ಆಯ್ಕೆಯಾದ ಅರ್ಹ ಶಿಕ್ಷಕ ಅಭ್ಯರ್ಥಿಗಳಿಗೆ ಜ. 25, 27, 28ರಂದು ಕೌನ್ಸೆಲಿಂಗ್ @DDPI OFFICE : ನೀಡಬೇಕಾದ ದಾಖಲೆಗಳು ೧)ಅಭ್ಯರ್ಥಿಗಳ ವಿರುದ್ಧ ಕಾಯಂ ವಾಸ ಸ್ಥಳದ ವ್ಯಾಪ್ತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಪ್ರಮಾಣ ಪತ್ರ ೨)5 ಭಾವಚಿತ್ರ, ೩)ಎಲ್ಲ ಮೂಲ ದಾಖಲೆಗಳು ಹಾಗೂ ೪)ಮೂಲ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿ
9,511 ಶಾಲಾ ಶಿಕ್ಷಕರ ಆಯ್ಕೆ: ಅಂತಿಮ ಪಟ್ಟಿ ಪ್ರಕಟ
ವಿಕ ಸುದ್ದಿಲೋಕ | Jan 23, 2016, 04.00 Am
-ಅರ್ಹ ಅಭ್ಯರ್ಥಿಗಳಿಗೆ ಜ. 25, 27, 28ರಂದು
ಕೌನ್ಸೆಲಿಂಗ್-
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು
ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ
ಶಾಲಾ ಶಿಕ್ಷಕರ ಹುದ್ದೆಗಳ ಆಯ್ಕೆಗೆ ಅರ್ಹತೆ
ಪಡೆದಿರುವ 9,511 ಅಭ್ಯರ್ಥಿಗಳ ಅಂತಿಮ
ಪಟ್ಟಿಯನ್ನು ಶುಕ್ರವಾರ ಅಂತರ್ಜಾಲದಲ್ಲಿ
ಪ್ರಕಟಿಸಿದೆ.
1ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ
ಶಾಲೆಯ 2,511 ಹಾಗೂ 6ರಿಂದ 8ನೇ
ತರಗತಿವರೆಗಿನ ಹಿರಿಯ ಪ್ರಾಥಮಿಕ ಶಾಲೆಗಳ 7,000
ಹುದ್ದೆಗಳೂ ಸೇರಿದಂತೆ ಒಟ್ಟು 9,511
ಹುದ್ದೆಗಳ ಆಯ್ಕೆಗೆ ಈ ನೇಮಕ ನಡೆಯಲಿದೆ. ಅರ್ಹರಿಗೆ
ಡಿಡಿಪಿಐಗಳ ಕಚೇರಿಯಲ್ಲಿ ಜ. 25, 27 ಮತ್ತು
28ರಂದು ಕೌನ್ಸೆಲಿಂಗ್ ನಡೆಯಲಿದೆ.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪಟ್ಟಿಯನ್ನು
ಜಿಲ್ಲಾವಾರು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ
ತಾತ್ಕಾಲಿಕ ಕೌನ್ಸೆಲಿಂಗ್ನ ದಿನಾಂಕ ಹಾಗೂ ಸ್ಥಳ
ತಿಳಿಸುವಂತೆ ಆಯಾ ಡಿಡಿಪಿಐಗಳಿಗೆ ಸೂಚಿಸಲಾಗಿದೆ.
ಅಲ್ಲದೆ, ಕೌನ್ಸೆಲಿಂಗ್, ರೋಸ್ಟರ್/ ಮೆರಿಟ್ ಆಧರಿತ ಪಟ್ಟಿ
ಹಾಗೂ ಖಾಲಿ ಹುದ್ದೆಗಳ ವಿವರವನ್ನು ಆಯಾ
ಜಿಲ್ಲೆಯ ಉಪನಿರ್ದೇಶಕರ(ಆಡಳಿತ) ಕಚೇರಿಯ
ನಾಮಫಲಕದಲ್ಲಿ 25ರಂದು ಬೆಳಗ್ಗೆ 8
ಗಂಟೆಯೊಳಗೆ ಪ್ರಕಟಿಸಲು ನಿರ್ದೇಶನ
ನೀಡಲಾಗಿದೆ ಎಂದು ಆಯುಕ್ತ ಕೆ.ಎಸ್.
ಸತ್ಯಮೂರ್ತಿ ಹೊರಡಿಸಿರುವ ಆದೇಶದಲ್ಲಿ
ತಿಳಿಸಿದ್ದಾರೆ.
