ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ:*

Dec 17, 2015, 12:21 PM IST
ಹೊಸದಿಲ್ಲಿ: ಭಾರತದ ಗಣರಾಜ್ಯೋತ್ಸವದ
ದಿನದಂದು ಮುಖ್ಯ ಅತಿಥಿಯನ್ನು
ಆಹ್ವಾನಿಸುವ ಸಂಪ್ರದಾಯವನ್ನು
ಅನುಸರಿಸಿರುವ ಪ್ರಧಾನಿ ನರೇಂದ್ರ ಮೋದಿ
ಅವರ ಕಾರ್ಯಾಲಯ 2016ರ ಜನವರಿ 26ರ
ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ
ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್
ಹೊಲಾಂಡೆ ಅವರನ್ನು ಆಹ್ವಾನಿಸಿದೆ.
ಹೊಲಾಂಡೆ ಅವರು ಭಾರತದ ಸರಕಾರದ ಈ
ಆಹ್ವಾನವನ್ನು ಸ್ವೀಕರಿಸಿದ್ದು
ಗಣರಾಜ್ಯೋತ್ಸವ ಸಮಾರಂಭದಲ್ಲಿ
ಭಾರತೀಯ ಸೇನೆಯಿಂದ ಗೌರವ ವಂದನೆಯನ್ನು
ಸ್ವೀಕರಿಸಲಿದ್ದಾರೆ.
"ಹೊಲಾಂಡೆ ಅವರ ಭೇಟಿಯಿಂದ ಭಾರತ
ಮತ್ತು ಫ್ರಾನ್ಸ್ ನಡುವಿನ ಪ್ರಬಲ ವ್ಯೂಹಾತ್ಮಕ
ಭಾಗೀದಾರಿಕೆ ಮತ್ತು ಉಭಯ ದೇಶಗಳ
ನಡುವಿನ ವಿಶೇಷ ರೀತಿಯ ಸಂಬಂಧಗಳು
ಇನ್ನಷ್ಟು ಸದೃಢವಾಗುವುದೆಂಬ ವಿಶ್ವಾಸ
ನಮಗಿದೆ ಎಂದು ವಿದೇಶ ವ್ಯವಹಾರಗಳ
ಸಚಿವಾಲಯವು ಟ್ವೀಟ್ ಮಾಡಿದೆ.
ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
ಅವರು ಗಣರಾಜ್ಯೋತ್ಸವದ ಮುಖ್ಯ
ಅತಿಥಿಯಾಗಿ ಪಾಲ್ಗೊಂಡಿದ್ದರು. ಒಬಾಮಾ
ಜತೆಗೆ ಅವರ ಪತ್ನಿ ಮಿಶೆಲ್ ಒಬಾಮಾ ಕೂಡ
ಬಂದಿದ್ದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು