ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಸೇವೆಗೆ ಸಿದ್ಧ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ ಭಾರತೀಯ ಎಂಜಿನಿಯರ್ ಗಳ ಸಾಧನೆ,:*
ಜಮ್ಮು ಮತ್ತು ಕಾಶ್ಮೀರ
ರಾಷ್ಟ್ರೀಯ ಹೆದ್ದಾರಿಯಲ್ಲಿ
ನಿರ್ಮಾಣವಾಗಿರುವ ಸುರಂಗ
ಮಾರ್ಗ (ಸಂಗ್ರಹ ಚಿತ್ರ)
ಶ್ರೀನಗರ: ಜಮ್ಮು ಮತ್ತು
ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ
ಕೆಳಗೆ ಕೊರೆಯಲಾಗಿರುವ
ಸುಮಾರು 9 ಕಿ.ಮೀ ದೂರದ ರಸ್ತೆ
ಸುರಂಗ ಮಾರ್ಗವೊಂದು
ಭಾರತೀಯ ಎಂಜಿನಿಯರ್ ಗಳನ್ನು
ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸುವಂತೆ
ಮಾಡಿದೆ.
ಶ್ರೀನಗರದಿಂದ ಸುಮಾರು 170
ಕಿ.ಮೀ ದೂರದಲ್ಲಿ ಈ ಸುರಂಗ
ಮಾರ್ಗವನ್ನು ಕೊರೆಯಲಾಗಿದ್ದು,
ಸುಮಾರು 9 ಕಿ.ಮೀ ದೂರದ ರಸ್ತೆಗೆ
ಈ ವರೆಗೂ ಸುಮಾರು 2, 500
ಕೋಟಿ ರು. ವ್ಯಯಿಸಲಾಗಿದೆ.
ದೇಶದ ಅತಿದೊಡ್ಡ ರಸ್ತೆ ಸುರಂಗ
ಮಾರ್ಗವೆಂದೇ ಖ್ಯಾತಿಗಳಿಸಿರುವ
ಈ ರಸ್ತೆ ಮುಂಬರುವ ಜುಲೈ
ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ.
ಆ ಮೂಲಕ ಜಮ್ಮು ಮತ್ತು
ಶ್ರೀನಗರ ನಡುವಿನ ರಸ್ತೆ ಸಂಚಾರ
ಇನ್ನಷ್ಟು ಸುಗಮವಾಗಲಿದೆ.
ಇದಕ್ಕೂ ಮೊದಲು ಜಮ್ಮು
ಮತ್ತು ಶ್ರೀನಗರ ನಡುವೆ
ಸಂಚರಿಸಲು ರಾಷ್ಟ್ರೀಯ ಹೆದ್ದಾರಿ
ಇದೆಯಾದರೂ ಇಲ್ಲಿ ಸುಮಾರು 30
ಕಿ.ಮೀ ಸುತ್ತಿಕೊಂಡು
ಹೋಗುವ ದಾರಿಯಾಗಿತ್ತು.
ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ
ಪ್ರಯಾಣಿಕರಿಗೆ ಸಮಯ ಮತ್ತು ಹಣ
ಎರಡೂ ವ್ಯರ್ಥವಾಗುತ್ತಿತ್ತು.
ಇದೀಗ ಈ ಸುರಂಗ
ಮಾರ್ಗದಿಂದಾಗಿ ಪ್ರಯಾಣಿಕ
ಸುಮಾರು 30 ಕಿ.ಮೀ ದೂರದ
ಪ್ರಯಾಣ ಕೇವಲ 9 ಕಿ.ಮೀ
ಇಳಿಯಲಿದೆ. ಪ್ರವಾಸೋಧ್ಯಮವನ್ನು
ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ
ಸರ್ಕಾರ ಮತ್ತು ಜಮ್ಮು ಮತ್ತು
ಕಾಶ್ಮೀರ ಸರ್ಕಾರಗಳು
ಕೈಗೊಂಡಿರುವ ಜಂಟಿ
ಯೋಜನೆ ಇದಾಗಿದ್ದು, ಪಟ್ನಿಟಾಪ್
ನಂತಹ ಪ್ರವಾಸಿ ಕೇಂದ್ರಗಳಿಗೆ
ಪ್ರವಾಸಿಗರನ್ನು ಸೆಳೆಯುವುದು
ಪ್ರಮುಖ ಉದ್ದೇಶವಾಗಿದೆ.
Comments
Post a Comment