ಅಮಿತಾಭ್ ಕಾಂತ:* ನೀತಿ ಆಯೋಗದ ನೂತನ ಸಿಇಒ
ನೀತಿ ಆಯೋಗಕ್ಕೆ ಹೊಸ ಸಿಇಒ:*
amitabh-kant
ಹೊಸದಿಲ್ಲಿ: ಉದ್ಯಮ ನೀತಿ ಮತ್ತು
ಉತ್ತೇಜನ ವಿಭಾಗದ ಕಾರ್ಯದರ್ಶಿ
ಅಮಿತಾಭ್ ಕಾಂತ್ ಅವರಿಗೆ ನೀತಿ
ಆಯೋಗದ ಸಿಇಒ ಹೊಣೆಯನ್ನು
ಹೆಚ್ಚುವರಿಯಾಗಿ ನೀಡಲಾಗಿದೆ.
ಪ್ರಧಾನಿ ನೇತೃತ್ವದ ಸಂಪುಟದ
ನೇಮಕ ಸಮಿತಿಯು ಅಮಿತಾಭ್
ಕಾಂತ್ರನ್ನು ನೂತನ ಸಿಇಒ ಆಗಿ
ನೇಮಕ ಮಾಡಿದೆ. ನೀತಿ
ಆಯೋಗದ ಹಾಲಿ ಸಿಇಒ
ಸಿಂಧುಶ್ರೀ ಖುಲ್ಲರ್ ಅವರ ಒಂದು
ವರ್ಷದ ಅಧಿಕಾರಾವಧಿ
ಮಂಗಳವಾರವಷ್ಟೇ
ಅಂತ್ಯವಾಗಿದೆ.
ಉದ್ಯಮ ನೀತಿ ನಿರ್ಧಾರ, ಅಭಿವೃದ್ಧಿ,
ಉದ್ಯಮದ ಬೆಳವಣಿಗೆ ಮೇಲೆ ನಿಗಾ
ಇಡುವುದು, ಎಫ್ಡಿಐ ನೀತಿಯ
ಸಮರ್ಪಕ ಜಾರಿ ಸೇರಿದಂತೆ ನಾನಾ
ಜವಾಬ್ದಾರಿಯನ್ನು ಕಾಂತ್
ನಿಭಾಯಿಸಿದ್ದು, ಹೊಸ
ಹೊಣೆಗಾರಿಕೆ ಅವರ ಮೇಲಿದೆ.
Comments
Post a Comment