ಫಿಲಿಪ್ಪೀನ್ಸ್ ಸುಂದರಿ ಪಿಯಾ ಮಿಸ್ ಯುನಿವರ್ಸ್ 2015r:*
ಲಾಸ್ ವೇಗಾಸ್: ಆಕರ್ಷಕವಾಗಿ ನಡೆದ ಭುವನ ಸುಂದರಿ ಸ್ಫರ್ಧೆಯ
ಫಿನಾಲೆಯಲ್ಲಿ ಫಿಲಿಪ್ಪೀನ್ಸ್ನ ಪಿಯಾ ಅಲೋಂಜೋ
ವರ್ಝ್ಬಾಚ್ ಅವರು ಮಿಸ್ ಯುನಿವರ್ಸ್ 2015 ಆಗಿ ಆಯ್ಕೆಯಾದರು.
ಕೊಲಂಬಿಯಾ ಸುಂದರಿ ಹಾಗೂ ಯುಎಸ್ಎ
ಸುಂದರಿಯರು ಅನುಕ್ರಮವಾಗಿ ಮೊದಲ ಮತ್ತು
ಎರಡನೇ ರನ್ನರ್ ಅಪ್ ಸೌಂದರ್ಯ ಪುರಸ್ಕಾರಕ್ಕೆ ಪಾತ್ರರಾದರು.
ಫಿನಾಲೆಯಲ್ಲಿ ರಾಷ್ಟ್ರೀಯ ಉಡುಗೆ ವಿಭಾಗದಲ್ಲಿ
ಥಾಯ್ಲೆಂಡ್ ಸುಂದರಿ ಆಯ್ಕೆಯಾದರು. ಯುಎಸ್ಎ,
ಕೊಲಂಬಿಯಾ, ಜಪಾನ್, ಥಾಯ್ಲೆಂಡ್,
ಆಸ್ಟ್ರೇಲಿಯಾ, ಡೊಮಿನಿಕನ್ ರಿಪಬ್ಲಿಕ್, ಫ್ರಾನ್ಸ್,
ಕ್ಯುರಕಾವೊ, ಫಿಲಿಪ್ಪೀನ್ಸ್ ಮತ್ತು
ವೆನೆಜುವೆಲಾ ಸುಂದರಿಯರು ಟಾಪ್ 10 ಪಟ್ಟಿಗೆ ಏರಿದ್ದರು.
ಭಾರತದ ಊರ್ವಶಿ ರಾಟೆಲಾ ಅವರೂ ಸ್ಫರ್ಧೆಯಲ್ಲಿದ್ದರಾದರೂ,
ಕಿರೀಟ ವಂಚಿತರಾದರು.
Comments
Post a Comment