68ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ನಲ್ಲಿ ಬಾಗಲಕೋಟೆಗೆ ಮತ್ತೊಂದು ಬಂಗಾರ, 2 ಬೆಳ್ಳಿ:*
ಬಾಗಲಕೋಟ: ಪಂಜಾಬ್ನ ಲೂಧಿಯಾನದಲ್ಲಿ ನಡೆಯುತ್ತಿರುವ 68ನೇ
ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್
ಷಿಪ್ನಲ್ಲಿ ಶುಕ್ರವಾರವೂ ಬಾಗಲಕೋಟ ಜಿಲ್ಲೆಯ
ಕ್ರೀಡಾಪಟುಗಳು ಮತ್ತೊಂದು
ಬಂಗಾರದ ಪದ ಹಾಗೂ ಎರಡು ಬೆಳ್ಳಿ ಪದಕ ಜಯಿಸಿದ್ದಾರೆ.
14 ವರ್ಷದೊಳಗಿನ ಮಹಿಳೆಯರು 2 ಕಿಮೀ
ಪರಶೂಟ್ನಲ್ಲಿ ದಾನಮ್ಮ ಚಿಚಖಂಡಿ ಪ್ರಥಮ ಸ್ಥಾನ ಪಡೆದು
ಬಂಗಾರದ ಪದಕ
ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 14
ವರ್ಷದೊಳಗಿನ ಪುರುಷರ 2 ಕಿಮೀ
ಪರಶೂಟ್ನಲ್ಲಿ ವೆಂಕಪ್ಪ ಕೆಂಗಲಗುತ್ತಿ, 16
ವರ್ಷದೊಳಗಿನ ಪುರುಷರ 2 ಕಿಮೀ
ಪರಶೂಟ್ನಲ್ಲಿ ರಾಜು ಬಾಟಿ ದ್ವಿತೀಯ ಸ್ಥಾನ ಪಡೆದು
ಬೆಳ್ಳಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಾನಮ್ಮ ಚಿಚಖಂಡಿ ಬುಧವಾರ ನಡೆದಿದ್ದ ಟೈಮ್ ಟ್ರಯಲ್ನ
500 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಿದ್ದರು.
ಇದರಿಂದಾಗಿ ಬಾಗಲಕೋಟ ಜಿಲ್ಲೆಯ ಕ್ರೀಡಾಪಟುಗಳು
ಒಟ್ಟು ಎರಡು ಬಂಗಾರದ ಪದಕ ಹಾಗೂ ನಾಲ್ಕು ಬೆಳ್ಳಿ ಪದಕ
ಪಡೆದಂತಾಗಿದೆ.
Comments
Post a Comment