ಆಯ್ಕೆ ಪ್ರಾಧಿಕಾರ ಮತ್ತು ನೇಮಕಾತಿ
ಪ್ರಾಧಿಕಾರಗಳು ನೇಮಕ ಆದೇಶದ ಮಾದರಿ
ಪ್ರತಿಗಳಿಗೆ ಅನುಗುಣವಾಗಿ ಆಯ್ಕೆಯಾದವರಿಗೆ
ಆದೇಶ ಪ್ರತಿಗಳನ್ನು ನೀಡಬೇಕು. ಅರ್ಹತೆಯ
ಎಲ್ಲ ಮೂಲ ಪ್ರಮಾಣ ಪತ್ರಗಳ ನೈಜತೆಯ ಬಗ್ಗೆ
ಸಂಬಂಧಿಸಿದ ಪ್ರಾಧಿಕಾರಗಳಿಂದ ದೃಢೀಕರಣ
ಪಡೆಯುವಂತೆ ಸೂಚಿಸಲಾಗಿದೆ.
ಅಭ್ಯರ್ಥಿಗಳ ವಿರುದ್ಧ ಕಾಯಂ ವಾಸ ಸ್ಥಳದ
ವ್ಯಾಪ್ತಿಯಲ್ಲಿ ಕ್ರಿಮಿನಲ್ ಮೊಕದ್ದಮೆ
ಇಲ್ಲದಿರುವ ಪ್ರಮಾಣ ಪತ್ರ ಸಲ್ಲಿಕೆಯಾದ
ನಂತರವೇ ನೇಮಕದ ಆದೇಶ ನೀಡಬೇಕು.
5 ಭಾವಚಿತ್ರ, ಎಲ್ಲ ಮೂಲ ದಾಖಲೆಗಳು ಹಾಗೂ
ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ
ಪಡೆಯಬೇಕು.
ಮೀಸಲು ಪತ್ರಗಳ ವಿಚಾರದಲ್ಲಿ ಸಂಬಂಧಪಟ್ಟ
ಇಲಾಖೆ ಅಥವಾ ಪರಿಶೀಲನಾ ಸಮಿತಿಗಳು
ವೇಳಾಪಟ್ಟಿಯಂತೆ ಕ್ರಮಕೈಗೊಳ್ಳಬೇಕು.
ಈ ಆಯ್ಕೆ ಹಾಗೂ ನೇಮಕ ಪ್ರಕ್ರಿಯೆಯು ಕೆಎಟಿ
ಅಥವಾ ಹೈಕೋರ್ಟ್ನಲ್ಲಿ ಇರುವ ಪ್ರಕರಣಗಳಲ್ಲಿ
ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ
ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಯಾವುದೇ ವರ್ಗದ
ಗುಂಪಿನಲ್ಲಿ ಒಂದೇ ಒಂದು ಹುದ್ದೆ ಖಾಲಿ
ಇದ್ದರೆ ಮಹಿಳೆಯರನ್ನು ಪರಿಗಣಿಸಲಾಗುತ್ತದೆ.
ಒಂದು ವೇಳೆ ಮಹಿಳೆ ಲಭ್ಯವಿರದ ಪಕ್ಷದಲ್ಲಿ
ಪುರುಷರನ್ನು ಪರಿಗಣಿಸಲಾಗುತ್ತದೆ. 2015ರ ಸೆ.
15ರಂದು ರಾಜ್ಯ ಹೈಕೋರ್ಟ್ ನೀಡಿದ
ಆದೇಶದನ್ವಯ ಕರ್ನಾಟಕ ರಾಜ್ಯ ಮುಕ್ತ ವಿವಿಗಳ
ಪದವಿ/ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳು
ಈ ನೇಮಕಕ್ಕೆ ಅನ್ವಯಿಸುವುದಿಲ್ಲ ಎಂದು
ಸ್ಪಷ್ಟಪಡಿಸಲಾಗಿದೆ.
ಪಟ್ಟಿ ಇಲ್ಲಿ ಲಭ್ಯ
ಶಾಲಾ ಶಿಕ್ಷಕರ ಆಯ್ಕೆ ಪಟ್ಟಿ ವಿವರವನ್ನು
ನೋಡಬಹುದಾದ ಸಾರ್ವಜನಿಕ ಶಿಕ್ಷಣ ಇಲಾಖೆಯ
ವೆಬ್ಸೈಟ್ ವಿಳಾಸ: www.schooleducation.kar.nic.in
Comments
Post a Comment