ಟ್ವೆಂಟಿ–20 ಮಾದರಿಯಲ್ಲಿ ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ ಮೊದಲಿಗ ಕ್ರಿಸ್ ಗೇಲ್*-
ಬ್ರಿಸ್ಬೇನ್: ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ
ಹಲವು ಪ್ರಥಮಗಳನ್ನು ಸ್ಥಾಪಿಸಿರುವ ವೆಸ್ಟ್
ಇಂಡೀಸ್ನ ಕ್ರಿಸ್ ಗೇಲ್ ಶನಿವಾರ ಮತ್ತೆ ಎರಡು
ವಿಶಿಷ್ಠ ದಾಖಲೆಗಳನ್ನು ತಮ್ಮ ಹೆಸರಿಗೆ
ಬರೆಸಿಕೊಂಡರು.
ಕೆರಿಬಿಯನ್ ನಾಡಿನ ಆಟಗಾರ ಚಿನ್ನದ ಲೇಪನ
ಹೊಂದಿರುವ ಬ್ಯಾಟ್ ಬಳಸಿ ಆಡಿದ ವಿಶ್ವದ
ಮೊದಲ ಆಟ ಗಾರ ಎಂಬ ಶ್ರೇಯಕ್ಕೆ
ಪಾತ್ರರಾದರು. ಜತೆಗೆ ಟ್ವೆಂಟಿ–20 ಮಾದರಿಯಲ್ಲಿ
ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ
ಮೊದಲಿಗ ಎಂಬ ಹೆಗ್ಗಳಿಕೆ ಯನ್ನೂ
ತಮ್ಮದಾಗಿಸಿ ಕೊಂಡರು.
ಈ ಎರಡೂ ದಾಖಲೆಗಳಿಗೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಗಾಬಾ
ಮೈದಾನ. ಬಿಗ್ ಬಾಷ್ ಲೀಗ್ ಟ್ವೆಂಟಿ–20 ಕ್ರಿಕೆಟ್
ಟೂರ್ನಿಯಲ್ಲಿ ಮೆಲ್ಬರ್ನ್ ರೆನೆಗೆಡ್ಸ್ ತಂಡದ ಪರ ಆಡುತ್ತಿರುವ
ಗೇಲ್ ಅವರು ಚಿನ್ನ ಲೇಪಿತ ಬ್ಯಾಟ್ ಬಳಸಿ ಕ್ರಿಕೆಟ್ ಲೋಕದ ಗಮನ
ಸೆಳೆದರು.
ಭಾರತದ ಪ್ರಸಿದ್ಧ ಕ್ರೀಡಾ ಉತ್ಪನ್ನ ತಯಾರಿಕಾ
ಕಂಪೆನಿ ಸ್ಪಾರ್ಟನ್ , ಗೇಲ್ ಅವರಿಗಾಗಿಯೇ ಈ ವಿಶಿಷ್ಠ ಬ್ಯಾಟ್
ಸಿದ್ಧಪಡಿಸಿತ್ತು.
ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ 333
ಸಂಖ್ಯೆಯ ಜರ್ಸಿ ತೊಟ್ಟಿದ್ದ ಗೇಲ್
ಬ್ಯಾಟಿಂಗ್ ಮಾಡಲು ಬಂದಾಗ
ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು.
ಮೊದಲ ನಾಲ್ಕು ಓವರ್ಗಳ ಕಾಲ
ಕ್ರೀಸ್ನಲ್ಲಿದ್ದ ಅವರು ತಲಾ ಎರಡು ಭರ್ಜರಿ ಸಿಕ್ಸರ್
ಮತ್ತು ಬೌಂಡರಿಗಳನ್ನು ಸಿಡಿಸಿ ಅಭಿಮಾನಿಗಳ ಪ್ರೀತಿಗೆ
ಪಾತ್ರರಾದರು. 16 ಎಸೆತಗಳಲ್ಲಿ 23ರನ್ ಗಳಿಸಿದ್ದ ವೇಳೆ ಎಡಗೈ
ಬ್ಯಾಟ್ಸ್ಮನ್ ಗೇಲ್ ಅವರು ಮಾರ್ಕ್ ಸ್ಟೆಕೆಟೀ
ಬೌಲಿಂಗ್ನಲ್ಲಿ ಲೆಂಡ್ಲ್ ಸಿಮನ್ಸ್ಗೆ ಕ್ಯಾಚ್
ನೀಡಿ ಪೆವಿಲಿಯನ್ ಸೇರಿಕೊಂಡರು.
600 ಸಿಕ್ಸರ್!
ಹೀಟ್ ವಿರುದ್ಧ ಎರಡು ಸಿಕ್ಸರ್ ಬಾರಿಸಿದ ಗೇಲ್ ಚುಟುಕು
ಕ್ರಿಕೆಟ್ನಲ್ಲಿ ನೂತನ ಮೈಲುಗಲ್ಲು ನೆಟ್ಟರು. ಮಾರ್ಕ್
ಸ್ಟೆಕೆಟೀ ಹಾಕಿದ ಮೂರನೇ ಓವರ್ನ ಮೂರನೇ ಎಸೆತವನ್ನು
ಕವರ್ಸ್ ಮೇಲಿಂದ ಸಿಕ್ಸರ್ಗೆ ಅಟ್ಟಿದ ಅವರು
ಕೊನೆಯ ಎಸೆತವನ್ನು ಲಾಂಗ್ ಆನ್ಗೆ ಸಿಕ್ಸರ್
ಬಾರಿಸಿ ದಾಖಲೆ ಬರೆದರು. ಜತೆಗೆ ಟ್ವೆಂಟಿ–20 ಕ್ರಿಕೆಟ್ನಲ್ಲಿ
600ಕ್ಕೂ ಅಧಿಕ ಬೌಂಡರಿ ಮತ್ತು ಸಿಕ್ಸರ್ ದಾಖಲಿಸಿದ ವಿಶ್ವದ
ಮೊದಲ ಬ್ಯಾಟ್ಸ್ಮನ್ ಎನಿಸಿದರು.
*
ಟಿ20ಯಲ್ಲಿ ಗೇಲ್ ಆಡಿದ ತಂಡಗಳು
ವೆಸ್ಟ್ ಇಂಡೀಸ್, ಬಾರಿಸಲ್ ಬುಲ್ಸ್, ಬಾರಿಸಲ್ ಬರ್ನರ್ಸ್,
ಢಾಕಾ ಗ್ಲಾಡಿಯೇಟರ್ಸ್, ಜಮೈಕಾ, ಜಮೈಕಾ ತಲವ್ಹಾಸ್, ಕೋಲ್ಕತ್ತ ನೈಟ್
ರೈಡರ್ಸ್, ಲಯನ್ಸ್, ಮತಬೆಲೆ ಲ್ಯಾಂಡ್ ಟಸ್ಕರ್ಸ್, ಪಿಸಿಎ
ಮಾಸ್ಟರ್ಸ್ ಇಲೆವೆನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು,
ಸೋಮರ್ಸೆಟ್, ಸ್ಟ್ಯಾನ್ಫೋರ್ಡ್ ಸೂಪರ್ಸ್ಟಾರ್ಸ್, ಸಿಡ್ನಿ ಥಂಡರ್ಸ್,
ವೆಸ್ಟ್ ಇಂಡಿಯನ್ಸ್, ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು
ಮೆಲ್ಬರ್ನ್ ರೆನೆಗಡೆಸ್.
Comments
Post a Comment