ಮರಾಠಿ ಲೇಖಕ ಪ್ರೊ.ಶ್ಯಾಮ್ ಮನೋಹರ್ಗೆ ಕುವೆಂಪು ಪ್ರಶಸ್ತಿ (೨೦೧೫)
22 Dec, 2015
ಪ್ರಜಾವಾಣಿ ವಾರ್ತೆ
ತೀರ್ಥಹಳ್ಳಿ: ಪುಣೆಯ ಹಿರಿಯ ಮರಾಠಿ ಸಾಹಿತಿ
ಪ್ರೊ.ಶ್ಯಾಮ್ ಮನೋಹರ್ ಅವರನ್ನು
2015ನೇ ಸಾಲಿನ ಕುವೆಂಪು ರಾಷ್ಟ್ರೀಯ
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕುಪ್ಪಳಿ
ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ
ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ 111ನೇ ಜನ್ಮ
ದಿನೋತ್ಸವ ಹಾಗೂ ಕುವೆಂಪು
ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಮಾರಂಭ
ಡಿ.29 ರಂದು ಕುಪ್ಪಳಿಯ ಕುವೆಂಪು ಜನ್ಮ
ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು
ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ₹ 5 ಲಕ್ಷ ನಗದು ಪುರಸ್ಕಾರ
ಹೊಂದಿದೆ. ಸುಪ್ರೀಂಕೋರ್ಟ್ ನಿವೃತ್ತ
ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ
ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಡಾ.ಕೆ.ಪುಟ್ಟಸ್ವಾಮಿ ಸಂಪಾದಕತ್ವದ
'ಕುವೆಂಪು–ಮಲೆನಾಡು' ಪುಸ್ತಕ ಬಿಡುಗಡೆ
ಮಾಡಲಾಗುವುದು ಕುವೆಂಪು ಪ್ರತಿಷ್ಠಾನದ
ಅಧ್ಯಕ್ಷ ಹಂಪ ನಾಗರಾಜಯ್ಯ ಅಧ್ಯಕ್ಷತೆ
ವಹಿಸಲಿದ್ದಾರೆ.
ಮಧ್ಯಾಹ್ನ ಸಂಸತ್ ಸದಸ್ಯ ಎಂ.ವೀರಪ್ಪ
ಮೊಯಿಲಿ ಅಧ್ಯಕ್ಷತೆಯಲ್ಲಿ 'ಸಮಕಾಲೀನತೆ
ಮತ್ತು ಕುವೆಂಪು ಅವರ ತತ್ವ ಚಿಂತನೆಗಳು'
ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಚಿಂತಕರಾದ ಎಸ್.ಸುರೇಶ್ಕುಮಾರ್,
ಬಿ.ಎಲ್.ಶಂಕರ್ ಹಾಗೂ ವೈ.ಎಸ್.ವಿ. ದತ್ತ
ಮಾತನಾಡಲಿದ್ದಾರೆ ಎಂದು ಕಡಿದಾಳ್ ಪ್ರಕಾಶ್
ತಿಳಿಸಿದ್ದಾರೆ.
Comments
Post a Comment