ಡಾ.ರಾಕೇಶ್ಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ
24 Dec, 2015
ವಾಷಿಂಗ್ಟನ್: ಹಾರ್ವರ್ಡ್ ವೈದ್ಯಶಾಲೆಯ
ಪ್ರೊಫೆಸರ್ ಮತ್ತು ಮಸಾಚುಸೆಟ್ಸ್ನ
ಜನರಲ್ ಹಾಸ್ಪಿಟಲ್ನ ಜೀವಶಾಸ್ತ್ರ
ಪ್ರಯೋಗಾಲಯದ ನಿರ್ದೇಶಕ ಭಾರತ ಮೂಲದ ಡಾ.
ರಾಕೇಶ್ ಕೆ. ಜೈನ್ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್
ಒಬಾಮ ಅವರು ರಾಷ್ಟ್ರೀಯ ವಿಜ್ಞಾನ
ಪದಕ ಪ್ರದಾನ ಮಾಡಲಿದ್ದಾರೆ.
ರಾಕೇಶ್ ಜೈನ್ ಅವರು ಕಾನ್ಪುರದ ಭಾರತೀಯ
ತಾಂತ್ರಿಕ ಸಂಸ್ಥೆಯಿಂದ ಕೆಮಿಕಲ್
ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್
ಪೂರೈಸಿದ್ದರು. ಜನವರಿಯಲ್ಲಿ ಶ್ವೇತಭವನದಲ್ಲಿ
ನಡೆಯುವ ರಾಷ್ಟ್ರೀಯ ವಿಜ್ಞಾನ ಪದಕ
ಮತ್ತು ರಾಷ್ಟ್ರೀಯ ತಂತ್ರಜ್ಞಾನ
ಪದಕ ಪ್ರದಾನ ಕಾರ್ಯಕ್ರಮದಲ್ಲಿ ಅವರು, ಇತರೆ
16 ಸಾಧಕರೊಂದಿಗೆ ಒಬಾಮ
ಅವರಿಂದ ಈ ಗೌರವ
ಸ್ವೀಕರಿಸಲಿದ್ದಾರೆ.
ಮಂಗಳವಾರ ಈ ಕುರಿತು ಪ್ರಕಟಣೆ
ಹೊರಡಿಸಿದ ಶ್ವೇತಭವನ, 'ಈ
ಪದಕಗಳು ವಿಜ್ಞಾನ ಮತ್ತು ತಂತ್ರಜ್ಞಾನ
ಕ್ಷೇತ್ರಗಳಲ್ಲಿನ ನಾಯಕರು ಮತ್ತು ಸಾಧಕರಿಗೆ
ನೀಡುವ ನಮ್ಮ ದೇಶದ ಅತ್ಯಂತ
ದೊಡ್ಡ ಗೌರವ' ಎಂದು ಹೇಳಿದೆ.
ವಿವಿಧ ವಿಷಯಗಳ ಸುಮಾರು 200 ಸಂಶೋಧನಾ
ವಿದ್ಯಾರ್ಥಿಗಳಿಗೆ ಜೈನ್ ಮಾರ್ಗದರ್ಶನ ಮಾಡಿದ್ದಾರೆ.
Comments
Post a Comment