2016ರ ಫಿಲ್ಮ್ಫೇರ್ ಪ್ರಶಸ್ತಿ ಪ್ರಕಟ : ರಣವೀರ್, ದೀಪಿಕಾ ಅತ್ಯುತ್ತಮ ನಟ, ನಟಿ:*-
ಮುಂಬೈ, ಜ.16-ಭಾರತೀಯ
ಚಲನಚಿತ್ರರಂಗದಲ್ಲಿ ಅತ್ಯುತ್ತಮ ನಟನೆಗೆ
ನೀಡಲಾಗುವ ಪ್ರತಿಷ್ಠಿತ ಫಿಲ್ಮ್ಫೇರ್ ಪ್ರಶಸ್ತಿಯು ಈ ಬಾರಿ
ಕನ್ನಡದ ನಟಿ ದೀಪಿಕಾ ಪಡುಕೋಣೆಗೆ ಲಭಿಸಿದೆ.
ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ
ಬಾಜಿರಾವ್ಮಸ್ತಾನಿ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ 2016ನೆ
ಸಾಲಿನ ಫಿಲ್ಮ್ಫೇರ್ ಪ್ರಶಸ್ತಿಯು ದೀಪಿಕಾ ಪಡುಕೋಣೆಗೆ
ಸಿಕ್ಕಿದೆ. ಕಳೆದ ರಾತ್ರಿ ಮುಂಬೈನ ಸರ್ದಾರ್ ವಲ್ಲಭಬಾಯಿ ಪಟೇಲ್
ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಬಾಜಿರಾವ್ ಮಸ್ತಾನಿ ಒಟ್ಟು 9 ಪ್ರಶಸ್ತಿಗಳನ್ನು
ಬಾಚಿಕೊಂಡಿತ್ತು. ಸುಜಿತ್ ಸಿರ್ಕರ್ ನಿರ್ದೇಶನದ ಪಿಕು
ಚಿತ್ರ ಐದು ಪ್ರಶಸ್ತಿಗಳನ್ನು ತನ್ನ
ಮುಡಿಗೇರಿಸಿಕೊಂಡರೆ, ಧೂಮ್ ಲಗಾಕಾ ಐಸಾ ಚಿತ್ರಕ್ಕೂ
ಪ್ರಶಸ್ತಿ ಲಭಿಸಿದೆ.
2015ನೆ ಸಾಲಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಬಾಜಿರಾವ್
ಮಸ್ತಾನಿ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಬಂದರೆ,
ಅತ್ಯುತ್ತಮ ನಟ ಪ್ರಶಸ್ತಿಯು ಪಿಕು ಚಿತ್ರಕ್ಕಾಗಿ
ರಣವೀರ್ ಸಿಂಗ್ರ ಪಾಲಾಗಿದೆ.
ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ, ಅತ್ಯುತ್ತಮ
ನಟಿ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ಬಾಜೀರಾವ್
ಮಸ್ತಾನಿ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಜೀವಮಾನ
ಸಾಧನ ಪ್ರಶಸ್ತಿಯು ಈ ಬಾರಿ ಹಿರಿಯ ನಟ ಮೌಶಮಿ ಚಟರ್ಜಿಗೆ
ಬಂದರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
ಸಂಜಯ್ಲೀಲಾ ಬನ್ಸಾಲಿ, ಉತ್ತಮ
ಸಂಭಾಷಣೆಗಾಗಿ ನೀರಜ್ ದ್ಯಾವನ್ಗೆ ಪ್ರಶಸ್ತಿ
ಬಂದಿದೆ.
Comments
Post a Comment