ಕಾಲ ಜ್ಞಾನದ ಬಗ್ಗೆ ಕಿರುಮಾಹಿತಿ :-
ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.
ನಮ್ಮ ವಿಜ್ಞಾನದ ಪ್ರಕಾರ.ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು 5 ಗಂಟೆ, 56 ನಿಮಿಷಗಳು, 45 ಸೆಕಂಡ ,51 ಮಿಲಿ ಸೆಕೆಂಡ .
ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).
ಭಾರತೀಯರ ಕಾಲ ಜ್ಞಾನ/ ಸನಾತನ ಜೋತ್ಯಿಷ ಶಾಸ್ತ್ರ:-
15ನಿಮೇಷ = 1 ಕಾಷ್ಠಾ
30 ಕಾಷ್ಠಾ = 1ಕಲ
30 ಕಲ = 1 ಕ್ಷಣ
12 ಕ್ಷಣ. = 1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ, = 1 ಮಾಸ ( ತಿಂಗಳು)
2ಮಾಸ = 1ಋತು.
6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ.
1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
1,200 ದೇವ ವರ್ಷ = 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
2,400 ದೇವ ವರ್ಷಗಳು = 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
3,600 ದೇವ ವರ್ಷಗಳು = 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
4,800 ದೇವ ವರ್ಷ = 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.
ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.
360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.
ಹೀಗೆ ಮುಂದುವರಿಯುತ್ತದೆ ನಮ್ಮ ಹಿರಿಯರ ಜ್ಞಾನ.
ಇದರಿಂದ ನಮಗೆ ಸ್ಪಷ್ಟವಾಗುತ್ತೆ ಈ ಅವ್ಯಜ್ಞಾನಿಕ ಗ್ರೆಗೋರಿಯನ್ ಕ್ಯಾಲೆಂಡರ್ ಎಷ್ಟೇ ತಿಣುಕಾಡಿದರು ಸಮಯವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುವುದಿಲ್ಲವೆಂದು ಆದರೆ ನಮ್ಮ ಜೋತಿಷ್ಯ ವಿಜ್ಞಾನ ಸ್ಪಷ್ಟವಾಗಿ ನಿಖರವಾಗಿ ಕಾಲವನ್ನು ಸೂಚಿಸುತ್ತದೆ.
Comments
Post a Comment