9500 ಶಿಕ್ಷಕರ ನೇಮಕ ನಾಳೆ ಪ್ರಕಟ:-ಸಂಜೆವಾಣಿ
ಬೆಂಗಳೂರು, ಜ. ೨೨- ರಾಜ್ಯದಲ್ಲಿನ ಪ್ರಾಥಮಿಕ ಮತ್ತು
ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ
9,511 ಮಂದಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನಾಳೆ
ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಸಚಿವ ಕಿಮ್ಮನೆರತ್ನಾಕರ ಅವರು ಇಂದಿಲ್ಲಿ ತಿಳಿಸಿದರು.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಶಿಕ್ಷಕರ ಕೊರತೆ
ನೀಗಿಸುವ ನಿಟ್ಟಿನಲ್ಲಿ ಈ ಕ್ರಮ
ಕೈಗೊಳ್ಳಲಾಗುತ್ತಿದೆ ಎಂದರು.
ತಾಕೀತು
ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪೂರ್ವ ಪ್ರಾಥಮಿಕ ತರಗತಿಗಳಾದ
ಎಲ್ಕೆಜಿ ಮತ್ತು ಯುಕೆಜಿಯಿಂದಲೆ ಖಾಸಗಿ ಶಿಕ್ಷಣ
ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು
ಎಂದು ತಾಕೀತು ಮಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ತರಗತಿಯಿಂದ
ಶಿಕ್ಷಣ ಸೌಲಭ್ಯ ಕಲ್ಪಿಸಲಾಗಿದೆಯೋ ಆ ರೀತಿ ಶಿಕ್ಷಣ
ಕಾಯ್ದೆ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು
ಎಂದು ಅವರು ಹೇಳಿದರು.
1 ರಿಂದ 12ನೇ ತರಗತಿವರೆಗೂ ಬರುವ ಶೈಕ್ಷಣಿಕ
ವರ್ಷದಿಂದ ಪರಿಷ್ಕೃತ ಪಠ್ಯಕ್ರಮ ಜಾರಿಗೆ ಬರಲಿದೆ
ಎಂದರು.
ಶೂ ಭಾಗ್ಯ
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್
ನೀಡಲು ಆಯಾ ಶಾಲೆಗಳ ಅಭಿವೃದ್ಧಿ ಸಮಿತಿಗಳು
(ಬೆಟರ್ಮೆಂಟ್ ಕಮಿಟಿ) ಈಗಾಗಲೇ ಹಣ ಕಳುಹಿಸಿರುವ ಪ್ರಕ್ರಿಯೆ
ಪ್ರಾರಂಭವಾಗಿದೆ. ಇದುವರೆಗೂ ರಾಜ್ಯದಲ್ಲಿನ ಶೇ. 50 ರಷ್ಟು
ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಹಣ ಬಿಡುಗಡೆಯಾಗಿದೆ ಎಂದರು.
ಸಮಿತಿಗಳಲ್ಲಿ ಐದು ಮಂದಿ ಸದಸ್ಯರಿರುತ್ತಾರೆ. ಶಾಲಾ
ಮುಖ್ಯೋಪಾಧ್ಯರು ಹಾಗೂ ಸಮಿತಿ ಸದಸ್ಯರು ಶೂ ಮತ್ತುಸಾಕ್ಸ್ಗಳನ್ನು
ಖರೀದಿಸುವ ನಿರ್ಣಯ ಕೈಗೊಳ್ಳುತ್ತಾರೆ.
ಮೂರು ತಿಂಗಳಲ್ಲಿ ಖರೀದಿ ಪ್ರಕ್ರಿಯೆ ಮುಗಿಸಿ
ರಸೀದಿಗಳನ್ನು ಇಲಾಖೆಗೆ ಕಳುಹಿಸಬೇಕು ಎಂದು
ಸೂಚಿಸಲಾಗಿದೆ ಎಂದರು.
Comments
Post a Comment