ಸಿಲಿಂಡರ್ ಗ್ಯಾಸ್ ಸೋರಿಕೆಯಾದರೆ ನಾಳೆಯಿಂದ 1906 ಸಂಖ್ಯೆಗೆ ಕರೆ ಮಾಡಿ
ನವದೆಹಲಿ, ಡಿ.31-ಇನ್ನು ಮುಂದೆ ನಿಮ್ಮ
ಮನೆಯ ಅಡಿಗೆ ಅನಿಲ (ಸಿಲಿಂಡರ್ ಗ್ಯಾಸ್)
ಸೋರಿಕೆಯಾಗುತ್ತಿದ್ದರೆ
ಗಾಬರಿಪಟ್ಟುಕೊಳ್ಳಬೇಕಾದ
ಅಗತ್ಯವಿಲ್ಲ. ಏಕೆಂದರೆ 1906
ಸಂಖ್ಯೆಗೆ ಕರೆ ಮಾಡಿದರೆ ಸಾಕು ತಕ್ಷಣವೇ
ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ. ಆಂಬುಲೆನ್ಸ್
ಹಾಗೂ ಪೊಲೀಸರ ಸಹಾಯ
ಪಡೆಯಲು 100 ಸಂಖ್ಯೆಗೆ ಕರೆ ಮಾಡಿದರೆ
ಹೇಗೆ ಸಹಾಯಕ್ಕೆ ಬರುತ್ತಾರೋ ಅದೇ ರೀತಿ ಈ
ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಸಾಕು.
ಇದೀಗ ಕೇಂದ್ರ ಸರ್ಕಾರ
ಆಂಬುಲೆನ್ಸ್ ಮತ್ತು
ಪೊಲೀಸ್ ಸಹಾಯಕವಾಣಿ
ಮಾದರಿಯಲ್ಲಿ ಎಲ್ಪಿಜಿ ಸೋರಿಕೆ ತಡೆಗಟ್ಟುವ
ಉದ್ದೇಶದಿಂದ
ಸಹಾಯವಾಣಿಯೊಂದನ್ನು
ಆರಂಭಿಸಿದೆ.
1906 ಎಲ್ಪಿಜಿಯ ನೂತನ ಸಹಾಯವಾಣಿಯಾಗಿದೆ.
ನಿಮ್ಮ ಮನೆಯಲ್ಲಿ ತಾಂತ್ರಿಕ ಇಲ್ಲವೇ
ಬೇರ್ಯಾಜವುದೋ ಕಾರಣಗಳಿಂದ ಗ್ಯಾಸ್
ಸೋರಿಕೆಯಾಗುತ್ತಿದ್ದರೆ ಈ ಸಹಾಯವಾಣಿಗೆ ಕರೆ
ಮಾಡಬಹುದು.
ಇತ್ತೀಚೆಗೆ ದೇಶದಲ್ಲಿ ಎಲ್ಪಿಜಿ
ಸೋರಿಕೆಯಿಂದ ಅನೇಕರು ಪ್ರಾಣ
ಕಳೆದುಕೊಂಡು ಶಾಶ್ವತ
ದೃಷ್ಟಿಹೀನ ಹಾಗೂ ಅಂಗವೈಕಲ್ಯಕ್ಕೂ
ತುತ್ತಾಗಿದ್ದಾರೆ. ಸೋರಿಕೆಯನ್ನು ತಡೆಗಟ್ಟುವುದನ್ನು
ತಿಳಿಯದ ಕೆಲವರು ಅನುಭವಿಸಿದ ಕಷ್ಟಗಳು
ಅಷ್ಟಿಷ್ಟಲ್ಲ. ಇದನ್ನು ಅರಿತ ಕೇಂದ್ರ
ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವ
ಧರ್ಮೇಂದ್ರ ಪ್ರಧಾನ್ ಈ ಸಹಾಯವಾಣಿಯನ್ನು
ಆರಂಭಿಸಲು ಮುಂದಾಗಿದ್ದಾರೆ. ಜನವರಿ 1
ರಿಂದ ಈ ನಿಯಮ ಜಾರಿಗೆ ಬರಲಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ
ಮಹಿಳೆಯರ ರಕ್ಷಣೆಗಾಗಿ
ಮೊಬೈಲ್ನಲ್ಲಿ ಪ್ರತ್ಯೇಕ ಬಟನ್
ವ್ಯವಸ್ಥೆಯೊಂದನ್ನು ಜಾರಿ
ಮಾಡಿತ್ತು.
Comments
Post a Comment