ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆ:-
ಬೆಂಗಳೂರು: ಕನ್ನಡದ ಹಿರಿಯ ಕವಿ ಕೆ.ವಿ.
ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ
ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ. ತಿರುಮಲೇಶ್ ಅವರ 'ಅಕ್ಷಯ
ಕಾವ್ಯ' ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು,
1 ಲಕ್ಷ ರೂಪಾಯಿ ನಗದು ಹಾಗೂ
ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ.
'ಅಕ್ಷಯ ಕಾವ್ಯ' ತಿರುಮಲೇಶ್ ಅವರ
ಮಹತ್ವಾಕಾಂಕ್ಷೆಯ ಕೃತಿಯಾಗಿದ್ದು, ಇದು
'ಆಧುನಿಕ ಮಹಾಕಾವ್ಯ'ದ ವಿಸ್ತಾರವನ್ನು
ಒಳಗೊಂಡಿದೆ. ಲೋಕದ ಅನುಭವಗಳನ್ನು
ಗಂಡು ಹೆಣ್ಣಿನ ರೂಪಕಗಳ ಮೂಲಕ ಗ್ರಹಿಸುವ
ಪ್ರಯತ್ನ ಹಾಗೂ ಬೇರೆ ಬೇರೆ ಲಯಗಳು
ಬಳಕೆಯಾಗಿರುವ ವಿಶಿಷ್ಟ ಕಾವ್ಯಪ್ರಯೋಗ
ಇದಾಗಿದೆ.
Comments
Post a Comment