಿಕಿತ್ಸೆಗೊಳಗಾದರೂ ಬೇಗನೆ
ಚೇತರಿಸಿಕೊಂಡರು. 2011ರ
ಐಪಿಸಿ ಅಥ್ಲೆಟಿಕ್ಸ್ ವಿಶ್ವ
ಚಾಂಪಿಯನ್ಷಿಪ್ನಲ್ಲಿ ಟ್ರ್ಯಾಕ್ ಪದಕ
ಗೆದ್ದ ವಿಶ್ವದ ಮೊದಲ
ಅಂಗವಿಕಲನೆಂಬ ಖ್ಯಾತಿಯೂ
ಅವರಿಗೆ ಬಂದಿತು.
ಮರುವರ್ಷ ಇಂಗ್ಲೆಂಡಿನಲ್ಲಿ
ಜರುಗಿದ ಪ್ಯಾರಾಲಿಂಪಿಕ್
ಪಂದ್ಯಾವಳಿಯಲ್ಲಿ 400
ಮೀಟರ್ ರಿಲೇ ರೇಸ್ ಮತ್ತು 100
ಮೀಟರ್ ಓಟದಲ್ಲಿಯೂ ಅವರಿಗೆ
ವಿಶ್ವ ಚಾಂಪಿಯನ್ ಸ್ಥಾನ ಲಭಿಸಿತು.
ಇಷ್ಟೆಲ್ಲಾ ಸಾಧನೆಯ ಹಾದಿಯಲ್ಲಿ ಆಸ್ಕರ್
ಅವರಿಗೆ ದುರ್ದೈವವೂ ಕಾಡಿತು. ಅವನ ಗೆಳತಿ
ರೂಪದರ್ಶಿ ರೇವಾ ಸ್ಟೀನ್ಕಾಂಪ್
ಅವರೊಂದಿಗೆ
ಚಿತ್ರೀಕರಣಕ್ಕಾಗಿ ಬಂದೂಕಿನ
ಪ್ರಯೋಗ ನಡೆಸಿದಾಗ ಅದು ರೇವಾ ಅವರಿಗೆ ತಾಗಿ
ಅವರು ಸಾವನ್ನಪ್ಪಿದರು.
ಇದಕ್ಕಾಗಿ ಆಸ್ಕರ್ ಅವರಿಗೆ ಐದು ವರ್ಷಗಳ
ಸೆರೆವಾಸದ ಶಿಕ್ಷೆ ಮತ್ತು
ಕ್ರೀಡಾರಂಗದಿಂದ ಐದು
ವರ್ಷಗಳ ನಿಷೇಧದ ಶಿಕ್ಷೆಯಾಗಿದೆ. ಹತ್ತು
ತಿಂಗಳ ಜೈಲು ವಾಸ ಅನುಭವಿಸಿ ಪೆರೋಲ್ ಮೇಲೆ
ಕಳೆದ ಅಕ್ಟೋಬರ್ ತಿಂಗಳಲ್ಲಿ
ಬಿಡುಗಡೆಯಾಗಿ ಬಂದಿದ್ದಾರೆ. ಮೂರು
ಲಕ್ಷಕ್ಕಿಂತ ಹೆಚ್ಚು ಅಂತರ್ಜಾಲದ
ಅಭಿಮಾನಿಗಳು ಅವನಿಗೆ ಶಿಕ್ಷೆಯಾಗಬಾರ
ದೆಂದು ಅವನ ಪರವಾಗಿ ಟ್ವೀಟ್
ಮಾಡಿದ್ದಾರೆ. ಸೆರೆಮನೆ ಯಲ್ಲಿರುವಾಗ ಆಸ್ಕರ್
ಸಹ ಕೈದಿಗಳಿಗೆ ಫುಟ್ಬಾಲ್ನಂತಹ
ಕ್ರೀಡೆಗಳನ್ನು
ಕಲಿಸಿಕೊಟ್ಟಿದ್ದ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು