ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ‘ದಲಿತರ ದಿನ’
ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ
'ದಲಿತರ ದಿನ'
18 Dec, 2015
ಪ್ರಜಾವಾಣಿ ವಾರ್ತೆ
ಬೆಂಗಳೂರು: ದಲಿತರ
ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ
ಉದ್ದೇಶದಿಂದ ರಾಜ್ಯದ
ಎಲ್ಲ
ಪೊಲೀಸ್
ಠಾಣೆಗಳಲ್ಲೂ ಇನ್ನು ಮುಂದೆ
ಪ್ರತಿ ತಿಂಗಳ 2ನೇ ಭಾನುವಾರ
'ದಲಿತರ ದಿನ' ಆಚರಣೆ ಯಾಗಲಿದೆ!
ಪರಿಶಿಷ್ಟ ಜಾತಿ ಹಾಗೂ
ಪಂಗಡಕ್ಕೆ ಸೇರಿದವರ ವಿರುದ್ಧ
ನಡೆಯುವ ದೌರ್ಜನ್ಯಗಳ ಕುರಿತು
ದಾಖಲಾಗುವ ದೂರುಗಳಿಗೆ
ಪೊಲೀಸರು
ಸಮರ್ಪಕ ವಾಗಿ
ಸ್ಪಂದಿಸುತ್ತಿಲ್ಲವೆಂಬ
ಆರೋಪಗಳು ಕೇಳಿಬಂದಿದ್ದವು. ಈ
ಕಾರಣಕ್ಕೆ 'ದಲಿತರ ದಿನ' ಆಚರಣೆ
ನಿಯಮ ಜಾರಿಗೆ ತರಲಾಗಿದೆ
ಎಂದು ಹಿರಿಯ
ಪೊಲೀಸ್
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಈ ವ್ಯವಸ್ಥೆಯನ್ನು
ಮೊದಲೇ ಜಾರಿಗೆ
ತರಲಾಗಿತ್ತು. ಆದರೆ,
ಆಟಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಿದ್ದ ಈ
ನಿಯಮವನ್ನು
ಕಡ್ಡಾಯಗೊಳಿಸಿ
ರಾಜ್ಯ
ಪೊಲೀಸ್
ಇಲಾಖೆ ಮತ್ತೊಮ್ಮೆ
ಸುತ್ತೋಲೆ ಹೊರಡಿಸಿದೆ.
'ತಿಂಗಳ ಪ್ರತಿ 2ನೇ ಭಾನುವಾರ
ಠಾಣಾ ಮಟ್ಟದಲ್ಲಿ ಸಭೆ ನಡೆಸಬೇಕು.
ಸ್ಥಳೀಯ ದಲಿತ
ಮುಖಂಡರನ್ನು ಸಭೆಗೆ
ಆಹ್ವಾನಿಸಿ, ಕುಂದು-
ಕೊರತೆ ಆಲಿಸ ಬೇಕು.
ಬಳಿಕ ಸತ್ಯಾಸತ್ಯತೆ
ಪರಿಶೀಲಿಸಿ ತತ್ಕ್ಷಣವೇ
ವಿಚಾರಣೆ ಪ್ರಾರಂಭಿ ಸಬೇಕು.
ಇಲಾಖಾ ಮಟ್ಟದಲ್ಲೇ ಬಗೆಹ ರಿಸಲು
ಅಗತ್ಯ ಕ್ರಮ
ತೆಗೆದುಕೊಳ್ಳಬೇಕು'
ಎಂದು ರಾಜ್ಯ
ಪೊಲೀಸ್
ಮಹಾನಿರ್ದೇ ಶಕ ಓಂಪ್ರಕಾಶ್
ಹೊರಡಿಸಿರುವ
ಸುತ್ತೋಲೆಯಲ್ಲಿ ಇದೆ.
ಈ ರೀತಿ ನಡೆಸಿದ ಸಭೆಗಳು,
ಅದರ ಸಾಧಕ–ಬಾಧಕಗಳು, ಸಭೆಯ
ನಡಾ ವಳಿಗಳ ಜತೆಗೆ ಸಮಸ್ಯೆ
ಪರಿಹರಿ ಸಿಲು ಅನುಸರಿಸಿದ ಹಾಗೂ
ಅನುಸರಿಸಲಿರುವ ಕ್ರಮಗಳ ಬಗ್ಗೆ
ಇನ್ಸ್ಪೆಕ್ಟರ್ಗಳು ಸಮಗ್ರ ವರದಿ
ತಯಾರಿಸಿ, ತಮ್ಮ ವಿಭಾಗದ ಡಿಸಿಪಿ,
ಜಿಲ್ಲಾ ಎಸ್ಪಿಗಳಿಗೆ ಸಲ್ಲಿಸಬೇಕು.
