ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ ಬೆಂಗಳೂರಿನ ಕ್ಯಾನ್ಸರ್ ತಜ್ಞರ ಸಾಧನೆ | 25ಗ್ರಾಂ ತೂಕದ ಉಪಕರಣ


ಬೆಂಗಳೂರು: ಗಂಟಲು
ಕ್ಯಾನ್ಸರ್ನಿಂದ ಧ್ವನಿಯನ್ನೇ
ಕಳೆದುಕೊಂಡವರ ಬದುಕಿನಲ್ಲಿ
ಹೊಸ ಆಶಾಕಿರಣ ಮೂಡಿದೆ. ಕೃತಕ
ಧ್ವನಿಪೆಟ್ಟಿಗೆಗಾಗಿ ಸಾವಿರಾರು
ಖರ್ಚು ಮಾಡುವ ಅಗತ್ಯವೂ
ಇನ್ನಿಲ್ಲ.
ಬೆಂಗಳೂರು ಮೂಲದ ಕ್ಯಾನ್ಸರ್
ತಜ್ಞರೊಬ್ಬರು ಧ್ವನಿ
ಉಪಕರಣವನ್ನು ತಯಾರಿಸಿದ್ದು,
ಇದನ್ನು ಕೇವಲ ರು.50ಕ್ಕೆ
ಲಭ್ಯವಾಗುವಂತೆ ಮಾಡಿದ್ದಾರೆ.
ಬರೀ 25ಗ್ರಾಂ ತೂಕವಿರುವ ಈ
ಉಪಕರಣ ಬಡವರ ಪಾಲಿಗೆ ವರದಾನವಾಗಿ
ಪರಿಣಮಿಸಿದೆ.
ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ'
ವರದಿ ಮಾಡಿದೆ. ``ಮಾತಾಡುವುದು
ಮನುಷ್ಯನ ಹಕ್ಕು. ಕ್ಯಾನ್ಸರ್
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ
ಧ್ವನಿಪೆಟ್ಟಿಗೆ ತೆಗೆದುಹಾಕಿದಾಗ, ಅವರಲ್ಲಿ
ಮಾತನಾಡುವ ಆಸೆ ಇನ್ನಷ್ಟು
ಮೊಳೆಯುತ್ತದೆ. ಕ್ಯಾನ್ಸರ್
ಜೊತೆಗೆ ಧ್ವನಿ ಕಳೆ ದುಕೊಂಡಿರುವ
ನೋವೂ ಅವರನ್ನು
ಭಾವನಾತ್ಮಕವಾಗಿ ಕುಂದಿಸುತ್ತದೆ.
ಹಾಗಾಗಬಾರದೆಂದು ಬಡವರನ್ನು
ಗಮನದಲ್ಲಿಟ್ಟುಕೊಂಡೇ ಈ
ಕಡಿಮೆಬೆಲೆಯ ಉಪಕರಣ ತಯಾರಿಸಲಾಗಿದೆ
ಎಂದು ಇದರ ಸೃಷ್ಟಿಕರ್ತ ಡಾ. ವಿಶಾಲ್
ರಾವ್ ತಿಳಿಸಿದ್ದಾರೆ. ಸಾಮಾನ್ಯವಾಗಿ
ಧ್ವನಿ ಉಪಕರಣದ ಬೆಲೆ 20ಸಾವಿರ ಇದ್ದು,
ಅದು ಬಡವರಿಗೆ ಸುಲಭಕ್ಕೆ
ಎಟುಕುವಂಥದ್ದಲ್ಲ. ಅಲ್ಲದೆ
ಅದನ್ನು ಆರು ತಿಂಗಳಿಗೊಮ್ಮೆ
ಬದಲಿಸಬೇಕಾಗುತ್ತದೆ.
ಆದ್ದರಿಂದ ಬಡವರಿಗಾಗಿ ಇದನ್ನು
ತಯಾರು ಮಾಡಿದ್ದೇನೆ'' ಎಂದು
ಅವರು ತಿಳಿಸಿದ್ದಾರೆ. ಸಾಮಾನ್ಯ
ಜನತೆಗಾಗಿ ಮಾಡಿರುವ ಈ ಉಪಕರಣಕ್ಕೆ
ಆಮ್ ವಾಯ್ಸ್ ಪ್ರಾಸ್ಥೆಸಿಸ್ ಎಂದೇ
ಹೆಸರಿಟ್ಟಿದ್ದಾರೆ ಡಾ.ರಾವ್. ಈ
ಯೋಜನೆಗೆ ಆರ್ಥಿಕ ವಿಭಾಗಗಳ ಸಲಹೆ
ಸಹಕಾರಕ್ಕೆ ಅವರ ಗೆಳೆಯ ಶಶಾಂಕ್
ಮಹೇಶ್ ಎಂಬ ಉದ್ಯಮಿ
ನಿಂತಿದ್ದಾರೆ.
ಇದರ ಬೆಲೆ ರು.50 ಆದರೂ ಇದನ್ನು
ಅಂತಾರಾಷ್ಟ್ರೀಯ
ಮಾರುಕಟ್ಟೆಗೆ ಹೊಂದಿಕೆಯಾಗ
ಲೆಂದು 1ಡಾಲರ್ ವಾಯ್ಸ್ ಬಾಕ್ಸ್
ಎಂದು ಪ್ರಚಾರ ನೀಡಲಾಗುತ್ತಿದೆ.
ಈ ಯಂತ್ರದ ಅಳತೆ ಕೇವಲ 2.5
ಸೆಂಮೀ.
Posted by: MC | Source: Online Desk

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು