ಪ್ರೊ ಬಾಕ್ಸಿಂಗ್: ವಿಜೇಂದರ್ಗೆ ಹ್ಯಾಟ್ರಿಕ್ ಗೆಲುವು:-
20 Dec, 2015
ಮ್ಯಾಂಚೆಸ್ಟರ್ (ಪಿಟಿಐ): ಗೆಲುವಿನ ಓಟ
ಮುಂದುವರೆಸಿರುವ ಭಾರತದ ವಿಜೇಂದರ್
ಸಿಂಗ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಹ್ಯಾಟ್ರಿಕ್ ಜಯ
ಸಾಧಿಸಿದ್ದಾರೆ.
ಮೂರನೇ ಪಂದ್ಯದಲ್ಲಿ ವಿಜೇಂದರ್
ಬಲ್ಗೇರಿಯಾದ ಅನುಭವಿ ಬಾಕ್ಸರ್ ಸಮೆಟ್
ಹ್ಯುಸೆಯಿನೊವ್ ಅವರನ್ನು ಮಣಿಸಿದ್ದಾರೆ.
ಎರಡನೇ ಸುತ್ತು ಪೂರ್ಣಗೊಳ್ಳುವ
ಮುನ್ನವೇ ವಿಜೇಂದರ್ಗೆ ಜಯ ಒಲಿಯಿತು.
2ನೇ ಸುತ್ತು ಆರಂಭಗೊಂಡ ಸುಮಾರು
35 ಸೆಕೆಂಡುಗಳಲ್ಲಿ ಬಲವಾದ ಪಂಚಗಳ ಮೂಲಕ
ಎದುರಾಳಿಯನ್ನು ಕಂಗೆಡಿಸಿದ ವಿಜೇಂದರ್
ಅವರನ್ನು ಟೆಕ್ನಿಕಲ್ ನಾಕೌಟ್ ಮೂಲಕ ವಿಜೇತ
ಎಂದು ಪಂದ್ಯದ ರೆಫರಿ ಘೋಷಿಸಿದರು.
ಮಾಜಿ ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್ಷಿಪ್
ಕಂಚಿನ ಪದಕ ವಿಜೇತ ವಿಜೇಂದರ್ ಕಳೆದ
ಅಕ್ಟೋಬರ್ನಲ್ಲಷ್ಟೇ ವೃತ್ತಿಪರ ಬಾಕ್ಸಿಂಗ್
ಕಣಕ್ಕೆ ಧುಮುಕಿದ್ದರು. ಈವರೆಗಿನ ಮೂರು
ಪಂದ್ಯಗಳಲ್ಲಿ ಜಯ ದಾಖಲಿಸಿದ್ದು ವಿಶೇಷ.
ವಿಜೇಂದರ್ ಅವರು ಮೊದಲ ಪಂದ್ಯದಲ್ಲಿ ಸನ್ನಿ
ವೈಟಿಂಗ್ ಹಾಗೂ ಎರಡನೇ ಪಂದ್ಯದಲ್ಲಿ
ಡೀನ್ ಗಿಲ್ಲೆನ್ ಅವರನ್ನು ಮಣಿಸಿದ್ದರು.
30 ವರ್ಷದ ವಿಜೇಂದರ್ ಹ್ಯಾಟ್ರಿಕ್ ಜಯದ
ಮೂಲಕ ಭವಿಷ್ಯದ ಎದುರಾಳಿಗಳಿಗೆ ಎಚ್ಚರಿಕೆಯ
ಸಂದೇಶ ರವಾನಿಸಿದ್ದಾರೆ.
Comments
Post a Comment