ಠಾಣಾಧಿಕಾರಿ ಸಲ್ಲಿಸಿದ ವರದಿ
ಪರಿಶೀಲಿಸಿದ ಬಳಿಕ
ತಿಂಗಳ
ಕೊನೆಯ
ಭಾನುವಾರದಂದು ಜಿಲ್ಲಾ
ಮಟ್ಟದಲ್ಲಿ ಎಸ್ಪಿಗಳು,
ಡಿವೈಎಸ್ಪಿಗಳ ಜತೆ ಸಭೆ ನಡೆಸಬೇಕು.
ಅದೇ ರೀತಿ ಕಮಿಷ ನರೇಟ್
ವ್ಯಾಪ್ತಿಯಲ್ಲಿ ಡಿಸಿಪಿಗಳು,
ತಮ್ಮ ಉಪ ವಿಭಾಗದ ಎಸಿಪಿಗಳ
ಜತೆ ಚರ್ಚಿ ಸಬೇಕು. ನಂತರ
ಕೈಗೊಳ್ಳಬೇಕಾದ
ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆ
ನೀಡಬೇಕು.
ದಲಿತರ ವಿರುದ್ಧ ಯಾವುದೇ
ರೀತಿಯ ದೌರ್ಜನ್ಯ
ಪ್ರಕರಣ ವರದಿಯಾದರೂ, ಹಿರಿಯ
ಅಧಿಕಾರಿಗಳು ಖುದ್ದು ಸ್ಥಳ
ಪರಿಶೀಲನೆ ನಡೆಸುವುದು
ಕಡ್ಡಾಯ. ಆ ನಂತರ
ಅನುಸರಿಸ ಬೇಕಾದ ತನಿಖಾ ವಿಧಾನಗಳ
ಬಗ್ಗೆ ಠಾಣಾಧಿಕಾರಿಗಳಿಗೆ
ಮಾರ್ಗದರ್ಶನ
ನೀಡಬೇಕೆಂದು
ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
ಡಿಜಿಪಿಗೆ ವರದಿ: 'ದಲಿತರ ದಿನ'
ಆಚರಿಸಿ
ತೆಗೆದುಕೊಂಡಿರುವ
ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ
ಪ್ರತಿ ತಿಂಗಳಾಂತ್ಯಕ್ಕೆ
ಡಿಜಿಪಿ ಕಚೇರಿಗೆ ತಪ್ಪದೆ ಕಳುಹಿಸಬೇಕು.
ಒಂದು ವೇಳೆ ನಿಯಮ ಪಾಲಿಸದಿ
ರುವುದು ಗಮನಕ್ಕೆ ಬಂದರೆ ಆ
ಠಾಣಾಧಿ ಕಾರಿ ವಿರುದ್ಧ ಶಿಸ್ತುಕ್ರಮ
ತೆಗೆದುಕೊಳ್ಳುವ ಬಗ್ಗೆ
ಡಿಜಿಪಿ ಕಟ್ಟುನಿಟ್ಟಿನ ಎಚ್ಚರಿಕೆ
ನೀಡಿದ್ದಾರೆ.
*
'ದಲಿತರ ದಿನ' ಈ ಅಂಶಗಳ
ಪರಾಮರ್ಶೆ
* ಪ.ಜಾತಿ/ಪಂಗಡದವರ
ವಿರುದ್ಧ ದಾಖಲಾದ ಪ್ರಕರಣಗಳ
ಪರಿಶೀಲನೆ
*
ಪೊಲೀಸರು
ದಲಿತರಿಗೆ ರಕ್ಷಣೆ ನೀಡಲು
ನಿರಾಕರಿಸಿದ ಬಗ್ಗೆ ದಾಖಲಾದ
ಪ್ರಕರಣ
* ದಲಿತರ ವಿರುದ್ಧ ತೆರೆದಿ ರುವ
ರೌಡಿಪಟ್ಟಿ ಬಗ್ಗೆ
ಪರಿಶೀಲನೆ
* ದಾಖಲಾದ ಪ್ರಕರಣಗಳನ್ನು
ಹಿಂಪಡೆಯಲು ಕೋರಿ
ಸಲ್ಲಿಕೆಯಾದ ಪ್ರಸ್ತಾವಗಳ ವಿಚಾರಣೆ
* ವಿಶೇಷ ಕೋರ್ಟ್ಗೆ ವಹಿಸಲಾದ
ಪ್ರಕರಣಗಳು ಮತ್ತು ಅವುಗಳ
ಪ್ರಗತಿ ಪರಿಶೀಲನ
'ದಲಿತರ ದಿನ'
18 Dec, 2015
ಪ್ರಜಾವಾಣಿ ವಾರ್ತೆ
ಬೆಂಗಳೂರು: ದಲಿತರ
ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ
ಉದ್ದೇಶದಿಂದ ರಾಜ್ಯದ
ಎಲ್ಲ
ಪೊಲೀಸ್
ಠಾಣೆಗಳಲ್ಲೂ ಇನ್ನು ಮುಂದೆ
ಪ್ರತಿ ತಿಂಗಳ 2ನೇ ಭಾನುವಾರ
'ದಲಿತರ ದಿನ' ಆಚರಣೆ ಯಾಗಲಿದೆ!
