ಆಸ್ಕರ್ ವಿಜೇತ ಖ್ಯಾತ ಹಾಲಿವುಡ್ ಛಾಯಾಗ್ರಾಹಕ ಹಸ್ಕೆಲ್ ಇನ್ನಿಲ್ಲ
BY ವಿಜಯವಾಣಿ ನ್ಯೂಸ್
· DEC 28, 2015
ಲಾಸ್ ಏಂಜೆಲಿಸ್ : ಎರಡು ಬಾರಿ ಆಸ್ಕರ್ ಪ್ರಶಸ್ತಿ
ಗೆದ್ದುಕೊಂಡ ಹಾಲಿವುಡ್ನ
ಖ್ಯಾತ ಛಾಯಾಗ್ರಾಹಕ ಹಸ್ಕೆಲ್ ವೆಕ್ಸ್ಲರ್ ತಮ್ಮ
93 ನೇ ವಯಸ್ಸಿನಲ್ಲಿ
ಕೊನೆಯುಸಿರೆಳೆದಿದ್ದಾರೆ.
ಆರು ದಶಕಗಳ ತಮ್ಮ ವೃತ್ತಿ
ಜೀವನದಲ್ಲಿ ಯುದ್ದ,
ರಾಜಕೀಯ ಹಾಗೂ ಸಮಾಜದ ಅವ್ಯವಸ್ಥೆ
ಬಗ್ಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ
ಹಕ್ಸೆಲ್, ಚಿತ್ರ ನಿರ್ವಣದ ಜತೆಗೆ ಸಾಮಾಜಿಕ ಕಳಕಳಿ,
ನ್ಯಾಯ, ಮತ್ತು ಶಾಂತಿ ಸಂದೇಶ
ನೀಡುವುದಕ್ಕೆ ಹೆಚ್ಚಿನ ಮಹತ್ವ
ನೀಡಿದ್ದರು.
'ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್',
'ಬೌಂಡ್ ಆಫ್ ಗ್ಲೋರಿ',
'ಮೀಡಿಯಮ್ ಕೂಲ್' ಅವರ ಕೆಲವು ಮಹತ್ವದ
ಚಿತ್ರಗಳು.
ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್
ಚಿತ್ರವು 1966 ರಲ್ಲಿ ಹಕ್ಸಲ್ ಅವರಿಗೆ
ಮೊದಲ ಆಸ್ಕರ್ ಪ್ರಶಸ್ತಿ
ತಂದುಕೊಟ್ಟರೆ, ಬೌಂಡ್
ಆಫ್ ಗ್ಲೋರಿ ಚಿತ್ರ 1976ರಲ್ಲಿ
ಎರಡನೇ ಆಸ್ಕರ್ ಪ್ರಶಸ್ತಿಯನ್ನು ಅವರ
ಬಗಲಿಗೇರಿಸಿತ್ತು. 1985 ರಲ್ಲಿ ಯುದ್ಧದ ತಿರುಳು
ಹೊಂದಿದ್ದ
'ಲ್ಯಾಟಿನೊ' ಚಿತ್ರಕ್ಕೆ ಕಥೆ ಬರೆದು
ನಿರ್ದೇಶಿಸಿದ್ದರು.
Comments
Post a Comment