10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ:*
10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ
ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ
ನವದೆಹಲಿ.ಡಿ.29 : ಒಂಬತ್ತು
ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲು
ಮುಂದಾಗಿದ್ದ ಕೇಂದ್ರ ಸರಕಾರ ಜನರು
ವಿರೋಧಿಸಿದ್ದರಿಂದ ಆ ಸಂಖ್ಯೆಯನ್ನು
12ಕ್ಕೆ ಏರಿಸಿತ್ತು. ಆದರೆ, ಇದೀಗ ಸಬ್ಸಿಡಿ
ಬಗ್ಗೆ ಸರಕಾರ ಮತ್ತಷ್ಟು ಬಿಗಿ ಧೋರಣೆ ತಾಳುತ್ತಿದ್ದು,
10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ
ಇರುವವರಿಗೆ ಸಬ್ಸಿಡಿ ಸೌಲಭ್ಯವನ್ನು
ಹಿಂಪಡೆಯಲು ಮುಂದಾಗಿದೆ.
ಹೊಸ ವರ್ಷದಿಂದ ಈ
ನೀತಿ ಅನ್ವಯವಾಗುತ್ತಿದ್ದು, ಈ
ಮೊದಲು ಖುದ್ದು ಸಬ್ಸಿಡಿ ತ್ಯಜಿಸಲು
ಸರಕಾರ ಆಗ್ರಹಿಸಿತ್ತು. ಆದರೆ, ಉತ್ತಮ ಆದಾಯ
ಹೊಂದಿರುವ ಎಲ್ಪಿಜಿ ಗ್ರಾಹಕರು
ಮಾರುಕಟ್ಟೆ ಬೆಲೆಯಲ್ಲಿಯೇ ಎಲ್ಪಿಜಿ
ಕೊಳ್ಳಲಿ ಎಂಬ
ಉದ್ದೇಶದಿಂದ ಸರಕಾರ ಈ
ನೀತಿಯನ್ನು
ಬಿಗುಗೊಳಿಸುತ್ತಿದೆ, ಎಂದು ತೈಲ
ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ. ದೇಶದಲ್ಲಿ
16.35 ಕೋಟಿ ಎಲ್ಪಿಜಿ ಗ್ರಾಹಕರಿದ್ದು, 57.5 ಲಕ್ಷ
ಮಂದಿ ಸ್ವಯಂ ಪೇರಿತರಾಗಿ ಸಬ್ಸಿಡಿ
ಸೌಲಭ್ಯವನ್ನು ತ್ಯಜಿಸಿದ್ದಾರೆ.
Comments
Post a Comment