ಪರಿಶಿಷ್ಟ ಜಾತಿ ಹಾಗೂ
ಪಂಗಡಕ್ಕೆ ಸೇರಿದವರ ವಿರುದ್ಧ
ನಡೆಯುವ ದೌರ್ಜನ್ಯಗಳ ಕುರಿತು
ದಾಖಲಾಗುವ ದೂರುಗಳಿಗೆ
ಪೊಲೀಸರು
ಸಮರ್ಪಕ ವಾಗಿ
ಸ್ಪಂದಿಸುತ್ತಿಲ್ಲವೆಂಬ
ಆರೋಪಗಳು ಕೇಳಿಬಂದಿದ್ದವು. ಈ
ಕಾರಣಕ್ಕೆ 'ದಲಿತರ ದಿನ' ಆಚರಣೆ
ನಿಯಮ ಜಾರಿಗೆ ತರಲಾಗಿದೆ
ಎಂದು ಹಿರಿಯ
ಪೊಲೀಸ್
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಈ ವ್ಯವಸ್ಥೆಯನ್ನು
ಮೊದಲೇ ಜಾರಿಗೆ
ತರಲಾಗಿತ್ತು. ಆದರೆ,
ಆಟಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಿದ್ದ ಈ
ನಿಯಮವನ್ನು
ಕಡ್ಡಾಯಗೊಳಿಸಿ
ರಾಜ್ಯ
ಪೊಲೀಸ್
ಇಲಾಖೆ ಮತ್ತೊಮ್ಮೆ
ಸುತ್ತೋಲೆ ಹೊರಡಿಸಿದೆ.
'ತಿಂಗಳ ಪ್ರತಿ 2ನೇ ಭಾನುವಾರ
ಠಾಣಾ ಮಟ್ಟದಲ್ಲಿ ಸಭೆ ನಡೆಸಬೇಕು.
ಸ್ಥಳೀಯ ದಲಿತ
ಮುಖಂಡರನ್ನು ಸಭೆಗೆ
ಆಹ್ವಾನಿಸಿ, ಕುಂದು-
ಕೊರತೆ ಆಲಿಸ ಬೇಕು.
ಬಳಿಕ ಸತ್ಯಾಸತ್ಯತೆ
ಪರಿಶೀಲಿಸಿ ತತ್ಕ್ಷಣವೇ
ವಿಚಾರಣೆ ಪ್ರಾರಂಭಿ ಸಬೇಕು.
ಇಲಾಖಾ ಮಟ್ಟದಲ್ಲೇ ಬಗೆಹ ರಿಸಲು
ಅಗತ್ಯ ಕ್ರಮ
ತೆಗೆದುಕೊಳ್ಳಬೇಕು'
ಎಂದು ರಾಜ್ಯ
ಪೊಲೀಸ್
ಮಹಾನಿರ್ದೇ ಶಕ ಓಂಪ್ರಕಾಶ್
ಹೊರಡಿಸಿರುವ
ಸುತ್ತೋಲೆಯಲ್ಲಿ ಇದೆ.
ಈ ರೀತಿ ನಡೆಸಿದ ಸಭೆಗಳು,
ಅದರ ಸಾಧಕ–ಬಾಧಕಗಳು, ಸಭೆಯ
ನಡಾ ವಳಿಗಳ ಜತೆಗೆ ಸಮಸ್ಯೆ
ಪರಿಹರಿ ಸಿಲು ಅನುಸರಿಸಿದ ಹಾಗೂ
ಅನುಸರಿಸಲಿರುವ ಕ್ರಮಗಳ ಬಗ್ಗೆ
ಇನ್ಸ್ಪೆಕ್ಟರ್ಗಳು ಸಮಗ್ರ ವರದಿ
ತಯಾರಿಸಿ, ತಮ್ಮ ವಿಭಾಗದ ಡಿಸಿಪಿ,
ಜಿಲ್ಲಾ ಎಸ್ಪಿಗಳಿಗೆ ಸಲ್ಲಿಸಬೇಕು.
ಠಾಣಾಧಿಕಾರಿ ಸಲ್ಲಿಸಿದ ವರದಿ
ಪರಿಶೀಲಿಸಿದ ಬಳಿಕ
ತಿಂಗಳ
ಕೊನೆಯ
ಭಾನುವಾರದಂದು ಜಿಲ್ಲಾ
ಮಟ್ಟದಲ್ಲಿ ಎಸ್ಪಿಗಳು,
ಡಿವೈಎಸ್ಪಿಗಳ ಜತೆ ಸಭೆ ನಡೆಸಬೇಕು.
ಅದೇ ರೀತಿ ಕಮಿಷ ನರೇಟ್
ವ್ಯಾಪ್ತಿಯಲ್ಲಿ ಡಿಸಿಪಿಗಳು,
ತಮ್ಮ ಉಪ ವಿಭಾಗದ ಎಸಿಪಿಗಳ
ಜತೆ ಚರ್ಚಿ ಸಬೇಕು. ನಂತರ
ಕೈಗೊಳ್ಳಬೇಕಾದ
ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆ
ನೀಡಬೇಕು.
ದಲಿತರ ವಿರುದ್ಧ ಯಾವುದೇ
ರೀತಿಯ ದೌರ್ಜನ್ಯ
ಪ್ರಕರಣ ವರದಿಯಾದರೂ, ಹಿರಿಯ
ಅಧಿಕಾರಿಗಳು ಖುದ್ದು ಸ್ಥಳ
ಪರಿಶೀಲನೆ ನಡೆಸುವುದು
ಕಡ್ಡಾಯ. ಆ ನಂತರ
ಅನುಸರಿಸ ಬೇಕಾದ ತನಿಖಾ ವಿಧಾನಗಳ
ಬಗ್ಗೆ ಠಾಣಾಧಿಕಾರಿಗಳಿಗೆ
ಮಾರ್ಗದರ್ಶನ
ನೀಡಬೇಕೆಂದು
ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
ಡಿಜಿಪಿಗೆ ವರದಿ: 'ದಲಿತರ ದಿನ'
ಆಚರಿಸಿ
ತೆಗೆದುಕೊಂಡಿರುವ
ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ
ಪ್ರತಿ ತಿಂಗಳಾಂತ್ಯಕ್ಕೆ
ಡಿಜಿಪಿ ಕಚೇರಿಗೆ ತಪ್ಪದೆ ಕಳುಹಿಸಬೇಕು.
ಒಂದು ವೇಳೆ ನಿಯಮ ಪಾಲಿಸದಿ
ರುವುದು ಗಮನಕ್ಕೆ ಬಂದರೆ ಆ
ಠಾಣಾಧಿ ಕಾರಿ ವಿರುದ್ಧ ಶಿಸ್ತುಕ್ರಮ
ತೆಗೆದುಕೊಳ್ಳುವ ಬಗ್ಗೆ
ಡಿಜಿಪಿ ಕಟ್ಟುನಿಟ್ಟಿನ ಎಚ್ಚರಿಕೆ
ನೀಡಿದ್ದಾರೆ.
*
'ದಲಿತರ ದಿನ' ಈ ಅಂಶಗಳ
ಪರಾಮರ್ಶೆ
* ಪ.ಜಾತಿ/ಪಂಗಡದವರ
ವಿರುದ್ಧ ದಾಖಲಾದ ಪ್ರಕರಣಗಳ
ಪರಿಶೀಲನೆ
*
ಪೊಲೀಸರು
ದಲಿತರಿಗೆ ರಕ್ಷಣೆ ನೀಡಲು
ನಿರಾಕರಿಸಿದ ಬಗ್ಗೆ ದಾಖಲಾದ
ಪ್ರಕರಣ
* ದಲಿತರ ವಿರುದ್ಧ ತೆರೆದಿ ರುವ
ರೌಡಿಪಟ್ಟಿ ಬಗ್ಗೆ
ಪರಿಶೀಲನೆ
* ದಾಖಲಾದ ಪ್ರಕರಣಗಳನ್ನು
ಹಿಂಪಡೆಯಲು ಕೋರಿ
ಸಲ್ಲಿಕೆಯಾದ ಪ್ರಸ್ತಾವಗಳ ವಿಚಾರಣೆ
* ವಿಶೇಷ ಕೋರ್ಟ್ಗೆ ವಹಿಸಲಾದ
ಪ್ರಕರಣಗಳು ಮತ್ತು ಅವುಗಳ
ಪ್ರಗತಿ ಪರಿಶೀಲನ
Comments
Post a Comment